ಜನ ಒತ್ತಾಯ ಮಾಡಿದ್ರೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ- ಆನಂದಸಿಂಗ್

ಹೊಸಪೇಟೆ : ಚುನಾವಣೆಯಲ್ಲಿ ಸ್ಪರ್ದೆಮಾಡುವ ವಿಚಾರ ಕುರಿತು ಸಚಿವ ಆನಂದ್ ಸಿಂಗ್  ಯು ಟರ್ನ್ ಹೊಡೆದಿದ್ದಾರೆ.
ವಿಜಯನಗರ ಜಿಲ್ಲೆಯಾಗಿ ಘೋಷಣೆಯಾಗಿದೆ.
ಮುಂದೆ ಜಿಲ್ಲೆಯನ್ನ ಅಭಿವೃದ್ದಿಮಾಡುವ ಉದ್ದೇಶದಿಂದ ಜನಗಳು ಮತ್ತೆ ಚುನಾವಣೆಗೆ ಸ್ಪರ್ದೆಮಾಡಿ ಎಂದು ಒತ್ತಾಯಮಾಡಿದರೆ ಸ್ಪರ್ಧೆ ಮಾಡುವೆ ಎಂದ ಆನಂದ್ ಸಿಂಗ್ ಹೇಳಿದ್ದಾರೆ.  ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ರಾಜಕಾರಣದಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದರು.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಸ್ಪರ್ದೆಮಾಡಿದ್ದ ಸಿಂಗ್. ನಾನು ಚುನಾವಣೆಯಲ್ಲಿ ಸ್ಪರ್ಧೆಮಾಡುವುದಿಲ್ಲ ಎಂದು ಹೇಳಿದ್ದೆ ಆದರೆ ಉಪ ಚುನಾವಣೆಯಲ್ಲಿ ಸ್ಪರ್ಧೆಮಾಡುವುದಿಲ್ಲ ಎಂದು ಹೇಳಿರಲಿಲ್ಲ ಎಂದಿದ್ದ  ಆನಂದ ಸಿಂಗ್ ಇದೀಗ ಮತ್ತೊಮ್ಮೆ ಮತ್ತೆ ಜನರು ಬಯಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿ ಮಾಡುತ್ತೇನೆ ಎಂದು ಯು ಟರ್ನ್ ಹೊಡೆದಿದ್ದಾರೆ.ಕಾಂಗ್ರೆಸ್ ಪಕ್ಷದ ವತಿಯಿಂದ ವಿಜಯನಗರ ವಿದಾನಸಭಾ ಕ್ಷೇತ್ರಕ್ಕೆ ಮುಂದೆ ಸ್ಪರ್ಧೆಮಾಡುವ ಆಕಾಂಕ್ಷಿಗಳ ಉಪಸ್ಥಿತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡ ಸೂರ್ಯನಾರಾಯಣ ರೆಡ್ಡಿ ಮತ್ತು ಹೆಚ್.ಎನ್.ಎಫ್. ಇಮಾಮ್ ನಿಯಾಜಿ ಬಾಗವಹಿಸಿದ್ದ ವೇದಿಕೆಯಲ್ಲಿ ಈ ಹೇಳಿಕೆ ನೀಡಿದ್ದು ವಿಶೇಷ ಎನಿಸಿದೆ.

ಹೊಸಪೇಟೆ ನಗರದ ವಕೀಲರ ಕಟ್ಟಡ ಉದ್ಘಾಟನಾ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಸಭೆಯಲ್ಲಿ ಮಾತನಾಡಿದ ಸಿಂಗ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು.

Please follow and like us:
error