ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ ಅಕ್ರಮ ಪೈಪ್‌ಲೈನ್ ನೀರು ಬಳಸುವವರ ವಿರುದ್ಧ ಕ್ರಮಕ್ಕೆ ಡಿಸಿ ಸೂಚನೆ


ಕೊಪ್ಪಳ, : ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯ ಕಾಲುವೆಯ ಅಕ್ರಮವಾಗಿ ಪೈಪ್‌ಲೈನ್ ಕಟ್ಟಡಗಳ ಪಂಪ್‌ಹೌಸ್‌ಗಳಿAದ ನೀರು ಬಳಕೆಗೆ ಕಡಿವಾಣ ಹಾಕಿ, ನಂತರ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಶ್ ಕಿಶೋರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ತುಂಗಭದ್ರ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯಿಂದ ಅಕ್ರಮ ಪೈಪ್‌ಲೈನ್ ಕಟ್ಟಡಗಳ ಪಂಪ್‌ಹೌಸ್‌ನ್ನು ತೆರೆವು ಗೊಳಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
       ತುಂಗಭದ್ರಾ ಎಡದಂಡೆ ಕಾಲುವೆಯ ನೀರನ್ನು ಯಾವುದೇ ಸೂಕ್ತ ದಾಖಲೆಗಳು ಇಲ್ಲದೆ ಅಕ್ರಮವಾಗಿ ಪೈಪ್‌ಲೈನ್ ಕಟ್ಟಡಗಳ ಪಂಪ್‌ಹೌಸ್‌ಗಳನ್ನು ಬಳಸಿಕೊಂಡು ಅಕ್ರಮ ನೀರು ಬಳಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಬೇಕು.  ಕಡಿತ ಗೊಳಿಸಿದ ವಿದ್ಯುತ್‌ನ ದಾಖಲೆಗಳ ಪ್ರತಿಯನ್ನು ನಮ್ಮ ಗಮನಕ್ಕೆ ತರಬೇಕು.  ನೀರಾವರಿ ಇಲಾಖೆಯ ಸಿಬ್ಬಂದಿಗಳು ಮಧ್ಯರಾತ್ರಿಯಲ್ಲಿ ಅಕ್ರವಾಗಿ ನೀರನ್ನು ಉಪಯೋಗಿಸುವವರ ವಿವರವನ್ನು ಕಲೆ ಹಾಕಬೇಕು.  ಅಂತರವ ವಿರುದ್ದ ಮೊದಲು ಮಾಹಿತಿಯನ್ನು ನೀಡಿ ಮತ್ತು ಇಲಾಖೆ ಅಧಿಕಾರಿಗಳು ಗ್ರಾ.ಪಂ. ಹಂತದಲ್ಲಿ ತಂಡ ರಚಿಸಿಕೊಂಡು ಕಾರ್ಯ ನಿರ್ವಹಿಸಬೇಕು.  ಕಂದಾಯ ಇಲಾಖೆ, ಜೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ ನಾಲ್ಕು ಇಲಾಖೆಯವರು ಕೂಡಿ ಅಕ್ರಮ ನೀರು ಬಳಕೆಗೆ ಕಡಿವಾಣ ಹಾಕುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.  
ಈಗಾಗಲೇ ನಾನ್ ರಿಜಿಸ್ಟಾçರ್ ಅಕ್ರಮವಾಗಿ ನೀರನ್ನು ಬಳಸುವವರ ವಿರುದ್ಧ ಕ್ರಮಕೈಗೊಳ್ಳಬೇಕು.  ನಂತರ ರಿಜಿಸ್ಟಾçರ್ ಮಾಡಿಕೊಂಡ ರೈತರ ಕೃಷಿಹೊಂಡಗಳಿAದ ನೀರನ್ನು ಬಳಸಿಕೊಳ್ಳುವವರ ವಿರುದ್ಧವೂ ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.  ಈಗಾಗಲೇ ರಾಯಚೂರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಹಿನ್ನೆಲೆಯಲ್ಲಿ ಅಕ್ರಮವಾಗಿ ನೀರನ್ನು ಬಳಸುವವರ ವಿರುದ್ಧವಾಗಿ ಒಟ್ಟು 21 ಎಫ್.ಐ.ಆರ್. ದಾಖಲಿಸಿ ಅಕ್ರಮವಾಗಿ ನೀರನ್ನು ಬಳಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲೆಯ ರೈತರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
        ಕಾಲುವೆಗಳಿಗೆ ಇದೇ ಜು.25ರಿಂದ ಇಲ್ಲಿಯವರೆಗೆ ನೀರು ಎಷ್ಟು ಬಿಡುಗಡೆ ಮಾಡಿದ್ದೀರಿ ಎನ್ನುವ ಮಾಹಿತಿಯನ್ನು ನೀಡುವುದರ ಜೊತೆಗೆ ಅಕ್ರಮ ಪೈಪ್ ಲೈನ್‌ಗಳ ತೆರವುಗೊಳಿಸಿದ್ದೀರಿ ಎನ್ನುವ ಮಾಹಿತಿಯನ್ನು ಸಹ ಶೀಘ್ರದಲ್ಲಿ ನೀಡಬೇಕು ಎಂದು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
       ಸಭೆಯಲ್ಲಿ ನೀರಾವರಿ ಇಲಾಖೆ, ಪೊಲೀಸ್ ಇಲಾಖೆ, ಜೆಸ್ಕಾಂ ಇಲಾಖೆ ಹಾಗೂ ಸಂಬAಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error