ಜಿಂದಾಲ್ ನಲ್ಲಿ ಕೊರೋನಾ ಅಟ್ಟಹಾಸ- ಕುಡಿತಿನಿ ಸ್ವಯಂಪ್ರೇರಿತ ಲಾಕ್ ಡೌನ್

ಜಿಂದಾಲ್ ನಲ್ಲಿ 103 ಗಡಿ ದಾಟಿದ ಕೊರೋನಾ- ಸ್ವಯಂ ಪ್ರೇರಿತವಾಗಿ ಕುಡಿತಿನಿ ಪಟ್ಟಣ ಲಾಕ್ ಡೌನ್ ಮಾಡಲಾಗಿದೆ.

Bellary ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ, 103 ರ ಗಡಿದಾಟಿದ ಕೊರೋನಾ ಪಾಸಿಟಿವ್ ಹಿನ್ನೆಲೆ, ಇಂದಿನಿಂದ ಕುಡಿತಿನಿ ಪಟ್ಟಣ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ತೆರೆಯದಂತೆ ತಿರ್ಮಾನ ಮಾಡಿದ ಜನರು, ಇದುವರೆಗೆ ಕೊರೋನಾ ಪಾಸಿಟಿವ್ ಕುಡಿತಿನಿ ಪಟ್ಟಣದಲ್ಲಿ ಬಂದಿಲ್ಲಾ, ಸುತ್ತಮುತ್ತಲಿನ ಹಳ್ಳಿಗಳಾದ ತಿಮ್ಮಲಾಪುರ, ಸಿದ್ದಮನಹಳ್ಳಿ, ಸುಲ್ತಾನ್ ಪುರ ಗ್ರಾಮಗಳಿಗೆ ಬಂದಿದೆ. ಈ ಮಾಹಾಮಾರಿ ತಡೆಯಲು ನಾವು ಕಾನೂನು ಚೌಕಟ್ಟಿನಲ್ಲಿ ಲಾಕ್ ಡೌನ್ ಮಾಡಬೇಕು. ನಮ್ಮೂರು ನಾವು ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕೆಂದು ತಿರ್ಮಾನ ಮಾಡಿರೋ ಜನರು, ಇಂದಿನಿಂದ ಕುಡಿತಿನಿ ಲಾಕ್ ಡೌನ್ ಮಾಡಲು ತಿರ್ಮಾನ ಮಾಡಿದ್ದು, ಕೊರೋನಾ ಬಂದಾಗ 1.0 ಲಾಕ್ ಡೌನ್ ಹೇಗಿತ್ತೋ ಹಾಗೆ ಬಳ್ಳಾರಿ ತಾಲೂಕಿನ ಕುಡಿತಿನಿ ಪಟ್ಟಣದಲ್ಲಿ ಇಂದಿನಿಂದ ಇರುತ್ತದೆ.

Please follow and like us:
error