ಡಿ. 27ರಂದು ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆ

ಮಸ್ಟರಿಂಗ್ ಕಾರ್ಯ ಮುಗಿಸಿ ಮತಗಟ್ಟೆಗಳತ್ತ ತೆರಳಿದ ಮತಗಟ್ಟೆ ಸಿಬ್ಬಂದಿ


ಕೊಪ್ಪಳ, ಡಿ: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗಳು-2020ರ ನಿಮಿತ್ತ ಡಿಸೆಂಬರ್. 27 ರಂದು ಎರಡನೇ ಹಂತದಲ್ಲಿ ಮತದಾನ ಜರುಗಲಿದ್ದು, ವಿವಿಧ ಭೂತ್‌ಗಳಿಗೆ ನೇಮಕಗೊಂಡ ಸಿಬ್ಬಂದಿಗಳಿಗೆ ಮತಗಟ್ಟೆಯ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿಯಲ್ಲಿ ಶನಿವಾರದಂದು (ಡಿ.26) ಅಚ್ಚುಕಟ್ಟಾಗಿ ನೆರವೇರಿತು.
ಕೊಪ್ಪಳ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮಸ್ಟರಿಂಗ್ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಅಲ್ಲದೇ ಮತಗಟ್ಟೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಹಾಗೂ ಮತಗಟ್ಟೆಯ ಸಾಮಾಗ್ರಿಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ, ಜಾಗೃತಿಯಿಂದ ಚುನಾವಣಾ ಕಾರ್ಯವನ್ನು ನಿರ್ವಹಿಸಬೇಕು. ಚುನಾವಣೆಗೆ ಸಂಬAಧಿಸಿದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.
ರಾಜ್ಯ ಚುನಾವಣಾ ಆಯೋಗದಿಂದ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗಳು-2020ರ ನಿಮಿತ್ತ ಕೊಪ್ಪಳ ಜಿಲ್ಲೆಯ ಎರಡನೇ ಹಂತದ ಚುನಾವಣೆ ನಡೆಯುವ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿನ 76 ಗ್ರಾಮ ಪಂಚಾಯತಿಗಳ 645 ಮತಗಟ್ಟೆಗಳಿಗೆ ನಿಯೋಜನೆಗೊಂಡ 710 ಪ್ರಿಸೈಡಿಂಗ್ ಅಧಿಕಾರಿಗಳು, 780 ಮೊದಲನೇ ಪೋಲಿಂಗ್ ಅಧಿಕಾರಿಗಳು, 858 ಎರಡನೇ ಪೋಲಿಂಗ್ ಅಧಿಕಾರಿಗಳು, 944 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 645 ಡಿ-ದರ್ಜೆ ನೌಕರರು ಸೇರಿದಂತೆ ಒಟ್ಟು 3,938 ಸಿಬ್ಬಂದಿಗಳು ಮತಗಟ್ಟೆಯ ಸಾಮಾಗ್ರಿಗಳ ಸಮೇತರಾಗಿ ಬಸ್ ಮೂಲಕವಾಗಿ ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು.
ತಾಲ್ಲೂಕುವಾರು ವಿವರ;
ಎರಡನೇ ಹಂತದ ಚುಣಾವಣೆ ನಡೆಯುವ ಗಂಗಾವತಿ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳ 159 ಮತಗಟ್ಟೆಗಳಿಗೆ 175 ಪ್ರಿಸೈಡಿಂಗ್ ಅಧಿಕಾರಿಗಳು, 192 ಮೊದಲನೇ ಪೋಲಿಂಗ್ ಅಧಿಕಾರಿಗಳು, 212 ಎರಡನೇ ಪೋಲಿಂಗ್ ಅಧಿಕಾರಿಗಳು, 233 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 159 ಡಿ-ದರ್ಜೆ ನೌಕರರು ಒಟ್ಟು 921 ಸಿಬ್ಬಂದಿಗಳು ಕರ್ತವ್ಯಕ್ಕೆ ತೆರಳಿದರು. 2 ಸೆಕ್ಟರ್ ಅಧಿಕಾರಿಗಳೂ ಕೂಡಾ ಕಾರ್ಯಪ್ರವೃತ್ತರಾದರು.
ಕಾರಟಗಿ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳ 97 ಮತಗಟ್ಟೆಗಳಿಗೆ 107 ಪ್ರಿಸೈಡಿಂಗ್ ಅಧಿಕಾರಿಗಳು, 117 ಮೊದಲನೇ ಪೋಲಿಂಗ್ ಅಧಿಕಾರಿಗಳು, 129 ಎರಡನೇ ಪೋಲಿಂಗ್ ಅಧಿಕಾರಿಗಳು, 142 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 97 ಡಿ-ದರ್ಜೆ ನೌಕರರು ಒಟ್ಟು 592 ಸಿಬ್ಬಂದಿಗಳು ಕರ್ತವ್ಯಕ್ಕೆ ನಿಯುಕ್ತಿಗೊಂಡರು. 11 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಕನಕಗಿರಿ ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳ 89 ಮತಗಟ್ಟೆಗಳಿಗೆ 98 ಪ್ರಿಸೈಡಿಂಗ್ ಅಧಿಕಾರಿಗಳು, 108 ಮೊದಲನೇ ಪೋಲಿಂಗ್ ಅಧಿಕಾರಿಗಳು, 118 ಎರಡನೇ ಪೋಲಿಂಗ್ ಅಧಿಕಾರಿಗಳು, 130 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 89 ಡಿ-ದರ್ಜೆ ನೌಕರರು ಒಟ್ಟು 543 ಸಿಬ್ಬಂದಿಗಳು ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು. ಅಲ್ಲದೇ 12 ಸೆಕ್ಟರ್ ಅಧಿಕಾರಿಗಳು ನಿಯೋಜನೆಗೊಂಡರು.
ಕುಷ್ಟಗಿ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ 300 ಮತಗಟ್ಟೆಗಳಿಗೆ 330 ಪ್ರಿಸೈಡಿಂಗ್ ಅಧಿಕಾರಿಗಳು, 363 ಮೊದಲನೇ ಪೋಲಿಂಗ್ ಅಧಿಕಾರಿಗಳು, 399 ಎರಡನೇ ಪೋಲಿಂಗ್ ಅಧಿಕಾರಿಗಳು, 439 ಮೂರನೇ ಪೋಲಿಂಗ್ ಅಧಿಕಾರಿಗಳು ಹಾಗೂ 300 ಡಿ-ದರ್ಜೆ ನೌಕರರು ಒಟ್ಟು 1,832 ಸಿಬ್ಬಂದಿಗಳು ಕರ್ತವ್ಯಕ್ಕೆ ಪ್ರಯಾಣ ಬೆಳೆಸಿದರು. ಅಲ್ಲದೇ 40 ಸೆಕ್ಟರ್ ಅಧಿಕಾರಿಗಳು ನಿಯೋಜನೆಗೊಂಡರು.

Please follow and like us:
error