ಜನಸಹಾಯ KCVT Help link -ಕೋವಿಡ್ ಕಷ್ಟಕಾಲದ ನೆರವು ಕೇಂದ್ರ’ ಆರಂಭ

ಸಮಗ್ರ ನೆರವು ನೀಡುವ ನೆರವಿನ ಕೇಂದ್ರ

ಜನಸಹಾಯ KCVT Help link -ಕೋವಿಡ್ ಕಷ್ಟಕಾಲದ ನೆರವು ಕೇಂದ್ರ’ದ ಜಿಲ್ಲಾ ತಂಡಗಳು ಇಂದಿನಿಂದ ರಾಜ್ಯಾದ್ಯಂತ ಕಾರ್ಯಾರಂಭ ಮಾಡಲಿವೆ. ಈ ಕೇಂದ್ರದ ಹೆಸರೇ ಸೂಚಿಸುವಂತೆ ಇದು ಕೋವಿಡ್ ಎರಡನೇ ಅಲೆಯ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ಯಾವುದೇ ಬಗೆಯ ಸಂಕಷ್ಟಕ್ಕೆ ಸಿಲುಕಿಕೊಂಡವರಿಗೆ ಸಮಗ್ರ ನೆರವು ನೀಡುವ ನೆರವಿನ ಕೇಂದ್ರವಾಗಿದೆ. ಇದರ ಜಿಲ್ಲಾ ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಚಿತವಾಗಿದ್ದು, ದಿನದ 24 ಗಂಟೆಗಳೂ ಕೂಡಾ ನೆರವಿನ ಕೇಂದ್ರದ ಹೆಲ್ಪ್ಲಿಂಕ್ ನಂಬರ್ ಹೊಂದಿದ ವಾಲಂಟಿಯರ್‌ಗಳು ನೊಂದವರ ಸೇವೆಗೆ ಸಿದ್ಧರಿರುತ್ತಾರೆ.
ಈ ನೆರವಿನ ಕೇಂದ್ರವು ಏಕಾಏಕಿ ತಲೆಎತ್ತಿರುವುದಲ್ಲ. ಕೋವಿಡ್ ಭಾರತವನ್ನು ಪ್ರವೇಶಿಸಿದ ಕಳೆದ ವರ್ಷದಲ್ಲೇ ನೊಂದವರಿಗಾಗಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ್ದ ಹಲವಾರು ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಯುವಜನರ ತಂಡಗಳು ಮತ್ತು ಕಾಳಜಿಯುಳ್ಳ ವೃತ್ತಿಪರರು ಸೇರಿ ರೂಪಿಸಿಕೊಂಡ ಬಳಗ ಇದು. ಸಂಪೂರ್ಣವಾಗಿ ಸಮಾಜಕ್ಕಾಗಿ ತಮ್ಮನ್ನು ತಾವು ನಿಸ್ವಾರ್ಥತೆಯಿಂದ ತೊಡಗಿಸಿಕೊಂಡಿರುವ ಸ್ವಯಂ ಸೇವಕರು ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ತೊಂದರೆಗೀಡಾದವರಿಗೆ ನೆರವಾಗುವುದಕ್ಕಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಕರ್ನಾಟಕದ ಹಲವು ಕಡೆಗಳಲ್ಲಿ ಮತ್ತು ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಕಳೆದ ತಿಂಗಳಿನಲ್ಲಿ ಜನತಾ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೇ ಕೆಲಸ ಮಾಡುತ್ತಿರುವ ತಂಡಗಳು, ಇದೀಗ ಔಪಚಾರಿಕವಾಗಿ ಚಾಲನೆಗೊಳ್ಳುತ್ತಿವೆ.
ಜನಸಹಾಯ ಹೆಲ್ಪ್ಲಿಂಕ್ ನೆರವಿನ ಕೇಂದ್ರವು ಮುಖ್ಯವಾಗಿ ಈ ಕೆಳಗಿನ ರೀತಿಗಳಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲಿದೆ:
• ಹೆಲ್ಪ್ ಲಿಂಕ್ ನಂಬರ್‌ಗಳ ಮೂಲಕ ನೊಂದವರ ಕರೆಗಳನ್ನು ಸ್ವೀಕರಿಸುವುದು ಮತ್ತು ಅಗತ್ಯವಿರುವವರಿಗೆ ಆಕ್ಸಿಜನ್ ಹಾಸಿಗೆಗಳು ಮತ್ತು ಐಸಿಯು ಹಾಸಿಗೆಗಳ ಲಭ್ಯತೆಯ ಮಾಹಿತಿ ಮತ್ತು ಅವುಗಳ ಸೇವೆಯನ್ನು ದೊರಕಿಸಿಕೊಡುವುದು
• ಆಂಬುಲನ್ಸ್, ಆಕ್ಸಿಜನ್, ಅಗತ್ಯ ಔಷಧಿಗಳು ಮತ್ತಿತ್ಯಾದಿ ಸೇವೆಗಳು ದೊರಕುವ ನಿಖರ ಮಾಹಿತಿಯನ್ನು ಮತ್ತು ಅಗತ್ಯ ಸೇವೆಗಳನ್ನು ಸಂಕಷ್ಟದಲ್ಲಿರುವವರಿಗೆ ಒದಗಿಸಿಕೊಡುವುದು
• ವೈದ್ಯರು ಹತ್ತಿರದಲ್ಲಿ ಲಭ್ಯವಿಲ್ಲದ ಗ್ರಾಮಾಂತರ ಪ್ರದೇಶಗಳಿಗೆ ಮತ್ತು ಆರ್ಥಿಕವಾಗಿ ಅನಾನುಕೂಲಕರ ಪರಿಸ್ಥಿತಿಗಳಲ್ಲಿರುವವರಿಗೆ (ಅಥವಾ ಅಗತ್ಯವಿರುವ ಯಾರಿಗೇ ಆದರೂ) ಆನ್‌ಲೈನ್ ವೈದ್ಯರ ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆಯನ್ನು ಒದಗಿಸುವುದು. ಇದಕ್ಕಾಗಿ ರಾಜ್ಯದ ಮತ್ತು ಹೊರರಾಜ್ಯಗಳ ಜನಪರ ವೈದ್ಯರ ದೊಡ್ಡ ತಂಡವೇ ಜನಸಹಾಯ ಕೆಸಿವಿಟಿ ಹೆಲ್ಪ್ಲಿಂಕ್ ಜೊತೆಗೆ ತೊಡಗಿಸಿಕೊಂಡಿದೆ
• ವಲಸೆ ಕಾರ್ಮಿಕರು ಮತ್ತಿತರ ಅಸಂಘಟಿತ ಕಾರ್ಮಿಕರಿಗಾಗಿ ಮತ್ತು ಅಂಚಿಗೊತ್ತಲ್ಪಟ್ಟ ಸಮುದಾಯಗಳಿಗಾಗಿ ಅವರಿರುವಲ್ಲೇ ವೈದ್ಯರು ಮತ್ತು ತರಬೇತಿ ಪಡೆದ ಸ್ವಯಂ ಸೇವಕರ ಮೂಲಕ ಅತ್ಯಗತ್ಯ ಆರೋಗ್ಯ ಸೇವೆಯನ್ನು ಒದಗಿಸುವುದು
• ಕೋವಿಡ್ ಕುರಿತಾಗಿರುವ ಅನಗತ್ಯ ಆತಂಕ ಮತ್ತು ಭಯಭೀತಿಯನ್ನು ತೊಲಗಿಸಿ, ಅದರಿಂದಾಗಿ ಉಂಟಾಗುತ್ತಿರುವ ಸಾವು-ನೋವುಗಳನ್ನು ತಡೆಯಲು ಜನರಿಗೆ ಸರಿಯಾದ ಮಾಹಿತಿ ತಲುಪಿಸಿ ಭರವಸೆಯನ್ನು ಮೂಡಿಸಲು, ವಿವಿಧ ಸಂಘ-ಸಂಸ್ಥೆಗಳು ಮತ್ತು ಸಮುದಾಯಗಳ ನಾಯಕರ ಮೂಲಕ ಸಮುದಾಯ ಅರಿವಿನ ಕಾರ್ಯಕ್ರಮಗಳನ್ನು ಸಂಘಟಿಸುವುದು
• ಅತ್ಯಂತ ಸಂಕಷ್ಟ ಪರಿಸ್ಥಿತಿಗಳಲ್ಲಿರುವವರಿಗೆ ಫೀಲ್ಡ್ ವಾಲಂಟಿರ‍್ಸ್ ಮೂಲಕ ಅವರಿರುವಲ್ಲಿಗೇ, ಅಗತ್ಯ ಔಷಧಿಗಳು, ಆಹಾರ, ದಿನಸಿ ಪದಾರ್ಥಗಳು ಮತ್ತು ಇನ್ನಿತ್ಯಾದಿ ಮೂಲಭೂತ ಅಗತ್ಯವಸ್ತುಗಳನ್ನು ತಲುಪಿಸುವುದು
• ಜನರಿಗಾಗಿ ಸರ್ಕಾರ ಮತ್ತು ಜವಾಬ್ದಾರಿ ಸ್ಥಾನಗಳಲ್ಲಿರುವವರು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತಂತೆ ಒತ್ತಡ ಹೇರುವುದಕ್ಕಾಗಿ ಜನಾಗ್ರಹ ಆಂದೋಲನವನ್ನು ನಡೆಸುವುದು

ಜಿಲ್ಲಾವಾರು ಕೆಲಸ ನಿರ್ವಹಿಸಲಿರುವ ಹೆಲ್ಪ್ಲಿಂಕ್ ನಂಬರ್‌ಗಳು:

ಕೊಪ್ಪಳ – 8150032525, 7026366728, 9886056258

ಬಳ್ಳಾರಿ – 99458 59400
8867679235
8310894080

ಕಲಬುರಗಿ – 9449380975, 77952 71168, 9448881313

ರಾಯಚೂರು – 8861319186, 9980650905 , 9901088146

ಕೋಲಾರ – 8970823145, 6360562385

ಗದಗ – 7483728650,
9945633770

ಹಾವೇರಿ – 9964545145,
6360518889

ಹಾಸನ – 9164942109

ಕೊಡಗು – 9448250539 9164942109

ಬೆಂಗಳೂರು ಗ್ರಾಮಾಂತರ – 9739046918, 7829036896, 9972631239

ವಿಜಯಪುರ – 9740420826, 7204016403, 8867360195

ಚಾಮರಾಜನಗರ – 8722545080, 8970062386

ಯಾದಗಿರಿ – 7022736800, 7795056567, 9353466984

ಮಂಡ್ಯ – 8892323523, 8088324390

ಚಿತ್ರದುರ್ಗ – 80883 53205, 9686842196, 6361924862

ಮೈಸೂರು – 9449597504, 9731992852, 9353264162

ದಾವಣಗೆರೆ – 7406331046, 9449685560, 880240432

ಶಿವಮೊಗ್ಗ – 9480313368, 9886699068

ಬೀದರ್ – 7022894895, 6360930636

ಚಿಕ್ಕಬಳ್ಳಾಪುರ – 9845198404

ದಕ್ಷಿಣ ಕನ್ನಡ (ಮಂಗಳೂರು) – 9036064191

ಉಡುಪಿ – 9482050023

ರಾಮನಗರ – 9741072935

ಬೆಳಗಾವಿ – 9538371610, 6360311556

ಧಾರವಾಡ – 8971885558

ಬೆಂಗಳೂರು ನಗರ – 7353770205, 9141297292, 7676331820, 9738833055

ತುಮಕೂರು- 7022228027, 9738264700, 8095056026, 9620055759

ಸಂಪರ್ಕ: ಮಲ್ಲಿಗೆ ಸಿರಿಮನೆ- 8892939771, ಪ್ರಕಾಶ್- 9591500522

Please follow and like us:
error