ಟ್ರಾಕ್ಟರ್ ನಲ್ಲಿ ಸಿಲುಕಿ ಸಾವು

ಕೊಟ್ಟೂರು :  ಟ್ರಾಕ್ಟರ್ ನಲ್ಲಿ ಇಟ್ಟಿಗೆ ತುಂಬಿಕೊಂಡು ಬರುವಾಗ ಟ್ರಾಕ್ಟರ್ ಹಾಗೂ ಇಟ್ಟಿಗೆ ನಡುವೆ ಸಿಲುಕಿ   ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ರಾಂಪುರದಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ನಾಗರಾಜ್ (35) ಮೃತ ಯುವಕ. ನಾಗರಾಜ್ ತನ್ನ ಜಮೀನಿನಲ್ಲಿ ಮನೆ ಕಟ್ಟಿಸುತ್ತಿದ್ದರು.‌ ಇದಕ್ಕಾಗಿ ತಾನೇ ಟ್ರಾಕ್ಟರ್ ಡ್ರೈ ಮಾಡುತ್ತಾ ಇಟ್ಟಿಗೆ ತರುತ್ತಿದ್ದಾಗ, ಮುಂದೆ ಬಂದ ದಿಬ್ಬವನ್ನ ಅತ್ತಿಸುವಾಗ ಟ್ರಾಕ್ಟರ್ ಇದ್ದಕ್ಕಿದ್ದಹಾಗೆ ಇಟ್ಟಿಗೆ ಇರುವ ಟ್ರಾಲಿ ಕಡೆ ವಾಲಿದೆ. ಹೀಗಾಗಗಿ ನಾಗರಾಜ್ ನಾಗರಾಜ್ ಟ್ರಾಕ್ಟರ್ ಹಾಗೂ ಟ್ರಾಲಿ‌‌ ನಡುವೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಓವರ್ ಲೋಡ್ ನಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ‌.

Please follow and like us:
error