ಡ್ಯೂಟಿಗೆ ಹಾಜರಾಗಲು 30 ಕಿ.ಮೀ ಸೈಕಲ್ ತುಳಿದ ಚಾಲಕ ಕಂ ನಿರ್ವಾಹಕ ನೀಲಪ್ಪ!

ಕೊಪ್ಪಳ: ಕೊರೊನಾದ ಈ ಕಾಲದಲ್ಲಿ ಎಷ್ಟೋ ಜನ ನೌಕರರು ತಮ್ಮ ಮನೆಯಿಂದ ಕಚೇರಿ ತಲುಪಲು ಬಸ್ ಇಲ್ಲ ಎನ್ನುವ ಕಾರಣಕ್ಕೆ ಕೆಲಸಕ್ಕೆ ಹಾಜರಾಗಲ್ಲ. ಇಂಥವರ ಮಧ್ಯೆ ಯಲಬುರ್ಗಾ ಕೆಎಸ್ಆರ್‌ಟಿಸಿ ಘಟಕದ ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್. 30 ಕಿಮೀ ಸೈಕಲ್ ತುಳಿದು ಕೆಲಸಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ನೀಲಪ್ಪ ಯಲಬುರ್ಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರೂ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಮನೆ ಹೊಂದಿದ್ದು, ನಿಡಗುಂದಿಯಿಂದ ಯಲಬುರ್ಗಾಕ್ಕೆ ಸೈಕಲ್ ಹೊಡೆದುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಸದ್ಯ ಸಾರಿಗೆ ಸೌಕರ್ಯ ಅಷ್ಟಾಗಿ ಇಲ್ಲ. ಖಾಸಗಿ ವಾಹನಗಳ ಸಂಚಾರವೂ ವಿರಳವಾಗಿದೆ. ಹಾಗಾಗಿ ಸೈಕಲ್ ಸವಾರಿ ಅನಿವಾರ್ಯ. ಇದರಿಂದ ಕಳೆದುಕೊಳ್ಳುವಂಥದ್ದು ಏನಿಲ್ಲ‌, ಬದಲಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಹಗಲಿರುವಾಗಲೇ ಡ್ಯೂಟಿ ಮುಗಿದರೆ ಸೈಕಲ್ ಮೂಲಕ ಮರಳಿ ಮನೆ ಸೇರಲು ಅನುಕೂಲವಾಗಬಹುದು. ಇಂಥ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ, ಪ್ರೋತ್ಸಾಹ ನೀಡಲಿ.

ಈ ಕುರಿತು ಯಲಬುರ್ಗಾ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ರಮೇಶ್ ಜಿಂಗ್ಲಿ ಮಾತನಾಡಿ, ಇಂಥ ನೌಕರರು ನಮ್ಮಲ್ಲಿರುವುದು ನಿಜಕ್ಕೂ ಹೆಮ್ಮೆ. ನೀಲಪ್ಪನವರ ಕರ್ತವ್ಯಪ್ರಜ್ಞೆಯನ್ನು ಅಭಿನಂದಿಸುತ್ತೇವೆ ಎಂದರು.

Please follow and like us:
error