ಟ್ರಾಪಿಕ್ ಸಿಗ್ನಲ್ ಲೈಟ್,ಸಿಸಿ ಕ್ಯಾಮರಾ ಉದ್ಘಾಟಿಸಿದ ಎಸ್ಪಿ ಟಿ.ಶ್ರೀಧರ್

Kannadanet NEWS ಕೊಪ್ಪಳ : ಕಳೆದ 3 ವರ್ಷಗಳಿಂದ ದುರಸ್ತಿಯಾಗಿದ್ದ ಸಂಚಾರ ಸೂಚಕ ದೀಪಗಳು ಮತ್ತು ಸಿ.ಸಿ ಕ್ಯಾಮರಗಳನ್ನು ದುರಸ್ತಿಗೊಳಿಸಿ ಕಾರ್ಯ ನಿರ್ವಹಿಸುವಂತೆ ಮಾಡಿದ್ದು , ಅವುಗಳನ್ನು ಜಿಲ್ಲಾ ಪೊಲೀಸ ಅಧೀಕ್ಷಕ. ,ಟಿ . ಶೀಧರ ಉದ್ಘಾಟಿಸಿದರು , ಈ ಸಂದರ್ಭದಲ್ಲಿ ವೆಂಕಟಪ್ಪ ನಾಯಕ ಡಿ.ಸ್.ಪಿ ಕೊಪ್ಪಳ ಉಪ ವಿಭಾಗ , ಕೊಪ್ಪಳ , ಮಾರುತಿ ಗುಳ್ಳಾರಿ , ಪಿ.ಐ ಕೊಪ್ಪಳ ನಗರ ಠಾಣೆ ಮತ್ತು ಮೌನೇಶ್ವರ ಮಾಲೀಪಾಟೀಲ ಪಿ.ಐ ಮಹಿಳಾ ಪೊಲೀಸ ಠಾಣೆ ರವರು ಹಾಗೂ ವೆಂಕಟೇಶ ಪಿ.ಎಸ್.ಐ ಸಂಚಾರ ಪೊಲೀಸ ಠಾಣೆ , ಕೊಪ್ಪಳ ರವರು ಹಾಜರಿದ್ದರು .

ಸಿಗ್ನಲ್ ಗಳಿಲ್ಲದೇ ಹಲವಾರು ದಿನಗಳಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ್ದ ಸಾರ್ವಜನಿಕರು ಕೊನೆಗೂ ಪೋಲಿಸ್ ಇಲಾಖೆಯ ಕೈಗೊಂಡ ಕ್ರಮಕ್ಕೆ ನಿಟ್ಟುಸಿರುಬಿಟ್ಟಿದ್ದಾರೆ.

Please follow and like us:
error