ದೇವದಾಸಿಯರ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ

ಕೊಪ್ಪಳ ಏ. 29 : ದೇವದಾಸಿಯವರ ಮಕ್ಕಳ ಮದುವೆಗಾಗಿ ಸರ್ಕಾರದಿಂದ ಪ್ರೊÃತ್ಸಾಹ ಧನವನ್ನು ನೀಡಲಾಗುತ್ತದೆ ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಕಲ್ಲೆÃಶ್‌ರವರು ತಿಳಿಸಿದ್ದಾರೆ.  

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗುರುತಿಸಲ್ಪಟ್ಟ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೇವದಾಸಿಯರ ಗಂಡು ಮಕ್ಕಳು ಸ್ವಜಾತಿ ಮತ್ತು ಇತರೆ ಜಾತಿಯ ಹುಡಗಿಯನ್ನು ವಿವಾಹವಾದಲ್ಲಿ 3 ಲಕ್ಷ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದೇವದಾಸಿಯರ ಹೆಣ್ಣು ಮಕ್ಕಳು ಸ್ವಜಾತಿ ಅಥವಾ ಇತರೆ ಜಾತಿಯ ಹುಡಗನನ್ನು ವಿವಾಹವಾದ ಪ್ರಕರಣಗಳಲ್ಲಿ 5 ಲಕ್ಷದ ವರೆಗೆ ಸರ್ಕಾರದಿಂದ ವಿವಾಹವಾದವರಿಗೆ ಸರ್ಕಾರದಿಂದ ಪ್ರೊÃತ್ಸಾಹ ಧನವನ್ನು ವಿತರಿಸಲು ಆದೇಶಸಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಮತ್ತು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ ಮತ್ತು ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಕುಷ್ಟಗಿ, ಗಂಗಾವತಿ ಸಂಪರ್ಕಿಸಬಹುದು.  

Please follow and like us:
error