ದೆಹಲಿ ರೈತರ ಹೋರಾಟ ಬೆಂಬಲಿಸಿ AIdyo, RKS ಜಂಟಿ ಗ್ರಾಮ ಸಭೆ

Koppal ಕೇಂದ್ರ ಸರ್ಕಾರದ ರೈತ ವಿರೋಧಿ ಕಾರ್ಪೊರೇಟ್ ಪರ ನೀತಿಗಳನ್ನು ಧಿಕ್ಕರಿಸಿ.
ದೆಹಲಿಯಲ್ಲಿ ರೈತರ ಹೋರಾಟವನ್ನು ಬೆಂಬಲಿಸಿ. ಕೇಂದ್ರ ಸರಕಾರ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳ ಬಗ್ಗೆ ಚರ್ಚೆಯನ್ನು ವಿವಿಧ ಹಳ್ಳಿಗಳಲ್ಲಿ ಎಐಡಿವೈಓ ಹಾಗೂ (ಆರ್ ಕೆ ಎಸ್) ರೈತ ಕೃಷಿ ಕಾರ್ಮಿಕ ಸಂಘಟನೆ ಜಂಟಿಯಾಗಿ ,ಬೂದುಗುಂಪ ದನಕನದೊಡ್ಡಿ ಹಳ್ಳಿಗಳಲ್ಲಿ ಗ್ರಾಮ ಸಭೆ ಮಾಡಲಾಯಿತು. ಗ್ರಾಮಸಭೆಯಲ್ಲಿ ಎಐಡಿವೈಒ ಜಿಲ್ಲಾ ಸಂಚಾಲಕರಾದ ಶರಣು ಪಾಟೀಲ್ ಮಾತನಾಡುತ್ತ
ದೆಹಲಿಯ ಸಿಂಘು ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ತಿಂಗಳು ಪೂರೈಸಿ ರೈತರ ಹೋರಾಟ ದೇಶದ ಮೂಲೆ ಮೂಲೆಗೂ ವ್ಯಾಪಿಸುತ್ತಿದೆ. ಆದರೆ ರೈತರ ಪರ ಅಂತ ಭಾಷಣ ಮಾಡುವ ಮೋದಿಯವರ ಮನಸು ಕರಗುತ್ತಿಲ್ಲ . ಪದೇ ಪದೇ ರೈತರನ್ನು ಪ್ರತಿಪಕ್ಷಗಳು ಸುಳ್ಳು ಹೇಳಿ ದಿಕ್ಕುತಪ್ಪಿಸುತ್ತಿವೆ ಎನ್ನುತ್ತ ರೈತರು ಸ್ವಂತ ಆಲೋಚನೆಯಿಲ್ಲದವರು ಎಂಬಂತೆ ಚಿತ್ರಿಸುವ ಮೂಲಕ ನರೇಂದ್ರ ಮೋದಿಯವರು ಅವಮಾನ ಎಸಗುತ್ತಲೇ ಇದ್ದಾರೆ.ರೈತರನ್ನು ಭಯೋತ್ಪಾದಕರಂತೆ, ಕಲಿಸ್ತಾನಿಗಳು ಅವಮಾನಿಸಲಾಗುತ್ತಿದೆ.ಇದು ಹೋರಾಟವನ್ನು ದಿಕ್ಕುತಪ್ಪಿಸುವ ಹುನ್ನಾರವಲ್ಲದೆ ಬೇರೇನೂ ಅಲ್ಲ. ರೈತರ ಬೇಡವಾದ ಈ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಪ್ರಸ್ತಾಪಿತ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದು ಮತ್ತು ಕನಿಷ್ಟ ಬೆಂಬಲ ಬೆಲೆ ಖಾತ್ರಿಗಾಗಿ ಕಾಯ್ದೆ ತರಬೇಕು.ಈ ಬೇಡಿಕೆಗಳನ್ನು ಇಟ್ಟುಕೊಂಡು ದೆಹಲಿಯ ಗಡಿಗಳಲ್ಲಿ, ಕೊರೆಯುವ ಚಳಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ ವಿವಿಧ ರಾಜ್ಯ ವಿವಿಧ ದೇಶದಲ್ಲಿ ಪ್ರತಿಭಟನೆ ಆಕ್ರೋಶ ಧ್ವನಿ ಮುಗಿಲುಮುಟ್ಟಿದೆ. ಹಠಮಾರಿ ಸರಕಾರಕ್ಕೆ ಅರ್ಥವಾಗುತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿ ಕಾನೂನುಗಳನ್ನು ಸಮರ್ಥನೆ ಮಾಡುತ್ತಿದ್ದಾರೆ.ಇದರಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ ಇದು ರೈತ ವಿರುದ್ಧವಿರುವ ಸರ್ಕಾರವೆಂದು. ಕೆಲವೇ ಬಂಡವಾಳಶಾಹಿಗಳ ಲಾಭಕ್ಕಾಗಿ ಕೋಟ್ಯಂತರ ರೈತರ ಮರಣ ಶಾಸನ ಬರೆಯಲು ಈ ಕಾಯಿದೆಗಳನ್ನು ಜಾರಿಗೊಳಿಸಲಾಗುತ್ತಿದೆ.ಆದರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರಜ್ಞಾವಂತ ಧೀರ ರೈತರು,ಸಾವಿರಾರು ಮಹಿಳೆಯರು, ಮಕ್ಕಳು, ಮತ್ತು ಕೃಷಿ ಕಾರ್ಮಿಕರು, ಕ್ರೀಡಾಪಟುಗಳು ಎಂದಿನಂತೆ ರೈತ ಆಂದೋಲನ ಸಾಗರಕ್ಕೆ ದುಮುಕುತ್ತಿದ್ದಾರೆ.ಮೋದಿ ಸರ್ಕಾರದ ವಿರುದ್ಧ ಟಿಕ್ರಿ ಗಡಿಯಲ್ಲಿ ಧರಣಿ ಕುಳಿತ ಮಹಿಳೆಯರು ‘We Are Not Mislead’ ಎಂಬ ಪ್ಲಕಾರ್ಡು ಹಿಡಿದಿದ್ದಾರೆ. ‘ನಾವು ದೆಹಲಿಗೆ ಬಂದು ಒಂದು ತಿಂಗಳಾಯಿತು. ಸರ್ಕಾರ ಈ ಕಾನೂನುಗಳನ್ನು ವಾಪಸ್ ಪಡೆಯಬೇಕು. ಇದು ಬೇಗ ಸಂಭವಿಸಿದ್ದಲ್ಲಿ ಆಗ ನಾವು ನಮ್ಮ ಊರುಗಳಿಗೆ ಹಿಂದಿರುಗಬಹುದು’ ಎನ್ನುವ ಈ ಮಹಿಳೆಯರ ಕೂಗು ಮೋದಿಯವರಿಗೆ ಕೇಳಿಸತ್ತಿಲ್ಲ ? ಕೇಳಿದರೂ ಅವರು ಸ್ಪಂದಿಸುತ್ತಿಲ್ಲ. ಪದೇ ಪದೇ ಸುಳ್ಳನ್ನೇ ಸತ್ಯವೆಂದು ಬಿಂಬಿಸಿ ರೈತರ ಹೋರಾಟಕ್ಕೆ ಅವಮಾನವೆಸಗಲಾಗಿದೆ. ರೈತರು ರೊಚ್ಚಿಗೇಳುವಂತೆ ಮಾಡಿ ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ನೀಚತನ ದೇಶದ ಅನ್ನದಾತರಿಗೆ ಅರ್ಥವಾಗಿದೆ. ಇದುವರೆಗೂ ರೈತ ಹೋರಾಟ ಆರಂಭವಾದಾಗಿನಿಂದ 5 ಬಾರಿ ಮಾತುಕತೆ ನಡೆದಿದ್ದು ಅವೆಲ್ಲವೂ ವಿಫಲವಾಗಿವೆ.ರೈತರು ಜೀವ ಬಿಟ್ಟೇವೆ ಕಾನೂನುಗಳು ಹಿಂಪಡೆವವರೆಗೂ ಹಿಂದೆ ಸರಿಯುವ ಮಾತೇಯಿಲ್ಲ ದೃಢ ಸಂಕಲ್ಪ ತೊಟ್ಟಿದ್ದಾರೆ.
ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದು ಈಗಾಗಲೇ ಪಂಜಾಬ್‌ನಲ್ಲಿ ಜಿಯೋ ಟವರ್‌ಗಳಿಗೆ ವಿದ್ಯುತ್ ಸರಬರಾಜು ತಡೆಹಿಡಿಯುವಲ್ಲಿ ರೈತರು ಸಫಲರಾಗಿದ್ದಾರೆ. ಹರಿಯಾಣದಲ್ಲಿ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡನ ಮೇಲೆ ಮುತ್ತಿಗೆ ಹಾಕಿದ್ದರಿಂದ ಆತ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಇನ್ನು ಮುಖ್ಯ ರಸ್ತೆಯ ಟೋಲ್‌ಗೇಟ್‌ಗಳನ್ನು ವಶಕ್ಕೆ ಪಡೆದು ಟೋಲ್ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ ಹಂತ ಹಂತವಾಗಿ ಹೋರಾಟವನ್ನು ಜೀವಂತವಿಡಲು ರೈತರು ಬಯಸಿದ್ದಾರೆ. ಮೋದಿಯವರು ಮನ್‌ ಕಿ ಬಾತ್ ಮುಗಿಯುವವರೆಗೂ ತಟ್ಟೆ ಬಾರಿಸಲು ರೈತರು ಕರೆ ನೀಡಿದ್ದಾರೆ.
ಇದೊಂದು ಐತಿಹಾಸಿಕ ರೈತ ಹೋರಾಟವಾಗಿದೆ. ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳುವ ಜೊತೆಗೆ ದೆಹಲಿಯ ಶಾಹೀನ್‌ಬಾಗ್‌ನಲ್ಲಿ 100ಕ್ಕೂ ಹೆಚ್ಚು ದಿನ ಪ್ರತಿಭಟನೆ ದಾಖಲಾಗಿ ವಿಶ್ವದ ಗಮನ ಸೆಳೆದಿತ್ತು. ಆದರೆ ಆ ನಂತರ ಆವರಿಸಿದ ಕೊರೊನಾ ಸಾಂಕ್ರಾಮಿಕವು ಹೋರಾಟಗಳಿಗೆ ಬ್ರೇಕ್ ಹಾಕಿತ್ತು. ಆದರೆ ಮೋದಿ ಸರ್ಕಾರ ಈ ದುರಂತ ಸಂದರ್ಭದಲ್ಲಿಯೇ ಈ ರೀತಿಯ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಹಾಗಾಗಿ ಈಗ ವರ್ಷದ ಕೊನೆಯಲ್ಲಿಯೂ ಸಹ ಮತ್ತೆ ರೈತರು ಬೀದಿಗೆ ಬಂದು ದೊಡ್ಡ ಮಟ್ಟದಲ್ಲಿ ಹೋರಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಮೂಲಕ ಅದನ್ನು ದಮನ ಮಾಡಲು ಮೋದಿ ಸರ್ಕಾರ ಮುಂದಾದರೂ ಅದು ಸಾಧ್ಯವಾಗಿಲ್ಲ. ಈಗ ರೂಪಾಂತರ ಕೊರೊನಾ ವೈರಸ್ ನೆಪ ಹೇಳಿ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗುತ್ತಿದೆ. ಆದರೆ ದಿಟ್ಟ ರೈತರು ಅದಕ್ಕೆ ಅವಕಾಶ ಕೊಡದೇ ಶಾಂತಿಯುತ ಹೋರಾಟ ಮುಂದುವರೆಸಿದ್ದಾರೆ ಅವರ ಹೋರಾಟದ ಜೊತೆ ನಾವಿದ್ದೇವೆ ಅವರ ಹೋರಾಟ ಹೊಸ ಇತಿಹಾಸ ಬರೆಯಲಿದೆ ಎಂದು ಶರಣು ಪಾಟೀಲ್ ಹೇಳಿದರು.ಈ ಗ್ರಾಮ ಸಭೆ ಬೂದುಗುಂಪ , ದನಕನದೊಡ್ಡಿ ,ಹಳ್ಳಿಯಲ್ಲಿ ನೂರಾರು ರೈತರು ದೆಹಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ನಾವೂ ಈ ನ್ಯಾಯಯುತ ಹೋರಾಟಕ್ಕೆ ಸಿದ್ದರಿದ್ದೇವೆ ಎಂದರು. ಧೀರ ರೈತರ ಸಾವಿಗೆ ಮೌನ ಶ್ರದ್ದಾನಂಜಲಿ ಮಾಡಲಾಯಿತು.ಈ ಗ್ರಾಮಸಭೆಯಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ರೈತರ ಹೋರಾಟದ ಹಾಡುಗಳನ್ನು ಹಾಡಿದರು. ಕರ್ನಾಟಕ ರಾಜ್ಯ ರೈತ ಸಂಘಟನೆಯಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ, ಎಐಡಿವೈಒ ಸಂಘದ ಸದಸ್ಯರಾದ ಮೌಲಾಸಾಬ, ಹುಲ್ಲೇಶ, ಪ್ರಭು, ರವಿ,ಕಾಸಿಮ್, ಹಾಗೂ ಊರಿನ ರೈತ ಸಂಘದ ಮುಖಂಡರಾದ ಫಕೀರಪ್ಪ ಒಂಟಿಗಾರ ಹನುಮಂತಪ್ಪ, ಹನುಮಂತಪ್ಪ ಕುಷ್ಟಗಿ, ಹನುಮಂತ ಕೋರಿ, ಕಳಸಪ್ಪ ಕೋರಿ, ಭೀಮಣ್ಣ ಕತ್ತಿ, ಗಿಡ್ಡಪ್ಪ ಕೋರಿ, ನಿಂಗಪ್ಪ, ಮುಂತಾದವರು ಭಾಗವಹಿಸಿದ್ದರು.

Please follow and like us:
error