ತುಂಗಭದ್ರಾ ಜಲಾಶಯಕ್ಕೆ ಶಾಸಕ ಬಸವರಾಜ್ ದಡೆಸೂಗೂರು ಬಾಗಿನ ಅರ್ಪಣೆ

ಕೊಪ್ಪಳ : ತ್ರಿವಳಿ ಜಿಲ್ಲೆಗಳಾದ ಕೊಪ್ಪಳ ಬಳ್ಳಾರಿ ರಾಯಚೂರು ಮೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನಲೆ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕರಾದ ಬಸವರಾಜ ದಡೆಸೂಗೂರು ಇಂದು ತುಂಗಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡಿ ವರುಣ ಹೋಮ ಮಾಡಿದರು . ಆಗಸ್ಟ್ 15 ರಂದೇ ಬಾಗಿನ ಅರ್ಪಣೆ ಮಾಡಬೇಕಾಗಿತ್ತು . ಆದರೆ ಈ ಕೊರೋನಾ ಭೀತಿ ಹಿನ್ನಲೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲಾಡಳಿತ ಜಲಾಶಯ ವೀಕ್ಷಣೆಯನ್ನು ನಿಷೇಧ ಮಾಡಿತ್ತು . ಈ ಕಾರಣದಿಂದ ಇಂದು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಾಯಿತು . ಇನ್ನೂ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರೈತ ಬಾಂಧವರು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿ ಬಾಗಿನ ಅರ್ಪಣೆ ಕಾರ್ಯಕ್ರಮ ಯಶಸ್ವಿಗೊಳಿಸಿದರು .

ಮೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವೂ ಪ್ರತಿ ವರ್ಷವೂ ಇದೇ ರೀತಿ ಭರ್ತಿಯಾಗಿ ಈ ಭಾಗದ ರೈತರು , ಕಾರ್ಮಿಕರು , ಅನ್ನದಾತರು , ದುಡಿಯವ ವರ್ಗದವರು , ಎಲ್ಲರ ಬದುಕು ಬಂಗಾರವಾಗಬೇಕು ಎನ್ನುವ ಉದ್ದೇಶದಿಂದ ತುಂಗಾಭದ್ರೆಯ ಒಡಲಿಗೆ ಬಾಗಿನ ಅರ್ಪಿಸಿ , ಕಾಲಕಾಲಕ್ಕೆ ವರುಣನ ಕೃಪೆಯ ಇರಲಿ ಯಾವ ಕಾರಣಕ್ಕೂ ವರುಣಾಘಾತ ಆಗದಿರಲಿ ಎನ್ನುವ ಉದ್ದೇಶಕ್ಕೆ ಬಾಗಿನ ಅರ್ಪಣೆ ಜೊತೆಗೆ ವರುಣಾ ಹೋಮ ಪೂಜೆಯನ್ನು ನೆರವೇರಿಸಲಾಯಿತು.

Please follow and like us:
error