೫೦ ರೂ ನೋಟಿನಲ್ಲಿ ಶಾಂತಿ ಕದಡುವ ಬರಹ : ಯುವಕನ ‌ಬಂಧನ

ಚಿಕ್ಕಮಗಳೂರು ,  : ಪಾಕಿಸ್ತಾನದಿಂದ ಬಂದು 

ಬಾಳೆಹೊನ್ನೂರಿನಲ್ಲಿ ಉಳಿದುಕೊಂಡಿದ್ದೇವೆ . ಇಂಡಿಯಾದವರನ್ನು ಒಬ್ಬರನ್ನೂ ಬಿಡುವುದಿಲ್ಲ . . . ಎಂಬಿತ್ಯಾದಿಯಾಗಿ ಶಾಂತಿ ಕದಡುವ ಬರಹ ಬರೆಯಲಾಗಿದ್ದ ಐವತ್ತು ರೂ . ಮುಖಬೆಲೆಯ ನೋಟಿನ ಫೋಟೋವೊಂದರ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಬಂಧಿಸಲಾಗಿದೆ . ಯುವಕ ಶಾಂತಿ ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆಂದು ತನಿಖೆಯಿಂದ ತಿಳಿದು ಬಂದಿದೆ . ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ . ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು , ‘ ಟಾರ್ಗೆಟ್ ಬಾಳೆಹೊನ್ನೂರು , ನಾವು ಪಾಕಿಸ್ತಾನದವರು . 6 ಜನ ಇದ್ದೇವೆ . ರಾಜ್ಯದ ಒಂದೊಂದು ಜಿಲ್ಲೆಯಲ್ಲಿದ್ದೇವೆ . ಇಂಡಿಯಾದವರನ್ನು ಒಬ್ಬರನ್ನೂ ಬಿಡುವುದಿಲ್ಲ . ಪಾಕಿಸ್ತಾನದ 2 ಹುಲಿಗಳು , ಬಾಳೆಹೊನ್ನೂರಿನಲ್ಲಿದ್ದೇವೆ . ಕನ್ನಡದವರು ನಮಗೆ ಸಹಾಯ ಮಾಡುತ್ತಿದ್ದಾರೆ ‘ ಎಂದು ಬರೆಯಲಾದ 50 ರೂ . ಮುಖಬೆಲೆಯ ನೋಟೊಂದರ ಫೋಟೊ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿತ್ತು . ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ಷವಾಗಿ ತನಿಖೆ ಕೈಗೊಂಡಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಟ್ಟ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ . ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ , ಶಾಂತಿ ಕದಡುವ ಉದ್ದೇಶದಿಂದ ಬಂಧಿತ ಯುವಕ ಇಂತಹ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ . ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶ ಕಂಡು ಯಾರೂ ಇತಂಕಕ್ಕೆ ಒಳಗಾಗಬಾರದು .  ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಈ ರೀತಿಯ ಸಂದೇಶಗಳಿಗೆ ಹೆದರುವ ಆವಶ್ಯಕತೆ ಇಲ್ಲ . ಜನರು ಇಂತಹ ಸಂದೇಶವನ್ನು ಯಾವುದೇ ವ್ಯಕ್ತಿ , ಗ್ರೂಪ್‌ಗಳಿಗೆ ರವಾನಿಸಬಾರದೆಂದು ಮನವಿ ಮಾಡಿರುವ ಅವರು , ಇಂತಹ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ , ಫಾರ್ವಡ್್ರ ಮಾಡುವವರ ಪತ್ತೆಗೆ ತಂಡವೊಂದು ಕಾರ್ಯಪ್ರವೃತ್ತವಾಗಿದ್ದು , ಸಂದೇಶವನ್ನು ರವಾನಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ .

Please follow and like us:
error