ದಲಿತ ಯುವಕರ ಮೇಲೆ ಸವರ್ಣಿಯರ ಹಲ್ಲೆ, ಕ್ಷೌರ ಮಾಡಲು ನಿರಾಕರಣೆ

ಕನ್ನಡನೆಟ್ :

ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಇಬ್ಬರು ಯುವಕರು ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಮಲ್ಲೇಶಪ್ಪ ಶ್ಯಾಗೋಟಿ ಅವರ ಮನೆ ಪಕ್ಕದ ಖಾಲಿ ಜಾಗದಲ್ಲಿ ಗ್ರಾಮದ ಸವರ್ಣಿಯರಿಗೆ ಮಲ್ಲಪ್ಪ ಹಡಪದ, ಕಳಕಪ್ಪ ಹಡಪದ ಕ್ಷೌರ ಮಾಡುತ್ತಿದ್ದರು. ಈ ವೇಳೆ ನಮಗೂ ಕಟ್ಟಿಂಗ್ ಮಾಡಬೇಕು ಎಂದು ದಲಿತ ಸಮುದಾಯದ ಸಣ್ಣಹನುಮಂತ, ಬಸವರಾಜ ಇಬ್ಬರು ಸೇರಿ ಕೇಳಿಕೊಂಡಿದ್ದಾರೆ. ನಿಮಗೆ ಕಟ್ಟಿಂಗ್ ಮಾಡಲಾಗುವುದಿಲ್ಲ ಎಂದು ನಿರಾಕರಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಸ್ಥಳದಲ್ಲಿಯೇ ಇದ್ದ ೧೪ ಜನ ಸವರ್ಣಿಯರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಘಟನೆ ಬಳಿಕ ಅವಮಾನ ತಾಳಲಾರದೇ ಇದೇ ವಿಷಯಕ್ಕೆ ಸಂಬಂಧಿಸಿ ಮನನೊಂದು ಇಬ್ಬರೂ ಯುವಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರದಂದು ಯುವಕರ ಸಂಬಂಧಿ ದೇವಪ್ಪ ನೀಡಿದ ದೂರಿನ ಅನ್ವಯ ಯಲಬುರ್ಗಾ ಪ್ರಕರಣ ದಾಖಲಾಗಿದೆ.

16 ಜನರ ವಿರುದ್ಧ ಪ್ರಕರಣ

ಘಟನೆಗೆ ಸಂಬಂಧಿಸಿದಂತೆ ದೌರ್ಜನ್ಯ ಎಸಗಿದ ಮಲ್ಲಪ್ಪ ಹಡಪದ, ಕಳಕಪ್ಪ ಹಡಪದ, ನಾಗಪ್ಪ ನಾಗನಗೌಡ, ಬಸವರಾಜ ಜಿರಿಗಿ, ಶಿವಪ್ಪ ಹನುಮಂತಗೌಡ್ರ, ಶರಣಪ್ಪ ಪೊಲೀಸ್ ಪಾಟೀಲ್, ಬಸನಗೌಡ ನಾಗನಗೌಡ್ರ, ಶಿವಪ್ಪ ಕೆಂಚನಗೌಡ್ರ, ಬಸನಗೌಡ ಅರಳಿ, ಪ್ರವೀಣ ಶಿರೂರು, ಈರಯ್ಯ ಬಳಗೇರಿ, ಪರ್ವತಗೌಡ ಪೊಲೀಸ್ ಪಾಟೀಲ್, ಯಲ್ಲಪ್ಪ ತೋಪಲಕಟ್ಟಿ, ಶಿವರಾಜ ಪೊಲೀಸ್ ಪಾಟೀಲ್, ಈರಣ್ಣ ತೊಂಡಿಹಾಳ, ಸುರೇಶಗೌಡ ಭೀಮನಗೌಡ್ರ ವಿರುದ್ಧ ಪ್ರಕರಣ ದಾಖಲಾಗಿದೆ.

Please follow and like us:
error