ತಪ್ಪು ಮಾಹಿತಿ ನೀಡಿದ ಕರೋನಾ ಸೋಂಕಿತನಿಗೆ ನೋಟಿಸ್

ಮುಂಬೈ ಸೋಂಕಿತ ಸ್ಥಳ ಇರುವಿಕೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ವ್ಯಕ್ತಿಗೆ ನೋಟಿಸ್ ಜಾರಿ

ಚಾಮರಾಜನಗರ ಜೂನ್, : – ಮುಂಬೈನಿಂದ ಆಗಮಿಸಿ ಜಿಲ್ಲೆಯಲ್ಲಿ ವರದಿಯಾಗಿರುವ ಕೋವಿಡ್-19 ಸೋಂಕು ದೃಢೀಕೃತ ವ್ಯಕ್ತಿ ಹಾಗೂ ಅವರ ಕುಟುಂಬದವರನ್ನು ಇರಿಸಿದ್ದ ಸ್ಥಳ ಬಗ್ಗೆ ಹಾಗೂ ತನ್ನ ಕುಟುಂಬ ಸದಸ್ಯರ ಇರುವಿಕೆ ಬಗ್ಗೆ ಆರೋಗ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದ ಕೊಳ್ಳೇಗಾಲ ತಾಲೂಕಿನ ಜಾಗೇರಿಯ ವ್ಯಕ್ತಿಗೆ ಜಿಲ್ಲಾಧಿಕಾರಿಯವರ ಸೂಚನೆಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

ಜೂನ್ 5ರಂದು ಮುಂಬೈನಿಂದ ಆಗಮಿಸಿದ್ದ ಕೋವಿಡ್ ದೃಢೀಕೃತ ವ್ಯಕ್ತಿ ಹಾಗೂ ಈತನ ಸಂಬಂಧಿಕರನ್ನು ಹನೂರು ತಾಲೂಕಿನ ಪಾಲಿಮೇಡು ಗ್ರಾಮದಲ್ಲಿ ಇರಿಸಿದ್ದಾಗಿ ಹಾಗೂ ತನ್ನ ಪತ್ನಿ ಮತ್ತು ಮಕ್ಕಳು ತೋಮಿಯರ್ ಪಾಳ್ಯದಲ್ಲಿ ಇರುವುದಾಗಿ ಜಾಗೇರಿಯ ವ್ಯಕ್ತಿ ತಿಳಿಸಿದ್ದರು. ಆದರೆ ವಾಸ್ತವವಾಗಿ ಸೋಂಕು ದೃಢೀಕೃತ ವ್ಯಕ್ತಿ ಹಾಗೂ ಸಂಬಂಧಿಕರನ್ನು ಕೊಳ್ಳೇಗಾಲ ತಾಲೂಕಿನ ಜಕ್ಕಳ್ಳಿ ಗ್ರಾಮದಲ್ಲಿ ಇರಿಸಿದ್ದು, ಜಾಗೇರಿಯ ವ್ಯಕ್ತಿಯು ಅವರ ಪತ್ನಿ, ಮಕ್ಕಳನ್ನು ಜಾಗೇರಿಯ ಕರಾಚಿಕಟ್ಟೆಯಲ್ಲಿ ಇದ್ದುದ್ದು ನಂತರ ಖಚಿತಪಟ್ಟಿದೆ.

ಆರೋಗ್ಯ ಇಲಾಖೆಗೆ ತಪ್ಪು ಮಾಹಿತಿ ಮುಂಬೈ ಸೋಂಕಿತ ಸ್ಥಳ ಇರುವಿಕೆ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ವ್ಯಕ್ತಿಗೆ ನೋಟಿಸ್ ಜಾರಿ

ಆರೋಗ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ ಜಾಗೇರಿಯ ವ್ಯಕ್ತಿಗೆ ಜಿಲ್ಲಾಧಿಕಾರಿಯವರ ಸೂಚನೆಯಂತೆ ಇಲಾಖೆ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಮೂರು ದಿನದೊಳಗಾಗಿ ಸೂಕ್ತ ಸಮಜಾಯಿಷಿ ನೀಡುವಂತೆ ತಿಳಿಸಲಾಗಿದೆ. ತಪ್ಪಿದ್ದಲ್ಲಿ ಪ್ರಕೃತಿ ನಿರ್ವಹಣಾ ಕಾಯ್ದೆಯ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸುವ ಕುರಿತು ಎಚ್ಚರಿಕೆಯನ್ನು ಸಹ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ತಿಳಿಸಿದ್ದಾರೆ.

Please follow and like us:
error