ಜಿಟಿಜಿಟಿ ಮಳೆಯ ನಡುವೆಯೂ ಪೊಲೀಸ್ ಹುತಾತ್ಮ ದಿನ ಆಚರಣೆ

Kannadanet NEWS ಕೊಪ್ಪಳ

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನ ಬುಧವಾರ ಆಚರಿಸಲಾಯಿತು.
ಜಿಲ್ಲಾಧಿಕಾರಿ ಎಸ್.ವಿಕಾಸ‌ ಕಿಶೋರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಡಿ ಮಳೆಯ ನಡುವೆಯೂ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಮಳೆಯ ಜೊತೆ ಜೊತೆಯಲ್ಲಿಯೇ ಕವಾಯತು ನಡೆಯಿತು. ಹುತಾತ್ಮ ಸಿಬ್ಬಂದಿ‌ ಕುಟುಂಬಕ್ಕೆ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಗಣ್ಯರು, ಪತ್ರಕರ್ತರು, ವಿವಿಧ ಇಲಾಖೆ ಅಧಿಕಾರಿಗಳು, ವರ್ತಕರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಿಸಿ ಎಸ್.ವಿಕಾಸ ಕಿಶೋರ ಮಾತನಾಡಿ, ಈ ಆಚರಣೆ ಕೇವಲ ಸಾಂಕೇತಿಕ ಆಗಬಾರದು. ಹುತಾತ್ಮರ‌ ಕುಟುಂಬಕ್ಕೆ ನೈತಿಕ ಬೆಂಬಲ ನೀಡಿ, ಇಡೀ ಸಮಾಜ ಮತ್ತು ವ್ಯವಸ್ಥೆ ಅವರ ಜೊತೆಗೆ ಇದ್ದೇವೆ ಎಂಬುದನ್ನು ತೋರಿಸಬೇಕು ಎಂದರು. ಡಿವೈಎಸ್ಪಿಗಳಾದ ಆರ್.ಎಸ್.ಉಜ್ಜಿನಕೊಪ್ಪ, ವೆಂಕಟಪ್ಪ ನಾಯಕ, ಡಿಎಸ್ ಬಿ ಪಿಐ ರವಿ ಉಕ್ಕುಂದ,‌ ಸಿಪಿಐ ವಿಶ್ವನಾಥ ಹಿರೇಗೌಡರ, ಪಿಐ ಮಾರುತಿ ಗುಳ್ಳಾರಿ ಸೇರಿ ಇತರರು ಇದ್ದರು.

Please follow and like us:
error