ದಾಖಲೆ ಮತಗಳ ಅಂತರದಿಂದ ನಮೋಶಿ ಗೆಲುವು- ಅಮರೇಶ ಕರಡಿ ವಿಶ್ವಾಸ

ಕೊಪ್ಪಳ:
ಸದಾ ಶಿಕ್ಷಕರ ಪರ ಕಾಳಜಿ ಹೊಂದಿರುವ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಶತಸಿದ್ಧ ಎಂದು ಬಿಜೆಪಿ ಮುಖಂಡ, ಕೆಡಿಪಿ ಸದಸ್ಯ ಅಮರೇಶ ಕರಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಶಿಕ್ಷಕರ ಮತಕ್ಷೇತ್ರದ ಚುನಾವಣಾ ಪ್ರಚಾರ ನಿಮಿತ್ತ ಕೊಪ್ಪಳ ನಗರದಲ್ಲಿ ಪ್ರಚಾರ ಸಭೆಯಲ್ಲಿ ಮಂಗಳವಾರ ಮಾತನಾಡಿದರು.
ನಮೋಶಿಯವರು ಈಗಾಗಲೆ ಸತತ ಮೂರು ಬಾರಿ ವಿಪ ಸದಸ್ಯರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಶಿಕ್ಷಕರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸದಾ ಧ್ವನಿ ಎತ್ತಿದ್ದಾರೆ. ಈ ಭಾಗದ ಶಿಕ್ಷಕರ ಕುಂದುಕೊರತೆಗಳ ಬಗ್ಗೆ ಗಮನಹರಿಸಿ ಪರಿಹರಿಸಿದ ಉದಾಹರಣೆಗಳು ಸಾಕಷ್ಟಯ ಇವೆ. ನಮೋಶಿಯವರಂತ ಹಿರಿಯರು, ಅನುಭವಿಗಳು ಮೇಲ್ಮನೆಯಲ್ಲಿ ಇರುವುದರಿಂದ ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರ ಕಷ್ಟಗಳ ಮೇಲೆ‌ ಬೆಳಕು ಚೆಲ್ಲಬಹುದು. ಕೊಪ್ಪಳ ಜಿಲ್ಲೆಯಲ್ಲಿನ ಶಿಕ್ಷಕರ ಯಾವುದೇ ಸಮಸ್ಯೆ ಇದ್ದರೂ ಅವರು ತಡಮಾಡದೆ ಪರಿಹರಿಸಿದ್ದಾರೆ. ಕಳೆದ ಬಾರಿ ಅಲ್ಪಮತಗಳ‌ ಅಂತರದಲ್ಲಿ ಸೋಲಬೇಕಾಯಿತು. ಈ ಬಾರಿ ದಾಖಲೆ‌ ಮತಗಳ ಅಂತದರಿಂದ ಗೆದ್ದೇ ಗೆಲ್ಲುತ್ತಾರೆ ಎಂದು ತಿಳಿಸಿದರು.
ಶಿಕ್ಷಕರಿಂದ ಮತ ಪಡೆದು ಆಯ್ಕೆಯಾಗಿ ಹೋದ ಶರಣಪ್ಪ ಮಟ್ಟೂರ ಅವರು ಇದುವರೆಗೂ ಎರಡ್ಮೂರು ಬಾರಿ ಮಾತ್ರ ಜಿಲ್ಲೆಗೆ ಆಗಮಿಸಿದ್ದಾರೆ. ಇಲ್ಲಿನ ಸಮಸ್ಯೆಗಳತ್ತ ಒಮ್ಮೆಯೂ ಧ್ವನಿ ಎತ್ತಿಲ್ಲ. ಆದರೆ ನಮೋಶಿ ಅವರು ಜನರ ಒಡನಾಡಿಯಾಗಿದ್ದಾರೆ. ಅಧಿಕಾರ ಇಲ್ಲದಿದ್ದಾಗಲೂ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಇಂತಹ ಜನಸ್ನೇಹಿ, ಶಿಕ್ಷಕ ಸ್ನೇಹಿ ವ್ಯಕ್ತಿ ಆಯ್ಕೆಯಾದರೆ ಬರುವ ದಿನಗಳಲ್ಲಿ ಶಿಕ್ಷಕರ ಎಲ್ಲಾ ಬೇಡಿಕೆಗಳು ಈಡೇರಿವುದಲ್ಲದೆ ಶಿಕ್ಷಕರ ಧ್ವನಿಯಾಗಿ ಮೇಲ್ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಸಹಕಾರ ಕ್ಷೇತ್ರದಲ್ಲೂ ಇವರು ಸಾಕಷ್ಟು ಕೆಲಸ ಮಾಡಿದ್ದಾರೆ. ಇಂತಹ ಓರ್ವ ನಾಯಕನನ್ನು ನಾವು ಆಯ್ಕೆ ಮಾಡುವುದರಿಂದ ನಿಜವಾದ ಶಿಕ್ಷಕ ಪರ ಕಾಳಜಿ ಹೊಂದಿದ ಹಿರಿಯರನ್ನು ಗೆಲ್ಲಿಸಿದಂತಾಗುತ್ತದೆ. ಹೀಗಾಗಿ ಅ. 28ರಂದು ನಡೆಯುವ ಚುನಾವಣೆಯಲ್ಲಿ ನಮೋಶಿ ಅವರಿಗೆ ಹೆಚ್ಚು ಮತಗಳನ್ನು ನೀಡಿ ಆಯ್ಕೆ ಮಾಡಬೇಕು ಎಂದು ಶಿಕ್ಷಕ‌ ಸಮುದಾಯದಲ್ಲಿ ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಅಸ್ತಿತ್ವದಲ್ಕಿದೆ. ಸುಭದ್ರ ಆಡಳಿತ ನೀಡಬೇಕಿದೆ. ಅನೇಕ‌ ಜನಪರ ಮಸೂದೆಗಳನ್ನು ಜಾರಿಗೊಳಿಸಬೇಕಿದೆ. ಅದಕ್ಕಾಗಿ ಮೇಲ್ಮನೆಯಲ್ಲೂ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಿದೆ. ಆ ಮೂಲಕ ಬುದ್ಧಿವಂತ ಮತದಾರರಾದ ತಾವುಗಳು ಒಂದು ಉತ್ತಮ ಸರ್ಕಾರಕ್ಕೆ ಬೆಂಬಲಾರ್ಥವಾಗಿ ನಮೋಶಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಭರ್ಜರಿ ಗೆಲುವು ಸಿಗುವಂತೆ ಮಾಡಬೇಕು ಎಂದು ಕೋರಿದರು.

ಪ್ರಚಾರ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಮೈನಳ್ಳಿ, ಎಪಿಎಂಸಿ ಸದಸ್ಯ ಬಸವರಾಜ್ ಈಶ್ವರಗೌಡ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುನೀಲ್ ಹೇಸರೂರು, ಯುವ ಮೋರ್ಚಾದ ರವಿಚಂದ್ರನ್ ಮಾಲಿಪಾಟೀಲ್ ಸೇರಿದಂತೆ ಮತದಾರರಾದ ಪ್ರೌಢಶಾಲಾ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು. ನಂತರ ಪ್ರತಿಯೊಬ್ಬ ಶಿಕ್ಷಕ ಮತದಾರರನ್ನು ಭೇಟಿ ಮಾಡಿ ಪಕ್ಷದ ಆಬ್ಯರ್ಥಿ ಪರ ಕರಪತ್ರ ಹಂಚಿದರು.

Please follow and like us:
error