ಜಿಲ್ಲಾಡಳಿತದಿಂದ ಪ್ರಜ್ವಲನ್ ಶೀರ್ಷಿಕೆಯಡಿ ವಾಟ್ಸಪ್ ಗ್ರೂಪ್ ರಚನೆ


ಕೊಪ್ಪಳ, ಸ: ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಜ್ವಲನ್ ಎಂಬ ಶೀರ್ಷಿಕೆಯಡಿ ವಾಟ್ಸಪ್ ಗ್ರೂಪ್ ಅನ್ನು ರಚಿಸಲಾಗಿದ್ದು, ಜಿಲ್ಲೆಯಲ್ಲಿ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛಿಸುವವರಿಗೆ ಈ ಮೂಲಕ ಅಗತ್ಯ ಸಲಹೆಗಳನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
 ಜಿಲ್ಲೆಯ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛಿಸುವವರಿಗೆ ಎಲ್ಲ ತರಹದ ಆಡಳಿತಾತ್ಮಕ, ಸಾಲ ಸೌಲಭ್ಯ, ಮಾರುಕಟ್ಟೆ ಮತ್ತು ತಾಂತ್ರಿಕ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಲು ಈ ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಇದರಲ್ಲಿ ಜಿಲ್ಲಾಧಿಕಾರಿಗಳನ್ನೊಳಗೊಂಡAತೆ ಸಂಬAಧಪಟ್ಟ ಎಲ್ಲ ಇಲಾಖೆಗಳು, ತಾಂತ್ರಿಕ, ಮಾರಾಟ, ಆರ್ಥಿಕ, ಸೂಕ್ತ ಮಾನವ ಸಂಪನ್ಮೂಲದ ಮಾಹಿತಿ, ಯೋಜನಾ ವರದಿ ತಯಾರಿಕೆ, ಸಂಶೋಧನಾ ಸಂಸ್ಥೆಗಳನ್ನು ಗ್ರೂಪ್ ಒಳಗೊಂಡಿರುತ್ತದೆ. ಅವಶ್ಯಕತೆ ಇರುವ ಸ್ವಂತ ಉದ್ಯೋಗಾಕಾಂಕ್ಷಿಗಳು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಮೊ.ಸಂ. 9448544086 ಮುಖಾಂತರ ಸಂಪರ್ಕದಲ್ಲಿ ಬಂದಾಗ ಅವರ ವಿಚಾರ/ಯೋಜನೆ ಫಲಿಸುವ ಉದ್ದೇಶದಿಂದ ಈ ಗ್ರೂಪಿನ ಮುಖಾಂತರ ಜಿಲ್ಲಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ನಿಗಾವಹಿಸಲಾಗುವುದು. ಪ್ರಾರಂಭದಲ್ಲಿ ನೂರು ಪ್ರಸ್ತಾವನೆಗಳನ್ನು ಈ ಗುಂಪಿನ ಮೂಲಕ ಅನುಪಾಲನೆ ಮಾಡಿ ಯಶಸ್ಸು ಕಾಣಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

Please follow and like us:
error