ಕೊಪ್ಪಳ: ದೇಶದ ಮೊದಲ ಟಾಯ್ ಕ್ಲಸ್ಟರ್ ಭೂಮಿ ಪೂಜೆ ಸಮಾರಂಭ ಕೆಲ ಕಾಲ ಗೊಂದಲದ ಗೂಡಾಗಿ ಆತಂಕಕ್ಕೆ ಎಡೆ ಮಾಡಿಕೊಟ್ಟಿತು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಭಾಷಣ ಮಾಡುವಾಗ ನನ್ನ ಗಂಟಲು ಸರಿ ಇಲ್ಲ. ಒಂದು ನಿಮಿಷ ಮಾತಾಡ್ತಿನಿ. ನನ್ನ ಭಾಷಣವನ್ನು ಶಾಸಕ ಮಿತ್ರ ಅಮರೇಗೌಡ ಬಯ್ಯಾಪುರ ಓದುತ್ತಾರೆ ಎಂದರು. ಆಗ ಮಾಜಿ ಸಚಿವ ಬಸವರಾಜ ರಾಯರಡ್ಡಿ ನಾನು ಮಾತಾಡ್ತಿನಿ ಅಂತ ಎಲ್ಲಿ ಹೇಳಿದಿನಿ ಅಂತ ಹೇಳಿದರು. ಆವಾಗ ವೇದಿಕೆಯ ಮೇಲೆ ಗೊಂದಲ ಸೃಷ್ಟಿಸಿಯಾಯಿತು. ಹಾಲಪ್ಪ ಆಚಾರ್, ರಾಯರಡ್ಡಿ ಬೆಂಬಲಿಗರು ತಮ್ಮ ತಮ್ಮ ನಾಯಕರಿಗೆ ಜಯಕಾರ ಹಾಕಿದರು. ವೇದಿಕೆ ಮುಂಭಾಗದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು. ರಾಯರಡ್ಡಿಯವರ ಬೆಂಬಲಿಗ ಬಸವರಾಜ್ ಉಳ್ಳಾಗಡ್ಡಿ ಬಿಜೆಪಿ ಕಾರ್ಯಕ್ರಮ ಎಂದು ಕೂಗಿದರು. ಕೆಲಕಾಲ ಗೊಂದಲ ಮುಂದುವರೆಯಿತು. ಒಟ್ಟಾರೆ ಸಿಎಂ ಸಮ್ಮುಖದಲ್ಲಿ ಈ ಗೊಂದಲ ಉಂಟಾಗಿದ್ದು, ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು. ಟಾಯ್ಸ ಕ್ಲಸ್ಟರ್ ತಂದಿದ್ದು ಯಾರು ಎನ್ನುವುದು ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಜಿದ್ದಾ ಜಿದ್ದಿಗೆ ಕಾರಣವಾಗಿದೆ.