ಚಳ್ಳಾರಿ ಮರ್ಡರ್ ಕೇಸ್ : ಮೂವರ ಬಂಧನ

ಕೊಪ್ಪಳ : ಕೊಪ್ಪಳ ತಾಲ್ಲೂಕಿನ ಚಳ್ಳಾರಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಪೋಲಿಸರು ಭೇದಿಸಿದ್ದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

15-04-2020 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಚಳ್ಳಾರಿ ಗ್ರಾಮದಲ್ಲಿ ರಮೇಶ ತಂದೆ ಯಮನಪ್ಪ ಪೊಲೀಸ್ ಪಾಟೀಲ್ 18 ವರ್ಷ ಸಾ : ಚಳ್ಳಾರಿ ಈತನು ರಾತ್ರಿ ವೇಳೆಯಲ್ಲಿ ಮನೆಯ ಮುಂದುಗಡೆ ಮಲಗಿದಾಗ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಹೋಗಿರುತ್ತಾರೆ ಅಂತಾ ದೂರು ದಾಖಲಾಗಿದ್ದು ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ : 72/2020 ಕಲಂ : 392 ಐಪಿಸಿ ಪ್ರಕಾರ ದಿನಾಂಕ : 15-04-2020 ರಂದು ಪ್ರಕರಣ ದಾಖಲಾಗಿ ಆರೋಪಿತರ ಪತ್ತೆ ತನಿಖಾ ಹಂತದಲ್ಲಿ ಇತ್ತು . ನಂತರ ಈ ಪ್ರಕರಣದ ತನಿಖೆಯನ್ನು ಕೊಪ್ಪಳ ಗ್ರಾಮೀಣ ವೃತ್ತದ ಸಿಪಿಐ ರವರಾದ ವಿಶ್ವನಾಥ ಹಿರೇಗೌಡರ , ತನಿಖೆಯನ್ನು ಮುಂದುವರಿಸಿ ಈ ಪ್ರಕರಣವನ್ನು ಪತ್ತೆ ಹಚ್ಚಲು ಸಲುವಾಗಿ ಸಿಬ್ಬಂದಿಯವರಾದ ಚಂದಪ್ಪ ನಾಯ್ಕ ಹೆಚ್.ಸಿ. 232 , ಶ್ರೀ ಗದ್ದೆಪ್ಪ ಪಿಸಿ 274 , ವೀರಬಸಪ್ಪ ಬಣಕಾರ , ಪಿಸಿ 260 ಶಿವಪುತ್ರಪ್ಪ ಹೆಚ್.ಸಿ. 248 , ಮಲ್ಲಿಕಾರ್ಜುನ ಪಿಸಿ 204 ಶ್ರೀ ಚಂದಾಲಿಂಗ ಪಿಸಿ 214 ಶ್ರೀಧರ , ಪಿಸಿ 117 ಚಾಲಕರಾದ ನಿಂಗಪ್ಪ ಎ.ಹೆಚ್.ಸಿ. ಹಾಗೂ ಸಿಡೀರ್ ವಿಭಾಗದ ಸಿಬ್ಬಂದಿಯವರಾದ ಪ್ರಸಾಧ ಹಾಗೂ ಕೋಟೇಶ ರವರನ್ನು , ಒಳಗೊಂಡ ಒಂದು ತಂಡವನ್ನು ರಚಿಸಿ ವೆಂಕಟಪ್ಪ ನಾಯಕ , ಪೊಲೀಸ್ ಉಪಾಧೀಕ್ಷಕರು ಉಪವಿಭಾಗ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಕೊಲೆ ಮಾಡಿದ ಆರೋಪಿತರಾದ 1 ] ಯಲ್ಲಾರಲಿಂಗಪ್ಪ ತಂದೆ ಮೂಕಪ್ಪ ಹರಿಜನ , 2 ] ಹನಮೇಶ ತಂದೆ ಕನಕಪ್ಪ ಹರಿಜನ , 3 ] ಭೀಮಣ್ಣ ತಂದೆ ಮೂಕಪ್ಪ ಹರಿಜನ ಸಾ : ಎಲ್ಲರೂ ಚಳ್ಳಾರಿ ರವರನ್ನು ಸಾಕ್ಷಾಧಾರಗಳ ಸಮೇತ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇದೆ , ಸದರಿ ಆರೋಪಿತರು ತಮ್ಮ ಮನೆಯ ಹೆಣ್ಣು ಮಕ್ಕಳೊಂದಿಗೆ ಮೃತನು ಅನುಚಿತ ಹಾಗೂ ಅಸಭ್ಯ ವರ್ತನೆಯ ಕಾರಣಕ್ಕಾಗಿ ಕೆರಳಿ ಕೊಲೆ ಮಾಡಿರುತ್ತಾರೆ . ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಈ ಪ್ರಕರಣವನ್ನು ಬೇಧಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಶ್ಲಾಘನೆ ವ್ಯಕ್ತ ಪಡಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ .

ಈ ಕುರಿತು ಎಸ್ಪಿ ಟಿ.ಶ್ರೀಧರ್ , ಡಿವೈಎಸ್ಪಿ ವೆಂಕಟಪ್ಪ ನಾಯಕ,ರೂರಲ್ ಠಾಣೆಯ ಸಿಪಿಐ ವಿಶ್ವನಾಥ ಹಿರೇಗೌಡರ,  ನಗರ ಠಾಣೆಯ ಮಾರುತಿ ಗುಳ್ಳಾರಿ, ಮಹಿಳಾ ಠಾಣೆಯ ಮೌನೇಶ್ ಪಾಟೀಲ್ ಸೇರಿದಂತೆ ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error