ಚಿರತೆಗೆ ಆಹಾರವಾದ ದುರ್ಗಾದೇವಿ ಬೆಟ್ಟದ ಅಡುಗೆ ಕೆಲಸದ‌ ಯುವಕ!

ಕನ್ನಡನೆಟ್ ನ್ಯೂಸ್ : ಜಿಲ್ಲೆಯ ಗಂಗಾವತಿ
ತಾಲೂಕಿನ ಆನೆಗೊಂದಿ ಸಮೀಪದ ಪೌರಾಣಿಕ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಯುವಕ ಚಿರತೆಗೆ ಆಹಾರವಾಗಿದ್ದಾನೆ.
ಹುಲಗೇಶ ಈರಪ್ಪ ಮಡ್ಡೇರ ಚಿರತೆಗೆ ಆಹಾರವಾದ ಯುವಕ. ಇಂದು ಬೆಳಗ್ಗೆ ದೇವಸ್ಥಾನದ ಸಮೀಪದಲ್ಲೇ ಹುಲುಗೇಶ ಶವ ತುಂಡು- ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವದ ಸ್ಥಿತಿ ಕಂಡು ಚಿರತೆ ದಾಳಿ ಮಾಡಿ ಹೊತ್ತೊಯ್ದು ತಿಂದು ಹಾಕಿರುವುದು ಬಹುತೇಕ ಖಚಿತವಾಗಿದೆ. ಬುಧವಾರ ರಾತ್ರಿ ಹುಲುಗೇಶ ನನ್ನು ಚಿರತೆ ಹೊತ್ತೊಯ್ದಿದೆ. ಕಳೆದ ಐದಾರು ವರ್ಷದಿಂದ ಈ ಯುವಕ ಮೇಗೋಟೆ ದುರ್ಗಾ ಬೆಟ್ಟದ ದೇವಸ್ಥಾನದಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ‌. ನಿದ್ದೆಯಲ್ಲಿದ್ದಾಗ‌ ಬೇಟೆಗೆ ಹೊಂಚು ಹಾಕಿದ ಚಿರತೆ ಸದ್ದು‌ ಮಾಡದೇ ಹುಲಗೇಶ್‌ನನ್ನು ಸುಮಾರು ಒಂದು ಕಿ.ಮೀ ದೂರದ ಪೋದೆಯೊಳಗೆ ಹೊತ್ತೊಯ್ದು ತಿಂದು, ದೇವಹವನ್ನು ತುಂಡು- ತುಂಡು ಮಾಡಿ ಅಲ್ಲಿಂದ ಕಾಲ್ಕಿತ್ತಿದೆ. ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ‌ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ‌ ಬಿದ್ದಿದ್ದಾರೆ. ಈ ಭಾಗದಲ್ಲಿ ಚಿರತೆ, ಕರಡಿ ಹಾವಳಿ ವಿಪರೀತವಾಗಿದ್ದು ಅರಣ್ಯ ಇಲಾಖೆ ತುರ್ತು‌ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಚಿರತೆ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.

Please follow and like us:
error