ಟ್ರ್ಯಾಕ್ಟರ್ ಚಲಾಯಿಸಿ ಭತ್ತ ನಾಟಿ ಮಾಡಿದ ಶಾಸಕ ಬಸವರಾಜ್ ದಡೇಸೂಗೂರು

ಕೊಪ್ಪಳ : ಭತ್ತ ಸಸಿ ನಾಟಿ ಮಾಡುವ ಯಂತ್ರವನ್ನು ಚಾಲನೆ ಮಾಡುವ ಮುಖಾಂತರ ಕೊಪ್ಪಳದ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸೂಗೂರು ಸ್ಥಳೀಯ ರೈತರ ಗಮನ ಸೆಳೆದಿದ್ದಾರೆ . ಜಿಲ್ಲೆಯ ಕನಕಗಿರಿ ಕ್ಷೇತ್ರದ ಹಣವಾಳ ಗ್ರಾಮದಲ್ಲಿ ರವಿವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ಹಾಗೂ ಗಂಗಾವತಿಯ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಭತ್ತ ಸಸಿ ನಾಟಿ ಮಾಡುವ ಯಂತ್ರ ತರಬೇತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಬಸವರಾಜ ದಡೆಸೂಗೂರು ತಾವೇ ಭತ್ತದ ಗದ್ದೆಗೆ ಇಳಿದು ಯಂತ್ರವನ್ನು ಚಾಲನೆ ಮಾಡುವ ಮುಖಾಂತರ ಭತ್ತ ಸಸಿ ನಾಟಿ ಮಾಡಿ ನೆರದಿದ್ದ ಜನರನ್ನು ಅಚ್ಚರಿಗೊಳಿಸಿದರು . ಇನ್ನೂ ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ , ಜಿ.ಪಂ.ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು

Please follow and like us:
error