ತಾಯಿ -ಮಕ್ಕಳು ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ : ಮುನಿರಾಬಾದ್ ಗ್ರಾಮದ ಆರ್.ಎಸ್. ಕಾಲೋನಿಯ ಅಂಗನವಾಡಿ ಅಡುಗೆ ಸಹಾಯಕಿಯಾಗಿದ್ದ ಹೀನಾ ಕೌಸರ್ ನೂರುದ್ದೀನ್(30 ವರ್ಷ) ತಮ್ಮ ಮಕ್ಕಳಾದ ಜಾಸ್ಮಿನ್(11 ವರ್ಷ) ಹಾಗೂ ಮಹಮ್ಮದ್ ಉಮೇಜ್ (08 ವರ್ಷ) ಎಂಬುವವರೊಂದಿಗೆ ಜೂನ್ 19 ರಂದು ಹೊಸಪೇಟೆಯ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ, ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ ಚಹರೆ ಗುರುತು: 5.2 ಅಡಿ ಎತ್ತರ, ಕೋಲು ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಉದ್ದ ಮೂಗನ್ನು ಹೊಂದಿದ್ದು, ನೀಲಿ ಬಣ್ಣದ ಚೂಡಿದಾರ, ಪೈಜಾಮವನ್ನು ಧರಿಸಿರುತ್ತಾರೆ.
ಮಗಳ ಚಹರೆ ಗುರುತು: 3.6 ಅಡಿ ಎತ್ತರ, ಕೋಲು ಮುಖ, ಗೋಧಿಬಣ್ಣ, ಸಾಧಾರಣ ಮೈಕಟ್ಟು, ಉದ್ದ ಮೂಗನ್ನು ಹೊಂದಿದ್ದು, ಕಾಣೆಯಾದಾಗ ಬಿಳಿ ಬಣ್ಣದ ಅಂಗಿ ಮತ್ತು ಕಪ್ಪು ಜೀನ್ಸ್ ಪ್ಯಾಂಟ್‌ನ್ನು ಧರಿಸಿರುತ್ತಾಳೆ.
ಮಗನ ಚಹರೆ ಗುರುತು: 3.4 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಗಿಡ್ಡ ಮೂಗನ್ನು ಹೊಂದಿದ್ದು, ಕಾಣೆಯಾದಾಗ ಹಸಿರು-ಬಿಳಿ ಮಿಶ್ರಿತ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಇವರು ಕನ್ನಡ ಮತ್ತು ಉರ್ದು ಭಾಷೆಗಳನ್ನು ಮಾತನಾಡುತ್ತಾರೆ.
ಈ ತಾಯಿ ಮತ್ತು ಮಕ್ಕಳ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೊಪ್ಪಳ ಅಧೀಕ್ಷಕರ ದೂ.ಸಂ.08539-230111, 230432, 222433, 270333, ಕೊಪ್ಪಳ ಪೊಲೀಸ್ ಠಾಣೆಯ ಮೊ.ಸಂ.948080-3720, 3731, 3748 ಗೆ ಅಥವಾ ಹತ್ತಿರವಿರುವ ಪೊಲೀಸ್ ಠಾಣೆಗೆ ಸಂಪರ್ಕಿಸಿ ಮಾಹಿತಿ ನೀಡಲು ಕೋರಿದ್ದಾರೆ

Please follow and like us:
error