ಜೈಲಿನಲ್ಲಿ ಖೈದಿಯ ಮಗುವಿಗೆ ಅಭಿನಂದನ್ ನಾಮಕರಣ, ಹುಟ್ಟುಹಬ್ಬ ಆಚರಣೆ

Koppal ಈ ಜೈಲು ಇಂದು ವಿಶಿಷ್ಠ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು, ಅತಿಥಿಗಳಾಗಿ ಬಂದು ಹಾರೈಸಿದವರೂ ಸಹಸಾಮಾನ್ಯರಾ

ಗಿರಲಿಲ್ಲ.

ಗಿರಲಿಲ್ಲ. ಜೈಲಿನಲ್ಲಿ ಇಂದು ಖೈದಿಗಳಿಗೆ ಸಂಭ್ರಮದ ವಾತಾವರಣ. ಹೂವು, ತೆಂಗಿನಗರಿಯಿಂದ ಅಲಂಕಾರಗೊಳಿಸಲಾಗಿತ್ತು. ರಂಗೋಲಿ ಹಾಕಲಾಗಿತ್ತು. ಒಂದು ಕಡೆ ತಳೀರು ತೋರಣಗಳಿಂದ ಅಲಕೃಂತ ಜೈಲು, ಇನ್ನೊಂದೆಡೆ ಅಲಂಕೃತ ತೊಟ್ಟಿಲಲ್ಲಿಮಗು, ಮತ್ತೊಂದೆಡೆ ಸಂಭ್ರಮದಿಂದ ಕೇಕ್ ಕತ್ತರಿಸುತ್ತಿರುವ ಮಗು ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ. ಹೌದು ಕೊಪ್ಪಳದ ಜಿಲ್ಲಾ ಕಾರಾಗೃಹ ಇಂದು ವಿಶಿಷ್ಠ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಮಹಿಳಾ ಖೈದಿಯೊಬ್ಬರ ಗಂಡುಮಗುವಿನ‌ ನಾಮಕರಣ ಹಾಗೂ ಹುಟ್ಟುಹಬ್ಬ ಕಾರ್ಯಕ್ರಮವನ್ನು ಜೈಲಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು ಜಿಲ್ಲಾ ಕಾನೂನ ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ,ಪೊಲೀಸ್ ಇಲಾಖೆ,ಜಿ.ಪಂ, ಜಿಲ್ಲಾ ಕಾರಗೃಹ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಚಾರಣಾಧೀನ ಮಹಿಳಾ ಖೈದಿಯೊಬ್ಬರ ಮಗುವಿಗೆ ನಾಮಕರಣ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮ ಜರುಗಿತು. ಜಿಲ್ಲಾ ನ್ಯಾಯಾಧೀಶ ಸಂಜೀವ ಕುಲಕರ್ಣಿ, ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಟಿ.ಶ್ರೀನಿವಾಸ, ಜಿ.ಪಂ ಸಿಇಓ ಪೆದ್ದಪ್ಪಯ್ಯ, ಕಾರಗೃಹ ಅಧೀಕ್ಷಕ ಕೊಟ್ರೇಶ್ ಬಿ. ಎಂ ಅವರ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಪೂಜಾ ವಿಧಿ- ವಿಧಾನ, ಮಂತ್ರ ಘೋಷಗಳೊಂದಿಗೆ ಮಗುವಿಗೆ ನಾಮಕರಣ ಮಾಡಲಾಯಿತು. ತೊಟ್ಟಿಲನ್ನು ಹೂವು ಹಾಗೂ ಬಲೂನ್ ನಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ವಿಶೇಷ ಅಂದ್ರೆ ತಾಯಿ ಇಚ್ಚೆಯಂತೆ ವಿಂಗ್ ಕಮಾಂಡರ್ ಅಭಿನಂದನ್ ಅಂತ ಹೆಸರಿಡಲಾಯಿತು. ಖೈದಿಯ ಅಣ್ಣನಿಂದ ಮಗುವಿಗೆ ಹೆಸರನ್ನು ಕೂಗಿಸಲಾಯಿತು. ಕಾರಗೃಹದ ಮಹಿಳಾ ಸಿಬ್ಬಂದಿ,ವಿವಿಧ ಇಲಾಖೆ ಸಿಬ್ಬಂದಿ ಮಹಿಳಾ ವಕೀಲರು ಮಗವನ್ನು ಎತ್ತಿಕೊಂಡು ಸಂಭ್ರಮಿಸಿದರು.

ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಒಟ್ಟು ೨೦೦ ಖೈದಿಗಳು ಇದ್ದು, ಅದರಲ್ಲಿ ೧೯ ಮಹಿಳಾ ಖೈದಿಗಳು ಇದ್ದಾರೆ. ಇನ್ನು ಜೈಲಿನಲ್ಲಿದ್ದ ವಿಚಾರಣಾದೀನ ಖೈದಿ ಆಂಧ್ರಮೂಲದ ಜ್ಯೋತಿ ಎನ್ನುವವರ ಮಗುವಿಗೆ ಮಹಿಳೆಯರು ಗ್ರಾಮೀಣ ಸೊಗಡಿನ ಜೋಗುಳ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ಜ್ಯೋತಿ ಕಳ್ಳತನ ಪ್ರಕರಣವೊಂದರ ವಿಚಾರಣಾದೀನ ಖೈದಿಯಾಗಿ ಕೊಪ್ಪಳ ಜೈಲಿನಲ್ಲಿದ್ದಾರೆ. ಜ್ಯೋತಿಗೆ ಕಳೆದ ಒಂದು ವರ್ಷದ ಹಿಂದೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಅಲ್ಲಿಂದ ಕೊಪ್ಪಳದ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಖೈದಿಗಳ ಮಕ್ಕಳು ಯಾವುದೇ,ಸೌಲಭ್ಯಗಳಿಂದ ವಂಚಿತರಾಗಬಾದು. ಕಾನೂನಿನ ಅಡಿಯ ನಿಯಮಗಳ ಅನುಸಾರವಾಗಿ ಇಂತಹ ಒಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ರಾಜ್ಯದಲ್ಲಿ ಮೊದಲ ಬಾರಿಗೆ ನಡೆದ ಕಾರ್ಯಕ್ರಮವಾಗಿದೆ. ಒಟ್ಟಾರೆಯಾಗಿ ಕೊಪ್ಪಳಜಿಲ್ಲಾ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮನುಷ್ಯನಿಗೆ ಇರಬೇಕಾದ ಮಾನವೀಯತೆ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವಂತಿತ್ತು. ತಂದೆ ತಾಯಿ ಮಾಡಿದ ತಪ್ಪಿಗೆ ಮಕ್ಕಳಿಗೆ ಸಿಗಬೇಕಾದ ಹಕ್ಕುಗಳಿಂದ ವಂಚಿತರಾಗಬಾರದು ಎನ್ನುವ ಉತ್ತಮ ಉದ್ದೇಶದ ಕಾರ್ಯಕ್ರಮ ಗಮನಸೆಳೆಯಿತು. ಇಂತಹ ಕಾರ್ಯಕ್ರಮಗಳಿಂದ ಖೈದಿಗಳಲ್ಲಿ ಬದಲಾವಣೆಬರುವಂತಾಗಬೇಕು. ಖೈದಿಗಳ ಮಕ್ಕಳು ಜೈಲಿನಲ್ಲಿ ಅನಾಥಪ್ರಜ್ಙೆ ಅನುಭವಿಸುವಂತಾಗಗಬಾರದು. ಕಾರ್ಯಕ್ರಮ ಸಂಘಟಕರಿಗೆ ಅಭಿನಂದನೆಗಳು ಸಲ್ಲಿಸಬೇಕು.

Please follow and like us:
error