ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರಕಟ : ಡಾ.ಸಬರದ, ಸುಗತೇಕರ, ಗ್ಯಾರಂಟಿ ರಾಮಣ್ಣರಿಗೆ ಪ್ರಶಸ್ತಿ

ಚಾಮರಾಜನಗರದಲ್ಲಿ 2020 ನೇ ಸಾಲಿನ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದೆ.

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ.ಮಂಜಮ್ಮ ಜೋಗತಿ ಅವರು ಪತ್ರಿಕಾಗೋಷ್ಠಿ ನಡೆಸಿ 2020 ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ 30 ಜಿಲ್ಲೆಗಳ ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದತಜ್ಞರ ಪಟ್ಟಿಯನ್ನು ಪ್ರಕಟಿಸಿದರು. ಕೊಪ್ಪಳ ಮೂಲದ ಪ್ರಸ್ತುತ ಕಲ್ಬುರ್ಗಿ ಜಿಲ್ಲೆಯಲ್ಲಿರುವ ಡಾ.ಬಸವರಾಜ್ ಸಬರದರಿಗೆ ಡಾ.ಬಿ.ಎಸ್.ಗದ್ದಗೀಮಠ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಗಾಯತ್ರಿ ನಾವಡರಿಗೆ ಡಾ.ಜೀ. ಶಂ.ಪ ಪ್ರಶಸ್ತಿ ತಜ್ಞ ಪ್ರಶಸ್ತಿ ದೊರೆತಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಅಕಾಡೆಮಿಯ ಸದಸ್ಯರಾದ ಸಿ.ಎಂ.ನರಸಿಂಹ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ ಇದ್ದರು.

Please follow and like us:
error