ಜಾನಪದ ಕ್ಷೇತ್ರಕ್ಕೆ ಡಾ.ಬಸವರಾಜ್ ಸಬರದರ ಕೊಡುಗೆ- ಸಂಕ್ಷಿಪ್ತ ಪರಿಚಯ

ಕೊಪ್ಪಳ : ಕೊಪ್ಪಳ ಮೂಲದ ಬರಹಗಾರ, ಜಾನಪದ ತಜ್ಞ ಡಾ.ಬಸವರಾಜ್ ಸಬರದ ರಿಗೆ ಈ ಸಲದ ಜಾನಪದ ಅಕಾಡೆಮಿಯ ತಜ್ಞ ಪ್ರಶಸ್ತಿ ದೊರೆತಿದೆ. ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ೧೯೫೫ ರಲ್ಲಿ ಜನನ : ಶ್ರೀ ಬಸಪ್ಪ ಶ್ರೀಮತಿ ಬಸಮ್ಮ ತಂದೆತಾಯಿಗಳು . ಕುಕನೂರಿನ ಗವಿಸಿದ್ದೇಶ್ವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ವರ್ಗದಲ್ಲಿ ತೇರ್ಗಡೆ . ಗದಗದ ಜೆ.ಟಿ.ಕಾಲೇಜಿನಲ್ಲಿ ಬಿ.ಎ ಪ್ರಥಮ ದರ್ಜೆಯಲ್ಲಿ ತೇರ್ಗಡ , ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡ ಪ್ರಥಮ ದರ್ಜೆಯಲ್ಲಿ ತೇರ್ಗಡೆ . ಇದೇ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಇನ್ ಎಪಿಗ್ರಾಫಿ ಪದವಿ . ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಯಲದಿಂದ ಡಿಪ್ಲೊಮಾ ಇನ್ ರೇಡಿಯೊ ಸರ್ಟಿಫಿಕೇಟ್ , ಗುಲಬರ್ಗಾ ವಿಶ್ವವಿದ್ಯಾಲಯದಿಂದ “ ಬಸವೇಶ್ವರ ಮತ್ತು ಪುರಂದರದಾಸ ” ತೌಲನಿಕ ಅಧ್ಯಯನ ಕುರಿತು ಪಿಎಚ್.ಡಿ ಪದವಿ ಪಡೆದಿದ್ದಾರೆ ; ೨ . ಶೈಕ್ಷಣಿಕ ಸೇವೆ : ರಾಯಭಾಗ , ತಾಳಿಕೋಟೆ , ಬೀದರ , ಔರಾದ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ , ಪ್ರಾಚಾರ್ಯರಾಗಿ ಸೇವೆಸಲ್ಲಿಸಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ , ಮುಖ್ಯಸ್ಥರಾಗಿ ಸೇವೆಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿದ್ದಾರೆ , ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ , ಬಸವಾದಿ ಶರಣಸಾಹಿತ್ಯ ಕೇಂದ್ರ , ಅಂಬಿಗರ ಚೌಡಯ್ಯ ಅಧ್ಯಯನ ಪೀಠ , ಹಡಪದಪ್ಪಣ್ಣ ಅಧ್ಯಯನ ಪೀಠ ಇವುಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ . ಗುಲಬರ್ಗಾ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ , ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ . ಕಲಾ ನಿಕಾಯದ ಡೀನ್‌ರಾಗಿ ಸೇವೆಸಲ್ಲಿಸಿದ್ದಾರೆ . ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿಗಳ ಪರೀಕ್ಷಕರಾಗಿ , ಚೇರ್‌ಮನ್‌ರಾಗಿ ಕೆಲಸ ಮಾಡಿದ್ದಾರೆ . ಬೆಂಗಳೂರು , ಶಿವಮೊಗ್ಗ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಗಳ ನೇಮಕಾತಿ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ . ೩. ಸಾಹಿತ್ಯಸೇವೆ : 1 ) ಕಾವ್ಯ , ನಾಟಕ , ವಿಚಾರ ಸಾಹಿತ್ಯದಂತಹ ಸೃಜನ ಪ್ರಕಾರಗಳಲ್ಲಿ ೪೦ ಕೃತಿಗಳು ii ) ವಿಮರ್ಶೆ , ಸಂಶೋಧನೆ , ಜಾನಪದದಂತಹ ಸೃಜನೇತರ ಪ್ರಕಾರಗಳಲ್ಲಿ ೫೦ ಕೃತಿಗಳು iii ) ವಿವಿಧ ಸಾಹಿತ್ಯ ಪ್ರಕಾರಗಳ ಗ್ರಂಥಸಂಪಾದನ ಕ್ಷೇತ್ರದಲ್ಲಿ ೮೦ ಕೃತಿ ಪ್ರಕಟಿಸಿದ್ದಾರೆ . ಒಟ್ಟು ೧೭೦ ಕೃತಿಗಳನ್ನು ೪೦೦ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ . ರಂಗಭೂಮಿ- ಚಲನಚಿತ್ರ : 1 ) ಹವ್ಯಾಸಿ ರಂಗಭೂಮಿಯ ನಟರಾಗಿ – ನಿರ್ದೇಶಕರಾಗಿ ೫೦ ಕ್ಕೂ ಹೆಚ್ಚು ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ . ii ) ಇವರು ರಚಿಸಿರುವ ಜನಪದ ಶೈಲಿಯ ಹಾಡುಗಳು , ಆಧುನಿಕ ವಚನಗಳು , ತತ್ವಪದಗಳು , ಗಜಲ್‌ಗಳು ಧ್ವನಿಸಾಂದ್ರಿಕೆಗಳಾಗಿ ( ಸಿ.ಡಿ ) ಜನಪ್ರಿಯತೆ ಗಳಿಸಿವೆ . iii ) ಕೆಲವು ಡಾಕೂಮಂತ್ರಿ ಸಿನೇಮಾಗಳಿಗೆ ಸಾಹಿತ್ಯ ರಚಿಸಿದ್ದಾರೆ : “ ಕಾಡು ಹಾದಿಯ ಹೂಗಳು ‘ ( ೨೦೧೫ ) ಚಲನಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ . ೫. ಪ್ರಶಸ್ತಿಗಳ ವಿವರ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ( ಸಾಹಿತ್ಯ ಸಾಧನೆಗಾಗಿ ) ೨೦೧೭ , ಕರ್ನಾಟಕ ನಾಟಕ ಅಕಾಡೆಮಿ ಗೌರವಪ್ರಶಸ್ತಿ , ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ , ಜಾನಪದ ಅಕಾಡೆಮಿ ಪುಸ್ತಕ ಪ್ರಶಸ್ತಿ , ಕರ್ನಾಟಕ ಸರಕಾರದ ದೇವರಾಜ ಬಹದ್ದೂರ ಪ್ರಶಸ್ತಿ , ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ , ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿಗಳು ಲಭಿಸಿವೆ . ಕಾವ್ಯಾನಂದ ಪ್ರಶಸ್ತಿ , ಕುವೆಂಪು ಪ್ರಶಸ್ತಿ , ಗೊರೂರು ಪ್ರಶಸ್ತಿ , ಕಯ್ಯಾರ ಕಿಞಣ್ಣರೈ ಪ್ರಶಸ್ತಿ , ಜಿ.ಎಸ್ . ಎಸ್ ಪ್ರಶಸ್ತಿ , ರತ್ನಾಕರವರ್ಣಿ ಪ್ರಶಸ್ತಿ , ಮುದ್ದಣ ಪ್ರಶಸ್ತಿ , ಸುವರ್ಣಸಿರಿ ಪ್ರಶಸ್ತಿ , ಅಕ್ಷರಲೋಕದ ನಕ್ಷತ್ರ ಪ್ರಶಸ್ತಿ , ಕರ್ನಾಟಕ ಜ್ಯೋತಿ ಪ್ರಶಸ್ತಿ , ಶರಣಸಾಹಿತ್ಯ ಪ್ರಶಸ್ತಿ , ಶಿವರಾತ್ರೀಶ್ವರ ಪ್ರಶಸ್ತಿ , ಚುಟುಕು ಭೂಷಣ ಪ್ರಶಸ್ತಿ , ವಿಶ್ವೇಶ್ವರಯ್ಯ ದಶಮಾನೋತ್ಸವ ಪ್ರಶಸ್ತಿ , ನಿರತಸಾಹಿತ್ಯ ಪ್ರಶಸ್ತಿ , ಚಿರಂತನ ಸಾಹಿತ್ಯ ಪ್ರಶಸ್ತಿ , ಹೀಗೆ ೩೦ ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ . ೬. ಸದ್ಯದ ವಿಳಾಸ : ಡಾ . ಬಸವರಾಜ ಸಬರದ , “ ವಿಜಯಶ್ರೀ ನಿಲಯ ” ಮನ ನಂ .1 , 2 ನೇ ಮೇನ್ , 2 ನೇ ಕ್ರಾಸ್ , ಅಮರಜ್ಯೋತಿ ಲೇಔಟ್ , ಕುಪ್ಪಸ್ವಾಮಿ ಪಾರ್ಕ್ ಹತ್ತಿರ , ಹೆಬ್ಬಾಳ , ಆರ್.ಟಿ. ನಗರ ಅಂಚೆ , ಬೆಂಗಳೂರು -560032 ಮೊ . ನಂ.- 911020 $$ 95 ಮತ್ತು 9886619220

ಜಾನಪದ ಕ್ಷೇತ್ರಕ್ಕೆ ಡಾ.ಬಸವರಾಜ ಸಬರದವರ ಕೊಡುಗೆ

I. ಪ್ರಮುಖ ಕೃತಿಗಳು ೧. ಜನಪದ ಸಾಹಿತ್ಯದಲ್ಲಿ ಪ್ರಣಯ ಚಿತ್ರಣ ಕರ್ನಾಟಕ ವಿಶ್ವವಿದ್ಯಾಲಯ , ಧಾರವಾಡ – ೧೯೮೨

೨. ಬಂಡಾಯಕಾವ್ಯ ಮತ್ತು ಜಾನಪದ ಕರ್ನಾಟಕ ಜಾನಪದ ಪದ ಅಕಾಡೆಮಿ , ಬೆಂಗಳೂರು- ೧೯೯೭

೩. ಬಂಡಾಯ ಜಾನಪದ ಕನ್ನಡ ವಿಶ್ವವಿದ್ಯಾಲಯ , ಹಂಪಿ – ೨೦೦೬

೪. ಬೇಂದ್ರಕಾವ್ಯ ಮತ್ತು ಜಾನಪದ ಗುಲ್ಬರ್ಗಾ ವಿಶ್ವವಿದ್ಯಾಲಯ , ಕಲಬುರ್ಗಿ – ೨೦೦೮

೫ , ಬಹುಮುಖಿ ಜಾನಪದ ಪಲ್ಲವಿ ಪ್ರಕಾಶನ , ಕಲಬುರ್ಗಿ – ೨೦೦೮

೬. ಜನಪದ ದೈವಗಳು ಕನ್ನಡ ವಿಶ್ವವಿದ್ಯಾಲಯ , ಹಂಪಿ – ೨೦೧೦

೭ ಜಾನಪದ ಆಯಾಮಗಳು ಕನ್ನಡ ವಿಶ್ವವಿದ್ಯಾಲಯ , ಹಂಪಿ – ೨೦೧೦

೮. ಜಾನಪದೀಯ ಮಹಿಳಾ ವಿಮರ್ಶೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ , ಬೆಳಗಾವಿ – ೨೦೧೭ II . ತತ್ವಪದ ಸಾಹಿತ್ಯದ ಕೃತಿಗಳು

೯ , ಗುಲ್ಬರ್ಗಾ ಜಿಲ್ಲೆಯ ಅನುಭಾವಿ ಕವಿಗಳು ( ತತ್ವಪದಕಾರರು ) ಕನ್ನಡ ವಿಶ್ವವಿದ್ಯಾಲಯ , ಹಂಪಿ – ೧೯೯೫

೧೦. ರಾಯಚೂರು ಜಿಲ್ಲೆಯ ತತ್ವಪದಕಾರರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ , ರಾಯಚೂರು – ೧೯೯೬

೧೧. ಹೈದರಾಬಾದ್ ಕರ್ನಾಟಕದ ತತ್ವಪದಕಾರರು ಕನ್ನಡ ವಿಶ್ವವಿದ್ಯಾಲಯ , ಹಂಪಿ – ೨೦೦೦

೧೨. ಬೀದರ್ ಜಿಲ್ಲೆಯ ತತ್ವಪದಕಾರರು ಬಸವಧರ್ಮ ಪ್ರಚಾರ ಕೇಂದ್ರ ಹುಲಸೂರು , ಬಸವಕಲ್ಯಾಣ – ೨೦೦೧

೧೩. ಕೊಪ್ಪಳ ಜಿಲ್ಲೆಯ ಅನುಭಾವಿ ಕವಿಗಳು ಗುಲ್ಬರ್ಗಾ ವಿಶ್ವವಿದ್ಯಾಲಯ , ಕಲಬುರ್ಗಿ – ೨೦೧೩

೧೪. ಕಡಕೋಳ ಮಡಿವಾಳಪ್ಪನವರ ಸಾಹಿತ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ , ಕಲಬುರ್ಗಿ – ೨೦೧೬ III . ಸಂಪಾದಿತ ಕೃತಿಗಳು

೧೫ , ಕೂಡಲೂರ ಬಸಲಿಂಗ ಶರಣ ಹಾಗೂ ಇತರರ ತತ್ವಪದಗಳು ಕನಕದಾಸ ಅಧ್ಯಯನ ಕೇಂದ್ರ , ಬೆಂಗಳೂರು – ೨೦೧೬

೧೬. ತಿರುಳನ್ನಡ ನಾಡಿನ ತತ್ವಪದಗಳು ಕನಕದಾಸ ಅಧ್ಯಯನ ಕೇಂದ್ರ , ಬೆಂಗಳೂರು – ೨೦೧೭ IV . ಪ್ರಕಟಿತ ಜಾನಪದ ಲೇಖನಗಳು ಜಾನಪದ ಗಂಗೋತ್ರಿ , ಜಾನಪದ ಕರ್ನಾಟಕ ಜಾನಪದ ಜಗುಲಿ , ಲೋಕಜಾನಪದ ಈ ಮೊದಲಾದ ಪತ್ರಿಕೆಗಳಲ್ಲಿ ೫೦ ಲೇಖನಗಳು ಪ್ರಕಟವಾಗಿವೆ .

ಪ್ರಶಸ್ತಿಗಳು ೧. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ – ೨೦೦೯ ೨. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೩. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ೪. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಹಾಗೂ ಇತರ ೪೦ ಪ್ರಶಸ್ತಿ ಲಭಿಸಿವೆ . – ೨೦೧೭

Please follow and like us:
error