ಚಾಮರಾಜೇಂದ್ರ ಮೃಗಾಲಯ ಮೈಸೂರುಕ್ಕೆ ಮೊದಲ ಸ್ಥಾನ

ದೇಶದ ಪ್ರಮುಖ ಮೃಗಾಲಯಗಳ ಸಮೀಕ್ಷೆ ನಡೆಸಿರುವ ಪ್ರವಾಸಿ ಮಾರ್ಗದರ್ಶಿ ವೆಬ್‌ಸೈಟ್‌ ‘ಟ್ರಿಪ್‌ ಅಡ್‌ವೈಸರ್‌ ಡಾಟ್‌ ಇನ್‌’ ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನು ನಿರ್ವಹಣೆ ಹಾಗೂ ಗುಣಮಟ್ಟದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಘೋಷಿಸಿದೆ

124 ವರ್ಷ ಇತಿಹಾಸ ಇರುವ, 170 ಎಕರೆ ವಿಸ್ತೀರ್ಣದಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಆರೋಗ್ಯ ನಿರ್ವಹಣೆ, ಮೃಗಾಲಯದ ಸೌಂದರ್ಯ, ಪ್ರಾಣಿಗಳ ವೈವಿಧ್ಯತೆ, ವಿದೇಶಿ ಪ್ರಾಣಿಗಳ ಸಂಗ್ರಹ, ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಮಾನದಂಡವಾಗಿ ಇಟ್ಟುಕೊಂಡು ದೇಶದ ಎಲ್ಲ ಇತರ ಮೃಗಾಲಯಗಳಿಗಿಂತ ವಿಭಿನ್ನ ಎಂದು ಪ್ರಕಟಿಸಿದೆ. ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಐದಕ್ಕೆ ನಾಲ್ಕೂವರೆ ಅಂಕಗಳನ್ನು ನೀಡಿದೆ.
birds  animal
ಅಂತೆಯೇ, ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಕಾರಣ, ಮೃಗಾಲಯದಲ್ಲಿ ಈಚೆಗೆ ಜನಿಸಿದ ಎರಡು ಜಿರಾಫೆ ಮರಿಗಳು, ಕೆಲವೇ ದಿನಗಳ ಹಿಂದೆ ಸ್ಥಾಪಿಸಿದ  1.66 ಕೋಟಿ ವೆಚ್ಚದ ಪ್ರವಾಸಿಗರ ಕ್ಯಾಂಟೀನ್‌,  4.90 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಗಮನಸೆಳೆದಿದೆ.

ಇದೇ ಅಲ್ಲದೇ,  30 ಲಕ್ಷ ವೆಚ್ಚದಲ್ಲಿ ಹಿಮಾಲಯನ್ ಕಪ್ಪು ಕರಡಿ ಮನೆ,  25 ವೆಚ್ಚದಲ್ಲಿ ಶೌಚಾಲಯ ನಿರ್ಮಾಣ,  2.45 ಕೋಟಿ ವೆಚ್ಚದಲ್ಲಿ ಕೂರ್ಗಳ್ಳಿಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ,  43 ಲಕ್ಷ ವೆಚ್ಚದಲ್ಲಿ ಕೂರ್ಗಳ್ಳಿಯಲ್ಲಿ ಹುಲಿ ಮನೆ ನಿರ್ಮಾಣ ಹಾಗೂ 34 ಲಕ್ಷ ವೆಚ್ಚದಲ್ಲಿ ಚಿರತೆ ಮನೆ ನಿರ್ಮಾಣಕ್ಕೆ ಚಾಲನೆ ನೀಡಿರುವುದೂ ಮೃಗಾಲಯದಲ್ಲಿ ಸೌಕರ್ಯಗಳಿಗೆ ಅತಿ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ ಎಂಬ ಹೆಗ್ಗಳಿಕೆ ಸಿಕ್ಕಿದೆ.

ಹಿಂದಿನ ವರ್ಷಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. 2015ರ ಡಿ. 25ರಿಂದ 27ರ ವರೆಗೆ ಕೇವಲ ಮೂರು ದಿನಗಳಲ್ಲಿ 72,700 ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರವೇಶ ದರದಿಂದ ಒಟ್ಟು  46,61,060 ಆದಾಯ ಸಂಗ್ರಹವಾಗಿದೆ. ಈ ವರ್ಷವೂ ಪ್ರವಾಸಿಗರ ಭೇಟಿ ಪ್ರಮಾಣ ಹೆಚ್ಚಿದೆ. ದೇಶದ ಬೇರಾವ ಮೃಗಾಲಯಕ್ಕೂ ಇಲ್ಲದ ಸ್ಪಂದನೆ ನಮ್ಮ ಮೃಗಾಲಯಕ್ಕೆ ಇದೆ’ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ದತ್ತು ಸ್ವೀಕಾರದಿಂದ ಸಹಾಯ: ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯು ಅತ್ಯಂತ ಪರಿಣಾಮಕಾರಿಯಾಗಿ ನಡೆದಿದೆ. 2016ರ ಏಪ್ರಿಲ್‌ನಿಂದ ಈಚೆಗೆ 35 ಲಕ್ಷಕ್ಕೂ ಹೆಚ್ಚು ಆದಾಯ ಪ್ರಾಣಿಗಳ ದತ್ತು ಸ್ವೀಕಾರದಿಂದ ಲಭಿಸಿದೆ.

ಪ್ರಮುಖ 10 ಮೃಗಾಲಯಗಳು:-
* ಚಾಮರಾಜೇಂದ್ರ ಮೃಗಾಲಯ, ಮೈಸೂರು
* ನಂದನಕಾನನ ಮೃಗಾಲಯ, ಭುವನೇಶ್ವರ
* ಪದ್ಮಜಾನಾಯ್ಡು ಹಿಮಾಲಯ ಮೃಗಾಲಯ, ಡಾರ್ಜಲಿಂಗ್‌
* ನೆಹರೂ ಮೃಗಾಲಯ, ಹೈದರಾಬಾದ್‌
* ಲಖನೌ ಮೃಗಾಲಯ, ಲಖನೌ
* ಹಿಮಾಲಯನ್ ಮೃಗಾಲಯ, ಗ್ಯಾಂಗ್‌ಟಕ್‌
* ತಿರುವನಂತಪುರಂ ಮೃಗಾಲಯ, ತಿರುವನಂತಪುರಂ
* ವಿಶಾಖಪಟ್ಟಣಂ ಮೃಗಾಲಯ, ವಿಶಾಖಪಟ್ಟಣಂ
* ಹೈ ಆಲ್ಟಿಟ್ಯೂಡ್‌ ಮೃಗಾಲಯ, ನೈನಿತಾಲ್‌
* ಅಗಿರ್ನಾರ್‌ ಅಣ್ಣಾ ಮೃಗಾಲಯ, ಚೆನ್ನೈ

Please follow and like us:
error