Bellary ಟೆಸ್ಟ್ ಡ್ರೈವಿಂಗ್ ಅಂತ ತಂದಿದ್ದ ಕಾರು
ಬೆಂಕಿಗಾಹುತಿಯಾಗಿದೆ. ಟೆಸ್ಟ್ ಡ್ರೈವಿಂಗ್ ಗಾಗಿ ತಂದಿದ್ದ ಸ್ಪೋರ್ಟ ಕಾರಿನ ಎಂಜಿನ್ ಬಿಸಿಯಾದ ಪರಿಣಾಮ ಬೆಂಕಿಯ ಜ್ವಾಲಾಮುಖಿ ಕಾಣಿಸಿಕೊಂಡು ಹೊತ್ತಿಉರಿದ ಘಟನೆಯು ಬಳ್ಳಾರಿ ನಗರ ಹೊರವಲಯದ ಬೈಪಾಸ್ ರಸ್ತೆಯ ಅಲ್ಲಂ ಭವನದ ಬಳಿ ನಡೆದಿದೆ. ಈ ಕಾರಿನೊಳಗೆ ಇಬ್ಬರು ಟೆಸ್ಟ್ ಡ್ರೈವಿಂಗ್ ಗೆ ಬಂದಿದ್ದರು. ಎಂಜಿನ್ ಒಳಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಅದನ್ನು ಸೂಕ್ಷ್ಮವಾಗಿ ಅರಿತ ಕಾರಿನೊಳಗಿದ್ದ ಇಬ್ಬರು ಕೂಡಲೇ ಕಾರಿಂದ ಕೆಳಗಡೆ ಇಳಿದುಕೊಂಡಿದ್ದಾರೆ. ನಿಧಾನವಾಗಿ ಆ ಅಗ್ನಿಯ ಜ್ವಾಲಾಮುಖಿಯು ಕಾರಿನ ಎಲ್ಲ ಕಡೆಯು ಆವರಿಸಿಕೊಂಡು ಸುಟ್ಟುಕರಕಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದ್ದಾರೆ.
Please follow and like us: