ಜಿಂದಾಲ್ ಕಂಪನಿ ನೌಕರಿನಿಗೆ ಕರೋನಾ ಪಾಜಿಟಿವ್

ಬಳ್ಳಾರಿ- ರಾಜ್ಯದ ಅತಿದೊಡ್ಡ ಉಕ್ಕು ಕಾರ್ಖಾನೆಯ ನೌಕರನಿಗೂ ಕೊರೋನಾ ವಕ್ಕರಿಸಿದೆ. ಜಿಂದಾಲ್ (JSW) ಕಾರ್ಖಾನೆಯ 35 ವರ್ಷದ ನೌಕರನಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ ಇದರಿಂದ ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಸಂಖ್ಯೆ 53 ಕ್ಕೇರಿದಂತಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿ ಇರೋ ಜಿಂದಾಲ್ ಕಾರ್ಖಾನೆಯ ಈ ನೌಕರ ತಮಿಳುನಾಡಿನ ಸೇಲಂನಲ್ಲಿರೋ ತನ್ನ ತಾಯಿಯನ್ನು ಭೇಟಿಯಾಗಿ ಬಂದಿದ್ದ- ತಾಯಿಗೆ ಕೊರೋನಾ ಪಾಸಿಟಿವ್ ಇತ್ತು- ತಮಿಳುನಾಡಿನಿಂದ ವಾಪಾಸ್ ಬಂದ ನಂತರ ಕಳೆದ ಮೂರು ದಿನಗಳ ಹಿಂದೆ ಕ್ವಾರೆಂಟೆನ್ ಮಾಡಲಾಗಿತ್ತು- ಜತೆಗೆ ಗಂಟಲು ದ್ರವ ಸಂಗ್ರಹ ಮಾಡಿ ಟೆಸ್ಟ್ ಗೆ ಕಳಿಸಲಾಗಿತ್ತು- ಇತನಿಗೆ ಸೋಂಕು ಧೃಢವಾಗಿದೆ- ಸದ್ಯ ಈತ ವಾಸವಾಗಿದ್ದ ಜಿಂದಾಲ್ ನ ವಿದ್ಯಾನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ- ಆರೋಗ್ಯ ಇಲಾಖೆಯ ಉನ್ನತ ಮೂಲಗಳ ಮಾಹಿತಿ.

ಜಿಂದಾಲ್ ನೌಕರನಿಗೆ ಪಾಸಿಟಿವ್ ಹಿನ್ನೆಲೆ- ಇತನ ಜತೆ ಪ್ರಾಥಮಿಕ ಹಂತದಲ್ಲಿ ಇದ್ದ 10 ಜನರನ್ನು ಕ್ವಾರೆಂಟೆನ್ ಮಾಡಲಾಗಿದೆ- ತೋರಣಗಲ್ಲು ಓಪಿಜೆ ಸೆಂಟರ್ ನಲ್ಲಿ ಕ್ವಾರೆಂಟೆನ್ ಮಾಡಲಾಗಿದೆ ಇವರೆಲ್ಲರನ್ನು ಇಂದು ಪರೀಕ್ಷೆ ಮಾಡಲಾಗುತ್ತದೆ ಎಂದು ಬಳ್ಳಾರಿ ಡಿಸಿ ಎಸ್.ಎಸ್. ನಕುಲ್ ಮಾಹಿತಿ ನೀಡಿದ್ದಾರೆ

Please follow and like us:
error