ಜೆಸ್ಕಾಂ ಕ್ರೀಡಾಕೂಟಕ್ಕೆ ಚಾಲನೆ


ಕಾರಟಗಿ : ಪಟ್ಟಣದ ಕೆಪಿಟಿಸಿಎಲ್ ಮತ್ತು ಜೇಸ್ಕಾಂ ವತಿಯಿಂದ ಕಾರಟಗಿ ಉಪವಿಭಾಗದ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಅಧಿಕಾರಿಗಳ ಮತ್ತು ನೌಕರರು ಹಾಗೂ ಗುತ್ತಿಗೆದಾರರು ಮತ್ತು ಗ್ರಾಮ-ವಿದ್ಯುತ್-ಪ್ರತಿನಿಧಿಗಳ ಉಪಸ್ಥಿತಿಯಲ್ಲಿ 2021ನೇ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅರುಣ್ ಕುಮಾರ್ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು ನಂತರ ಕ್ರೀಡಾಕೂಟವನ್ನು ಕ್ರಿಕೆಟ್ ಆಡುವುದರ ಮೂಲಕ ಪ್ರಾರಂಭಿಸಲಾಯಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಾಗರಾಜ ಕುರೇಕೊಪ್ಪ ಮತ್ತು ಗಂಗಾವತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಲ್ಲಾಭಕ್ಷಿ ಗುತ್ತಿಗೆದಾರರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (659) ಅಧ್ಯಕ್ಷ ನರಸಪ್ಪ. ಮತ್ತು ನವಲಿ ಶಾಖಾಧಿಕಾರಿಗಳಾದ ನಾಗಪ್ಪ, ಶ್ರೀರಾಮನಗರದ ಪ್ರಸಾದ್ ಮತ್ತು ಶಂಕ್ರಮ್ಮ ಪ್ರಭಾವತಿ ಕ್ರೀಡಾಕೂಟದಲ್ಲಿ ಎಲ್ಲಾ ಕೆಪಿಟಿಸಿಎಲ್ ಮತ್ತು ಜೆಸ್ಕಾಂ ಸಿಬ್ಬಂದಿ ವರ್ಗ ಲೈನ್ ಮ್ಯಾನ್ ಗಳು ಭಾಗವಹಿಸಿದ್ದರು.

Please follow and like us:
error