ಜಿಲ್ಲೆಯಲ್ಲಿ ಕರೋನಾ ಮಹಾಸ್ಪೋಟ : ೨೧೫ ಪಾಜಿಟಿವ್ ಕೇಸ್ ಗಳು: ೪ ಸಾವು

ಕೊಪ್ಪಳ : ಜಿಲ್ಲೆಯಲ್ಲಿ ಇಂದು ಕರೋನಾ ಮಹಾಸ್ಪೋಟವಾಗಿದೆ. ಇಂದು ಒಂದೇ ದಿನ ೨೧೫ ಪ್ರಕರಣಗಳು ವರದಿಯಾಗಿವೆ. ಇದು ಇವರೆಗಿನ ಅತ್ಯಧಿಕ ಸಂಖ್ಯೆಯ ಪ್ರಕಣವಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ೧೧೦ ಕೊಪ್ಪಳ ತಾಲೂಕಿನಲ್ಲಿ ೫೩, ಕುಷ್ಟಗಿ ತಾಲ್ಲೂಕಿನಲ್ಲಿ ೨೪ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ೨೮ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ೧೪೯೩ ತಲುಪಿದೆ. ಇಂದು ೩೬ ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. ಇಂದು ನಾಲ್ವರು ಸಾವನ್ನಪ್ಪಿದ್ದಾರೆ. ಈವರೆಗೆ ಸಾವನ್ನಪ್ಪಿದವರ ಸಂಖ್ಯೆ ೩೦ಕ್ಕೆ ತಲುಪಿದೆ. ೮೩೯ ಜನರನ್ನು ಡಿಸ್ಚಾರ್ಜ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಶಾಲ್ ಕಿಶೋರ್ ಹೇಳಿದ್ದಾರೆ.

Please follow and like us:
error