fbpx

ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ಟ್ ,ಸ್ಥಾಪನೆ, ಪ್ರಯಾಣಿಕರ ತಪಾಸಣೆ ಕಡ್ಡಾಯ: ಬಿ.ಸಿ.ಪಾಟೀಲ್

ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆ

ಕೊಪ್ಪಳ,): #ಅಂತರ್‌ಜಿಲ್ಲಾ ಓಡಾಟದಿಂದ #ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ಜಿಲ್ಲೆಯ #ಗಡಿ ಭಾಗಗಳಲ್ಲಿ #ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ ಜಿಲ್ಲೆಗೆ ಆಗಮಿಸುವವರ ಕಡ್ಡಾಯ ತಪಾಸಣೆ ನಂತರವೇ #ಜಿಲ್ಲೆಗೆ ಪ್ರವೇಶ ನೀಡಲು #ಕ್ರಮಕೈಗೊಳ್ಳಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಜಿಲ್ಲಾ ಪೊಲೀಸ್ #ವರಿಷ್ಠಾಧಿಕಾರಿಗೆ #ಸೂಚನೆ_ನೀಡಿದರು.

ಜಿಲ್ಲಾ ಪಂಚಾಯತ್ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ #ಇಂದು ನಡೆದ ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ #ಪ್ರಗತಿ ಪರಿಶೀಲನಾ ಸಭೆಯ #ಅಧ್ಯಕ್ಷತೆ_ವಹಿಸಿ ಅವರು #ಮಾತನಾಡಿದರು.

ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಲ್ಲಿ ಅಂತರ್‌ಜಿಲ್ಲಾ, ಅಂತರರಾಜ್ಯ ಪ್ರಯಾಣ ಮಾಡಿದವರ ಪ್ರಮಾಣವೇ ಹೆಚ್ಚಿದೆ. ಆದ್ದರಿಂದ ಜಿಲ್ಲೆಯ ಗಡಿ ಭಾಗಗಳಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್‌ಪೋಸ್ಟ್ ಸ್ಥಾಪಿಸಿ, ಜಿಲ್ಲೆಗೆ ಬರುವವರನ್ನು ಥರ್ಮಲ್ ಸ್ಕಾö್ಯನರ್ ಬಳಸಿ ತಪಾಸಣೆ ನಡೆಸಬೇಕು. ಗ್ರಾಮೀಣ ಭಾಗಗಳಲ್ಲಿ ಜನರು ಗುಂಪು ಗುಂಪಾಗಿ ಸೇರುವುದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಬೀಟ್‌ಗಳನ್ನು ಹೆಚ್ಚಿಸಿ, ಮೈಕ್‌ಗಳ ಮೂಲಕ ಗ್ರಾಮೀಣರಲ್ಲಿ ತಿಳುವಳಿಕೆ ಮೂಡಿಸಿ, ಜನರು ಗುಂಪು ಸೇರದಂತೆ ನೋಡಿಕೊಳ್ಳಿ ಎಂದು ಅವರು ಪೊಲೀಸ್ ವರಿ಼ಷ್ಠಾಧಿಕಾರಿಗೆ ಸೂಚಿಸಿದರು.

ಗಂಗಾವತಿಯಲ್ಲಿ ಕೋವಿಡ್ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ #ನಾಳೆ_ರಾತ್ರಿ 08 ಗಂಟೆಯಿAದ 10 ದಿನಗಳ ಕಾಲ ಶ್ರೀರಾಮನಗರ ಸೇರಿದಂತೆ ಗಂಗಾವತಿಯಲ್ಲಿ ಲಾಕ್‌ಡೌನ್ ಜಾರಿಗೊಳಿಸಿ. #ಆಹಾರ ಪದಾರ್ಥ, ಔಷಧ ಅಂಗಡಿ, ಹಾಲಿನ ಡೈರಿ ಸೇರಿದಂತೆ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚುವಂತೆ #ಕ್ರಮಕೈಗೊಳ್ಳಿ ಎಂದು #ಹೇಳಿದರು.

ರಾಜ್ಯ ಸರ್ಕಾರವು ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಹೋಮ್ ಐಸೋಲೇಷನ್ ಮಾಡಲು ನಿರ್ದೇಶನ ನೀಡಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಪ್ರತ್ಯೇಕ ಮಲಗುವ ಕೋಣೆ, ಸ್ನಾನಗೃಹ ಮುಂತಾದವುಗಳ ಕೊರತೆ ಇರುತ್ತದೆ. ಅಂತವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ. ಎಲ್ಲ ರೀತಿಯ ಪ್ರತ್ಯೇಕ ಸೌಲಭ್ಯವಿದ್ದಲ್ಲಿ ಮಾತ್ರ ಸೋಂಕಿತರು ಬಯಸಿದಲ್ಲಿ ಅವರ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಕ್ವಾರಂಟೈನ್ ಸೀಲ್ ಇರುವ ವ್ಯಕ್ತಿ ನಿಯಮ ಮೀರಿ ಮನೆ ಹೊರಗೆ ಬಂದಲ್ಲಿ ಅವರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಕೋವಿಡ್ ಕೇರ್ ಕೇಂದ್ರಗಳಲ್ಲಿರುವವರಿಗೆ ಉತ್ತಮ ಆಹಾರ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ಕ್ರಮ ಕೈಗೊಂಡು ಆರೋಗ್ಯಕರ ಆಹಾರ ನೀಡಿ. ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿರುವ ರೋಗಿಗಳಿಗೆ ಉತ್ತಮ ಆಹಾರ ಮತ್ತು ಮಾನಸಿಕ ಬೆಂಬಲದ ಅಗತ್ಯವಿರುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಆಹಾರ ಒದಗಿಸಿ. ಪ್ರತಿದಿನ ಕೇಂದ್ರಗಳ ಸ್ಯಾನಿಟೈಜೇಷನ್, ಸ್ನಾನಗೃಹ, ಶೌಚಾಲಯಗಳ ಸ್ವಚ್ಛತೆಯನ್ನು ಕಡ್ಡಾಯವಾಗಿ ಮಾಡಿಸಿ ಎಂದು ಅವರು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಂಬುಲನ್ಸ್ ಇರಬೇಕು. ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಅಂಬುಲನ್ಸ್ ಮೂಲಕವೇ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು. ಗಂಗಾವತಿಯಲ್ಲಿ ಸೋಂಕಿತ ಮಹಿಳೆಯೊಬ್ಬರು ಸಮರ್ಪಕ ಮಾಹಿತಿ ಕೊರತೆಯಿಂದ ಆಸ್ಪತ್ರೆಗೆ ನಡೆದುಕೊಂಡು ಹೋಗಿದ್ದು ಮಾಧ್ಯಮದಲ್ಲಿ ವರದಿಯಾಗಿತ್ತು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಿ. ಕೋವಿಡ್ ಕುರಿತು ಜಿಲ್ಲೆಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಬಂದಿರುವ ಕರೆಗಳು, ನೀಡಿದ ಮಾಹಿತಿಯ ವಿವರವನ್ನು ಸಲ್ಲಿಸಿ. ಪ್ರಸ್ತುತ ಕರಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾಗಬಹುದು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಮಾಣದ ಆರೋಗ್ಯ ಸಿಬ್ಬಂದಿ, ಲ್ಯಾಬ್ ತಂತ್ರಜ್ಞರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಿ. ಪ್ರತಿದಿನದ ಮಾದರಿ ಪರೀಕ್ಷೆಗಳನ್ನು ಹೆಚ್ಚಿಸಿ. #ಮದುವೆ ಮತ್ತು ಸಹಜ ಮರಣಗಳ ಸಂದರ್ಭದಲ್ಲಿ ಬಹುತೇಕ ಕಡೆಗಳಲ್ಲಿ ಜಿಲ್ಲಾಡಳಿತದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮದುವೆಗೆ ಅನುಮತಿ ನೀಡುವಾಗ ಪಾಲಿಸಬೇಕಾದ ನಿಯಮಗಳ ಕುರಿತು ತಿಳಿಸಿ ಕಡ್ಡಾಯ ಪಾಲಿಸದಿದ್ದರೆ #ಕಾನೂನು_ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ. ಸಹಜ ಸಾವು ಪ್ರಕರಣಗಳಲ್ಲಿ ಅಧಿಕ ಜನ ಸೇರದಂತೆ ಮತ್ತು ಆದಷ್ಟು ಬೇಗ ಮೃತದೇಹದ ಅಂತ್ಯಸAಸ್ಕಾರ ನಡೆಸುವಂತೆ ಸೂಚನೆ ನೀಡಿ.

ಸೋಂಕಿತರು ಸಾವನ್ನಪ್ಪಿದಾಗ ಅವರ ಅಂತ್ಯಸAಸ್ಕಾರಕ್ಕೆ ಗ್ರಾಮಗಳಲ್ಲಿ ಅವಕಾಶ ನೀಡುತ್ತಿಲ್ಲ. ಆದ್ದರಿಂದ ಪ್ರತಿ ತಾಲ್ಲೂಕಿನಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ಸೋಂಕಿತರ ಜಾಗಕ್ಕೆ ಮೀಸಲಿರಿಸಿ ಜಿಲ್ಲಾಧಿಕಾರಿಗಳು ಆದೇಶಿಸಬೇಕು.

ಈಗಾಗಲೇ ಕೊಪ್ಪಳ ಮತ್ತು ಗಂಗಾವತಿಯಲ್ಲಿ ಈ ಕುರಿತು ಆದೇಶ ಜಾರಿಯಾಗಿದ್ದು, ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿಯೂ ಈ ಆದೇಶವನ್ನು ಜಾರಿಗೊಳಿಸಿ ಅಗತ್ಯ ಕ್ರಮ ಕೈಗೊಳ್ಳಿ. ಹಾಗೆಯೇ ಜಿಲ್ಲೆಯಲ್ಲಿ ಸೋಂಕು ಹೆಚ್ಚಿರುವ ಪ್ರದೇಶಗಳ ಮಾಹಿತಿ ನೀಡಿ. ಅಗತ್ಯ ಬಿದ್ದಲ್ಲಿ ಲಾಕ್‌ಡೌನ್ ಜಾರಿಗೊಳಿಸಿ ಸೋಂಕು ಹರಡುವಿಕೆ ಪ್ರಮಾಣವನ್ನು ಕಡಿಮೆಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿರುವ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಿ. ಕೋವಿಡ್ ಪ್ರಯೋಗಾಲಯಕ್ಕೆ ಅಗತ್ಯವಿರುವ ಸಂಖ್ಯೆಯ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಿ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯವನ್ನು ತೀವ್ರಗೊಳಿಸಿ, ಸೋಂಕು ಹರಡುವಿಕೆಯನ್ನು ನಿಯಂತ್ರಿಸಿಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದರAತೆ ಜಿಲ್ಲಾಡಳಿತದಿಂದ ಏಳು ಮೊಬೈಲ್ ಸ್ಯಾಂಪಲ್ ಯುನಿಟ್‌ಗಳನ್ನು ನೀಡಲಾಗಿದ್ದು, ಇವುಗಳಿಂದ ಸ್ಥಳೀಯವಾಗಿ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಸದ್ಯ #5ಸಾವಿರ ಆ್ಯಂಟಿಜನ್ ಕಿಟ್‌ಗಳನ್ನು ಖರೀದಿಸಲಾಗಿದ್ದು, ಇನ್ನೂ #10ಸಾವಿರ ಆ್ಯಂಟಿಜನ್ ಕಿಟ್‌ಗಳನ್ನು ಖರೀದಿಸಿ, ಶೀಘ್ರ ಫಲಿತಾಂಶಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲಾಡಳಿತದಿಂದ ಇದುವರೆಗೆ ಕೈಗೊಂಡಿರುವ ಕೋವಿಡ್ ನಿಯಂತ್ರಣ ಕ್ರಮಗಳು, ಅನುದಾನದ ಬಳಕೆ, ಪ್ರಯೋಗಾಲಯದ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಸಚಿವರಿಗೆ ವಿವರ ನೀಡಿದರು.

ಸಭೆಯಲ್ಲಿ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಕೃಷಿ ಇಲಾಖೆಯಿಂದ ಹೊರತಂದಿರುವ ಹತ್ತಿಯಲ್ಲಿ #ಥಿಂಕ್‌ಬೋಲ್‌ವರ್ಮ್ ಹುಳುವಿನ ಬಾಧೆ ಹಾಗೂ ಭತ್ತದಲ್ಲಿ #ಸೈನಿಕಹುಳುವಿನ ಬಾಧೆ ನಿಯಂತ್ರಣ ಕ್ರಮಗಳ ಕುರಿತು #ಕರಪತ್ರವನ್ನು ಸಚಿವರು #ಬಿಡುಗಡೆಮಾಡಿದರು.

(ಫೋಟೋ ಕಳುಹಿಸಿದೆ.)

Please follow and like us:
error
error: Content is protected !!