ಜಿಲ್ಲೆಯಲ್ಲಿ ಆಕ್ಸಿಜನ್, ರೆಮಿಡಿಸ್ವೆರ್ ಕೊರತೆ ಇಲ್ಲ- ವಿಕಾಸ್ ಕಿಶೋರ ಸುರಳ್ಕರ್

ಕನ್ನಡನೆಟ್ ಕೊಪ್ಪಳ : ಜಿಲ್ಲೆಯಲ್ಲಿ ಆಕ್ಸಿಜನ್, ರೆಮಿಡಿಸ್ವೆರ್ ಕೊರತೆ ಇಲ್ಲ. ಜಿಲ್ಲೆಯಲ್ಲಿಯೇ ಆಕ್ಸಿಜನ್ ತಯಾರಿಕೆ ಘಟಕಗಳು ಇವೆ. ಇವುಗಳಿಂದ ಇಡೀ ರಾಜ್ಯಕ್ಕೆ ಆಕ್ಸಿಜನ್ ಸರಬರಾಜು ಆಗುತ್ತಿದೆ ಎಂದು
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾಹಿತಿ ನೀಡಿದರು. ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಬುಧವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಕೋವಿಡ್-19 ಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಡಳಿತದಿಂದ ಕೈಗೊಂಡ ಕ್ರಮಗಳು, ವೆಂಟಿಲೇಟರ್,ಆಕ್ಸಿಜನ್ ಮತ್ತು ಕೋವಿಡ್-19 ಕೇಂದ್ರದಲ್ಲಿರುವ ಚಿಕಿತ್ಸಾ ಹಾಗೂ ಅಗತ್ಯ ಸೌಲಭ್ಯಗಳ ಕುರಿತಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾಧ್ಯಮ ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ತೊಂದರೆ ಹಾಗೂಬಂದ್ ಆಗಿಲ್ಲ.ಕೋವಿಡ್ ವಾರ್ಡನಲ್ಲಿ 29 ವೆಂಟಿಲೇಟರ್ ವರ್ಕಿಂಗ್ ಇವೆ.ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ 76 ಬೆಡ್ ಗಳಿವೆ.
ಜಂಬೂ ಸಿಲಿಂಡರ್ ಆಧಾರಿತ ಎಎಂ ಸೆಂಟರ್ ನಲ್ಲಿ 50 ಬೆಡ್,
ಗಂಗಾವತಿಯಲ್ಲಿ 80 ಬೆಡ್ ಗಳಿವೆ , ಇನ್ನೂ 30 ಬೆಡ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಹೋಂ ಐಸೂಲೇಶನ್ ಆಗಿದಿದ್ದವರು ಕೋವಿಡ್ ಕೇರ್ ಸೆಂಟರ್ ಗಳಿಗೆ ಬರಬಹುದು. ಖಾಸಗಿಯಾಗಿ ಕೋವಿಡ್ ಆಸ್ಪತ್ರೆ ಮಾಡಲು ಮಸೀದಿ, ಕಲ್ಯಾಣ ಮಂಟಪದವರು ಬೇಡಿಕೆ ಸಲ್ಲಿಸಿದ್ದು,ಸದ್ಯ ನಮ್ಮಲ್ಲಿ ಇನ್ನು ಅವಕಾಶ ಇರುವದರಿಂದ ಅವರಿಗೆ ನೀಡಿಲ್ಲ. ಆರ್ಯುವೇದಿಕ ಆಸ್ಪತ್ರೆ ಯಲ್ಲಿ 100 ಆಕ್ಸಿಜನ್ ಬೆಡ್ ಮಾಡುವದಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 1200 ಕೋವಿವ್ಯಾಕ್ಸಿನಗಳು ನಮ್ಮಲ್ಲಿ ಇವೆ. ಇನ್ನು 40% ಜನರಿಗೆ ವ್ಯಾಕ್ಸಿನ್ ನೀಡಬೇಕಾಗಿದೆ. ವ್ಯಾಕ್ಸಿನ್ ಬಂದ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಕ್ರಮತೆಗೆದುಕೊಂಡಿದೆ.
ದಿನಸಿ ಅಂಗಡಿಗಳಲ್ಲಿ ಬೆಲೆ ಹೆಚ್ಚಳ ಮಾರಾಟದ ಮೇಲೆ ನಿಗಾ ಇಡಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿಗೆ ಬಿಲ್ ಮಾಡಿದ್ರೆ
ಡಿಹೆಚ್ ಓ ಅವರಿಗೆ ದೂರು ಸಲ್ಲಿಸಬಹುದು.ಆರ್ ಎಂಪಿ ಡಾಕ್ಟರ್ ಗಳು ಕೋವಿಡ್ ಸಂಬಂಧಿಸಿದಂತೆ ಯಾವುದೇ ಚಿಕಿತ್ಸೆ ಔಷಧೀಯ ನ್ನು ನೀಡಬಾರದು ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ.
ಖಾಸಗಿ ಅಂಬುಲೈನ್ಸ್ ನವರಿಗೆ ದರ ನಿಗದಿ ಪಡಿಸಿ ಆದೇಶ ಹೊರಡಿಸಲಾಗುತ್ತಿದೆ.
ವಲಸೆ ಕಾರ್ಮಿಕರು ಕುಷ್ಟಗಿ ಗಂಗಾವತಿ ಕಡೆ ಹೆಚ್ಚು ಬರುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಟೇಸ್ಟ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು..

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಕಿಮ್ಸ್ ನಿರ್ದೇಶಕ ಡಾ. ಇಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error