ತುಂಗಭದ್ರ : ಹಿಂಗಾರು ಹಂಗಾಮಿಗೆ ನೀರು
ಕಾಲುವೆಗಳಿಗೆ ನೀರು ಏಪ್ರಿಲ್ 01 ರಿಂದ ಮುಂದುವರಿಕೆ


ಕೊಪ್ಪಳ, ): 2020-21 ನೇ ಸಾಲಿನ ತುಂಗಭದ್ರ ಕಾಲುವೆಗೆ ಹಿಂಗಾರು ಹಂಗಾಮಿಗೆ ನೀರೊದಗಿಸುವ ಸಂಬAಧವಾಗಿ ಏಪ್ರಿಲ್ 01 ರಿಂದ ನದಿಯ ಎಡದಂತೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಿಕೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕ.ನೀ.ನಿ.ನಿ, ತುಂಗಭದ್ರ ಯೋಜನಾ ವೃತ್ತ, ಮುನಿರಾಬಾದ್‌ನ ಅಧೀಕ್ಷಕ ಅಭಿಯಂತರರಾದ ಎಲ್ ಬಸವರಾಜ್ ಅವರು ತಿಳಿಸಿದ್ದಾರೆ.
 ಕರ್ನಾಟಕ ಸರ್ಕಾರದ ಮೂಲಭೂತ ಸೌಲಭ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಆನಂದ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರ ಉಪಸ್ಥಿತಿಯಲ್ಲಿ ಇತ್ತೀಚೆಗೆ (2020ರ ನವೆಂಬರ್ 21 ರಂದು) ಕಾಡಾ ಕಚೇರಿಯಲ್ಲಿ ಜರುಗಿದ 114ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ತುಂಗಭದ್ರಾ ಯೋಜನೆಯ ವಿವಿಧ ಕಾಲುವೆಗಳಿಂದ ಹಿಂಗಾರು ಹಂಗಾಮಿನ ಬೆಳೆಗಳಿಗೆ 2021 ಮಾರ್ಚ್ 31 ರವರೆಗೆ ಹರಿಸಲು ನಿರ್ಧರಿಸಲಾಗಿತ್ತು.
 ಪ್ರಸ್ತುತ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಹೆಚ್ಚುವರಿ ನೀರಿನ ಅವಶ್ಯವಿದ್ದು, ಸರ್ಕಾರದ ಆದೇಶದಂತೆ ಭದ್ರಾ ಜಲಾಶಯದಿಂದ ಸುಮಾರು 1.60 ಟಿ.ಎಂ.ಸಿ ನೀರನ್ನು ಹರಿಸಲಾಗುತ್ತಿದೆ. ಈ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದು ಸಂಗ್ರಹವಾಗಬಹುದಾದ ಪ್ರಮಾಣವನ್ನು ನಿರೀಕ್ಷಿಸಿ ಹಾಗೂ ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಆನಂದ್ ಸಿಂಗ್ ಅವರು ಸಮ್ಮತಿಸಿರುತ್ತಾರೆ. ಅದರಂತೆ ತುಂಗಭದ್ರ ನದಿಯ ವಿವಿಧ ಕಾಲುವೆಗಳಲ್ಲಿ ನೀರು ಹರಿಸುವಿಕೆಯನ್ನು ಪರಿಷ್ಕೃತ ವೇಳಾಪಟ್ಟಿಯಂತೆ ಮುಂದುವರಿಸಲಾಗುವುದು.
ತುಂಗಭದ್ರಾ ಎಡದಂಡೆ ಕಾಲುವೆ;
 ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರಿಲ್ 01 ರಿಂದ 10 ರವರೆಗೆ ನೀರಾವರಿಗಾಗಿ (ಲಭ್ಯತೆಯನುಸಾರ) ಹಾಗೂ ಏ. 11 ರಿಂದ 20 ರವರೆಗೆ ಕುಡಿಯುವ ನೀರಿಗಾಗಿ ಕಾಲುವೆಯಲ್ಲಿ ನೀರು ಹರಿಸುವಿಕೆಯನ್ನು ಮುಂದುವರೆಸಲಾಗುವುದು (ಎಡದಂಡೆ ವಿಜಯನಗರ ಕಾಲುವೆಗಳು ಒಳಗೊಂಡAತೆ).
ತುAಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ;
 ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ. 01 ರಿಂದ 10 ರವರೆಗೆ ನೀರಾವರಿಗಾಗಿ (ಲಭ್ಯತೆಯನುಸಾರ) ಕುಡಿಯುವ ನೀರು ಒಳಗೊಂಡAತೆ ಕಾಲುವೆಯಲ್ಲಿ ನೀರು ಹರಿಸುವಿಕೆಯನ್ನು ಮುಂದುವರೆಸಲಾಗುವುದು.
ರಾಯಬಸವಣ್ಣ ಕಾಲುವೆ;
 ರಾಯ ಬಸವಣ್ಣ ಕಾಲುವೆಯ ವೇಳಾಪಟ್ಟಿಯಲ್ಲಿ ಮತ್ತು ಹರಿವಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
 ವಿತರಣಾ ಕಾಲುವೆಗಳಲ್ಲಿ ಲಭ್ಯವಾಗುವ ನೀರಿಗೆ ಅನುಗುಣವಾಗಿ ಹರಿವನ್ನು ನಿಯಂತ್ರಿಸಲಾಗುವುದು. ಪ್ರಸ್ತುತ ಜಲಾಶಯದಲ್ಲಿ ಲಭ್ಯವಾಗುವ ನೀರಿಗೆ ಅನುಗುಣವಾಗಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ರೈತರು ನೀರು ಪೋಲಾಗದಂತೆ ಸಮರ್ಪಕ ನೀರು ನಿರ್ವಹಣೆಗೆ ಅಧಿಕಾರಿಗಳೊಡನೆ ಸಹಕರಿಸಲು ರೈತಬಾಂಧವರಲ್ಲಿ ಕೋರಿದ್ದಾರೆ.

Please follow and like us:
error