ತುಂಗಭದ್ರಾ ನದಿ ಪುಷ್ಕರಣಾ ಮಹೋತ್ಸವ ಕಾರ್ಯಕ್ರಮ ರದ್ದು

ಕನ್ನಡನೆಟ್ : ದಿನಾಂಕ : 20.1.2020 ರಿಂದ 01.12.2020 ರವರೆಗೆ ನಡೆಯಬೇಕಿದ್ದ ತುಂಗಭದ್ರಾ ನದಿ ಪುಷ್ಕರಣಾ ಮಹೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸಿ ಸಂಘ ಪ್ರಕಟಣೆ ನೀಡಿದೆ. ಈ ವರ್ಷ ನಮ್ಮ ಸಂಘದ ವತಿಯಿಂದ ದಿನಾಂಕ : 20.1.2020 ರಿಂದ 01.12 2020 ರವರೆಗೆ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಹಾಗೂ ಆನೆಗೊಂದಿ ಗ್ರಾಮದ ಚಿಂತಾಮಣಿ ಹಾಗೂ ಚಿಕ್ಕಜಂತಕಲ್ ಗ್ರಾಮದಲ್ಲಿ ಹಾಗೂ ಕಾರಟಗಿ ತಾಲೂಕು ಮುಷ್ಟೂರು ಮತ್ತು ಬೆನ್ನೂರು ಗ್ರಾಮಗಳಲ್ಲಿ ತುಂಗಭದ್ರಾ ನದಿ ಮುಷ್ಕರ ಮಹೋತ್ಸವವನ್ನು ನೆರವೇರಿಸಲು ನಮ್ಮ ಸಂಘದಿಂದ ತೀರ್ಮಾನಿಸಿದ್ದ ಬಗ್ಗೆ , ಕರ್ನಾಟಕ ಸರ್ಕಾರದವತಿಯಿಂದ ಈ ಮಷ್ಠರ ಮಹೋತ್ಸವಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸೂಚಿಸಬೇಕೆಂದು ವಿನಂತಿಸಲಾಗಿತ್ತು . ಇಡೀ ಜಿಲ್ಲೆ ಹಾಗೂ ರಾಜ್ಯಾಧ್ಯಂತ ಕೊವಿಡ್ -19 ನೋಂಕು ವ್ಯಾಪಿಸಿರುವ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಸೋಂಕನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು , ಇದರಲ್ಲಿ ಪ್ರಮುಖವಾಗಿ ಯಾವುದೇ ಪ್ರದೇಶದಲ್ಲಿ ಜನರು ಗುಂಪುಗುಂಪಾಗಿ ಸೇರುವುದನ್ನು ತಡೆಗಟ್ಟಬೇಕು ಎಂದು ಸೂಚಿಸಿರುತ್ತೀರಿ . ಅಲ್ಲದೆ ಈ ರೀತಿ ಸಾವಿರಾರು ಜನರು ಸೇರಿ ನದಿಯಲ್ಲಿ ಸ್ನಾನ ಮಾಡುವುದರಿಂದ ಕೊವಿಡ್ -19 ನೋಂಕು ಹರಡುವ ಸಾಧ್ಯತೆ ತುಂಬಾ ಹೆಚ್ಚಾಗಿರುವುದರಿಂದ ಈ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಲ್ಲಿ ತುಂಗಭದ್ರಾ ನದಿ ಮಷ್ಟರ ಮಹೋತ್ಸವವನ್ನು ನಡೆಸಲು ಅನುಮತಿಯನ್ನು ನೀಡಲು ಅವಕಾಶವಿರುವುದಿಲ್ಲ ಎಂದು ಹಿಂಬರಹ ಪತ್ರ ನೀಡಿರುತ್ತಾರೆ . ಆದ್ದರಿಂದ ನಮ್ಮ ಸಂಘದಿಂದ ಈ ಬಾರಿ ತುಂಗಭದ್ರಾ ನದಿ ಮಷ್ಠರ ತುಂಗಭದ್ರಾ ಮಹೋತ್ಸವದ ನಿರ್ಧಾರವನ್ನು ತಮ್ಮ ಸೂಚನೆಯಂತೆ ರದ್ದುಪಡಿಸಲು ತೀರ್ಮಾನಿಸಿದ್ದೇವೆ ಎಂದು ( ಜಿ . ರಾಮಕೃಷ್ಣ ಅಧ್ಯಕ್ಷರು , ಅಖಿಲ ಕರ್ನಾಟಕ ಕಮ್ಯುವಾರಿ ಸಂಘ ( ರಿ ) , ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error