ಡಾ.ಬಿ.ಆರ್. ಅಂಬೇಡ್ಕರ್ ರ ಜಯಂತಿ ಆಚರಣೆಗೆ ಹೈಕೋರ್ಟ ಅವಕಾಶ

ಕೊಪ್ಪಳ :

14-04-2021 ರಂದು AICCTU ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಕೊಪ್ಪಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಮಹಾಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆಯನ್ನು ಅರ್ಥಪೂರ್ಣಗೊಳಿಲು ಗಂಗಾವತಿ ತಹಶೀಲ್ದಾರಿಗೆ ಅನುಮತಿಗಾಗಿ ಲೇಟರ್ ಕೊಟ್ಟಿದ್ದರು. ಕೋವಿಡ್ ನೆಪ ಹೇಳಿ ಜಯಂತಿ ಆಚರಣೆ ಮಾಡಲು ಅನುಮತಿ ಕೊಡುವುದಿಲ್ಲ ಎಂದು ಹಿಂಬರಹ ನೀಡಲಾಗಿತ್ತು.

ಅಂಬೇಡ್ಕರ್ ಜಯಂತಿ ಪೌರ ಕಾರ್ಮಿಕರಿಗೆ ಮಹತ್ವಪೂರ್ಣ ದಿನವಾಗಿದೆ. ಹಾಗಾಗಿ ದೇಶದ ಜನರ ವಿಮೋಚನೆಗಾಗಿ ಅವಿರತ ಶ್ರಮಿಸಿದ ಮಹಾನ್ ಮಾನವತಾವಾದಿಗೆ ಅವಮಾನ ಮಾಡಿದ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡಿದ ಎಐಸಿಸಿಟಿಯು, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಧಾರವಾಡ ಹೈಕೋರ್ಟ್ ಪೀಠದಲ್ಲಿ ದಾವೆ ಹಾಕಿತ್ತು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಕೊರ್ಟ್ ಆದೇಶ ಹೊರಡಿಸಿದೆ ಕಾನೂನು ಹೋರಾಟದಲ್ಲಿ ಯಶಸ್ವಿಯಾಗಿದೆ.

ಗಂಗಾವತಿ ನಗರದ ಬಾಬು ಜಗಜೀವನರಾಮ್ ವೃತ್ತದಲ್ಲಿ ಮುಂದುಗಡೆ ಕಾರ್ಯಕ್ರಮ ನಡೆಸಲಾಗುವುದು ಎಂದು

AICCTU- ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಜಿಲ್ಲಾ ಸಮಿತಿ ಕೊಪ್ಪಳ ಪ್ರಕಟಣೆ ತಿಳಿಸಿದೆ.

Please follow and like us:
error