ತನ್ವೀರ್ ಸೇಠ್ ಕೊಲೆಗೆ ಯತ್ನ : ಸ್ಥಿತಿ ಗಂಭೀರ

ಮೈಸೂರು : ಮಾಜಿ ಸಚಿವ ತನ್ವಿರ್ ಸೇಠ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಮದ್ಯರಾತ್ರಿ ನಡೆದಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಸಂಘಟನೆಯೊಂದರ ಕಾರ್ಯಕರ್ತನಿಂದ ತನ್ವೀರ್ ಸೇಠ್ ಕುತ್ತಿಗೆ ಇರಿತ. ಡ್ರ್ಯಾಗನ್ ನಿಂದ  ತನ್ವೀರ್ ಸೇಠ್ ಮೇಲೆ ದಾಳಿ ಮಾಡಲಾಗಿದೆ. ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ತನ್ವೀರ್ ಸೇಠ್ ದಾಖಲು ಮಾಡಲಾಗಿದ್ದು  ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿ ಪಾಷಾ ಮೈಸೂರಿನ ಗೌಶಿಯಾನಗರ ನಿವಾಸಿ ಎನ್ನಲಾಗಿದೆ.
ಮೈಸೂರಿನ ಬನ್ನಿಮಂಟಪದ ಆವರಣದಲ್ಲಿ ಬೀಗರ ಔತಣಕೂಟಲ್ಲಿ ಭಾಗಿಯಾಗಿದ್ದ ಶಾಸಕ ತನ್ವೀರ್ ಸೇಠ್ಸಂ ಸಂಗೀತ ಕಾರ್ಯಕ್ರಮ ವೀಕ್ಷಣೆ ಮಾಡುತಿದ್ದಾಗ  ದಿಢೀರ್ ದಾಳಿ ನಡೆದಿದೆ. ತಕ್ಷಣ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ದ್ದಾರೆ ಆರೋಪಿ ಇರ್ಫಾನ್ ಗೆ ಹಿಗ್ಗಾಮುಗ್ಗ   ಸಾರ್ವಜನಿಕರು ಥಳಿಸಿದ್ದಾರೆ. 

Please follow and like us:
error