ಡಿಕೆಶಿಯನ್ನು ಸಿಎಂ ಮಾಡಲು ಹೊರಟಿದ್ದ ರಮೇಶ್ ಈಗ ಸುಳ್ಳು ಹೇಳುತ್ತಿದ್ದಾನೆ : ಸತೀಶ್ ಜಾರಕಿಹೊಳಿ

 ಬೆಂಗಳೂರು , ನ . 17 : “ ಅನರ್ಹ ಶಾಸಕ ರಮೇಶ್ 

ಜಾರಕಿಹೊಳಿ ಅವರ ತಲಿ ಮೊಬೈಲ್ ಇದ್ದಂತೆ . ಅದು ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತದೆ ‘ ಮಾಜಿ ಸಚಿವಸ ಸತೀಶ್ ಜಾರಕಿಹೊಳಿ ಇಂದಿಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ . ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು , ಶಾಸಕಿ ಲಕ್ಷ್ಮಿ ಹೆಬ್ಬಾಳ‌ ಅವರೇ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದರು . ಹೆಬ್ಬಾರ್‌ನ ಕೈ – ಕಾಲು ಬಿದ್ದು ಮಂತ್ರಿಯಾಗಿದ್ದನು . ಲಕ್ಷ್ಮಿ ಹೆಬ್ಬಾಳ್ಳರ್ ಪವರ್ ಫುಲ್ ಅಲ್ಲ ಎಂದು ರಮೇಶ್ ಬಹಿರಂಗವಾಗಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು . ಇದೇ ಕಾರಣಕ್ಕೆ ನಾನು ಲಕ್ಷ್ಮೀ ಹೆಬ್ಬಾರ್ ಅವರ ಜೊತೆಗೆ ಜಗಳ ಆಡಿದ್ದೇನೆ . ಮಾಜಿ ಸಚಿವ ಡಿ . ಕೆ . ಶಿವಕುಮಾರ್ , ಶಾಸಕಿ ಲಕ್ಷ್ಮಿ ಹೆಬ್ಬಾರ್ ಗೋಕಾಕ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಲಿದ್ದು , ರಮೇಶ್ ಜಾರಕಿಹೊಳಿ ಮಂತ್ರಿ ಆಗಿದ್ದು ಹೇಗೆ ಎಂದು ಅವರೇ ಹೇಳಲಿದ್ದಾರೆಂದು ತಿಳಿಸಿದರು . ಇಪ್ಪತ್ತೈದು ವರ್ಷ ರಮೇಶ್ ಕೈಚೀಲ ಹಿಡಿದಿದ್ದಾನೆ . ಯಾವುದೇ ಪಕ್ಷದಲ್ಲಿ ಸ್ವಾಮಿ ನಿಷ್ಠೆ ಅಗತ್ಯ . ರಾಜಕೀಯದಲ್ಲಿ ಬೆಳೆಯಲು ಗಾಡ್ ಫಾದರ್‌ಗಳು ಬೇಕೆ ಬೇಕು . ಮೂರು ಪಕ್ಷಗಳಲ್ಲಿ ಈ ಸಂಸ್ಕೃತಿ ಇದೆ . ಕೈಚೀಲ ಹಿಡಿಯೋದು ಅಂದರೆ ಚಮಚಗಿರಿ ಅಲ್ಲ . ಡಿಕೆಶಿ , ಹೆಬ್ಬಾರ್ ಮತ್ತು ರಮೇಶ್ ಒಂದೇ ಗುಂಪಿನಲ್ಲಿದ್ದವರು . ಇದೀಗ ಹೊರಬಂದಿದ್ದಾನೆ . ಶೇರು ಮಾರುಕಟ್ಟೆ ಮಾದರಿಯಲ್ಲಿ ರಮೇಶ್ ಏರಿಳಿತ ಆಗುತ್ತಿರುತ್ತಾನೆ . ಮೊದಲು ಎಚ್ . ಕೆ . ಪಾಟೀಲ್‌ , ಎಸ್ಸೆಂ ಕೃಷ್ಣ , ಅನಂತರ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳುತ್ತಿದ್ದ . ಎರಡು ವರ್ಷಗಳಿಂದ ಡಿಕೆಶಿಯನ್ನು ಸಿಎಂ ಮಾಡಲು ರಮೇಶ್ ಹೊರಟಿದ್ದ . ಇದೀಗ ಸುಳ್ಳು ಹೇಳುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

Please follow and like us:
error