ಕೃಷಿ ಜೊತೆ ಜೊತೆಗೆ ಕೈಗಾರಿಕೆ ವಸಾಹತು ಸ್ಥಾಪನೆಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳು
ವೆಲ್ ಕಮ್ ಟು ಕೊಪ್ಪಳ ಲ್ಯಾಂಡ್ ಆಫ್ ಅಪಾಚುರ್ನಿಟಿಸ್ ಜನರ ಉದ್ಯೋಗ ಮತ್ತು ಉನ್ನತಿ

- ನೇರ , ಪರೋಕ್ಷ ಉದ್ಯೋಗ ಸೃಷ್ಟಿಯಿಂದ ಕೊಪ್ಪಳ ಜಿಲ್ಲೆಯ ಜನರ ಅಭ್ಯುದಯ |
- ಫಾರಿನ್ ಇನ್ವೆಸ್ಟರ್ ಕೌನ್ಸಿಲ್ (ಎಫ್.ಐ.ಸಿ) ಸಭೆಯಲ್ಲಿ ಆರ್ಥಿಕ ವಲಯ ಸ್ಥಾಪನೆ ಹೂಡಿಕೆದಾರರಿಗೆ ಮನವರಿಕೆ
ಕೊಪ್ಪಳ :ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತರ ಕರ್ನಾಟಕ ಬಗೆಗಿನ ಕಾಳಜಿ ಹಾಗೂ ಉತ್ತರ ಕರ್ನಾಟಕದವರೆ ಆದ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವರಾದ ಜಗದೀಶ ಶೆಟ್ಟರ್ ಅವರ ಮಹತ್ವಾಕಾಂಕ್ಷೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ವಿಪುಲ ಅವಕಾಶಗಳು ಇವೆ ಎಂದು ಭಾಜಪ ಧುರೀಣ ಹಾಗೂ ಫಾರಿನ್ ಇನ್ವೆಸ್ಟರ್ ಕೌನ್ಸಿಲ್ (ಎಫ್.ಐ.ಸಿ) ಸದಸ್ಯರಾಗಿ ನೇಮಕಗೊಂಡಿರುವ ಅಮರೇಶ ಕರಡಿ ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಶನಿವಾರದಂದು ಬೃಹತ್ ಕೈಗಾರಿಕೆ ಸಚಿವರ ನೃತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಫಾರಿನ್ ಇನ್ವೆಸ್ಟರ್ ಕೌನ್ಸಿಲ್ (ಎಫ್.ಐ.ಸಿ) ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದಕ್ಕೆ ಪೂರಕ ಎನ್ನುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣನವರ ಅವಿರತ ಪ್ರಯತ್ನದಿಂದಾಗಿ ರಾಷ್ಟ್ರೀಯ ಹೆದ್ಧಾರಿ ಮತ್ತು ರೈಲ್ವೆ ಮಾರ್ಗಗಳ ಅಭಿವೃದ್ಧಿಯ ವೇಗ ಇಂದು, ಕೊಪ್ಪಳದಲ್ಲಿ ಉದ್ಯಮ ಸ್ಫಾಪನೆಗೆ ಕೈ ಬಿಸಿ ಆಹ್ವಾನಿಸುವಂತಿದೆ ಹಾಗೂ ಆಹ್ವಾನ ನೀಡುತ್ತಿವೆ ಎಂದಿದ್ದಾರೆ.
ಜಿಲ್ಲೆಯು ಆರ್ಥಿಕ ವಲಯ ಸ್ಥಾಪನೆಗೆ ಸೂಕ್ತ ಸ್ಥಳವಾಗಿದೆ. ಜಿಲ್ಲೆಯಲ್ಲಿ ಅಂಜನಾದ್ರಿಯಿಂದ ಅಯೋಧ್ಯಾವರೆಗೂ ಏರ್ಪೋರ್ಟ್ ನಿರ್ಮಾಣ ಮಾಡಿದರೆ ಭವಿಷ್ಯದಲ್ಲಿ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ನೆರವಾಗಲಿದೆ. ಜೊತೆಗೆ ಫುಡ್ ಪಾರ್ಕ್ ನಿರ್ಮಾಣ ಮಾಡಿದರೆ ಅದಕ್ಕೂ ಜಿಮೀನು ಇದೆ. ಇದಲ್ಲದೇ ಅಂತಾರಾಷ್ಟ್ರೀಯ ಆರ್ಥಿಕ ವಲಯ ಸ್ಥಾಪನೆಗೂ ಅವಕಾಶವಿದ್ದು ಹೂಡಿಕೆದಾರರು ಈ ಬಗ್ಗೆ ಕಾಳಜಿ ವಹಿಸಬೇಕೆಂದು ಪ್ರಸ್ತಾವನೆಯನ್ನು ಮಂಡಿಸಿರುವರು.
ಜಿಲ್ಲೆಯ ಜನರ ಉದ್ಯೋಗ ಮತ್ತು ಉನ್ನತಿಗೆ. ಕೊಪ್ಪಳವು ಉತ್ತಮ ಭೌಗೋಳಿಕ ವಾತವರಣ ಇದೆ, ಪ್ರಕೃತಿ ಸಹಜ ಸಂಪನ್ಮೂಲಗಳು, ಇಲ್ಲಿನ ಜನರ ಕರಕುಶಲತೆ, ಗುಡಿ ಕೈಗಾರಿಕೆ ನೈಪುಣ್ಯತೆ, ಕೃಷಿ – ತೋಟಗಾರಿಕೆ ಸಾಧನೆ, ಪ್ರವಾಸೋಧ್ಯಮ ಮತ್ತು ಐತಿಹಾಸಿಕ ಹಿನ್ನಲೆ ಗಮನಿಸಿ ಉತ್ತರ ಕರ್ನಾಟಕ ಭಾಗಕ್ಕೆ ಕೈಗಾರಿಕೆ ವಿಸ್ತರಿಸಲು ಸಜ್ಜಾಗಿರುವ ಈ ಸಂದರ್ಭದಲ್ಲಿ, ಕೊಪ್ಪಳ ಜಿಲ್ಲೆಯನ್ನು ಕೃಷಿ ಜೊತೆ ಜೊತೆಗೆ ಕೈಗಾರಿಕ ವಸಾಹತುವನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿರುವ ವಿಫುಲ ಅವಕಾಶಗಳು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಿವೆ ಎಂದು ತಿಳಿಸಿರುವರು.