ಚಲಿಸುತ್ತಿದ್ದ ಬಸ್ ಗೆ ಬೆಂಕಿ : ಐವರ ಸಜೀವದಹನ

ಚಿತ್ರದುರ್ಗ : ಚಲಿಸುತ್ತಿದ್ದ ಖಾಸಗಿ ಬಸ್ ಹೊತ್ತಿ ಉರಿದು ಮೂರು ಮಕ್ಕಳು ಸೇರಿದಂತೆ ಐದು ಜನ ಪ್ರಯಾಣಿಕರು ಸಜೀವ ದಹನಗೊಂಡಿರುವ ಘಟನೆ ಹಿರಿಯೂರಿನ ಕೆ ಆರ್ ಹಳ್ಳಿ ಗೇಟ್ ಬಳಿ‌ ನಡೆದಿದೆ.ಬಿಜಾಪುರದ ನಿಡಗುಂದಿಯಿಂದ ರಾತ್ರಿ ೯ಗಂಟೆಗೆ ಬೆಂಗಳೂರಿಗೆ ತೆರಳುತ್ತಿದ್ದ ಕುಕ್ಕೇಶ್ರೀ ಎನ್ನುವ ಖಾಸಗಿ ಬಸ್ ಚಿತ್ರದುರ್ಗ ಜಿಲ್ಲೆ ಹಿರಿಯೂರು‌ ಮಾರ್ಗವಾಗಿ ಚಲಿಸುತ್ತಿತ್ತು. ಕೆ ಆರ್ ಹಳ್ಳಿ ಗೇಟ್ ಬಳಿ ಇಂಜಿನ್ ಶಾರ್ಟ್ ಆಗಿ ಬಸ್ ಗೆ ಬೆಂಕಿ‌ ಹತ್ತಿಕೊಂಡಿದ್ದು, ಬೆಂಕಿ ಹತ್ತಿಕೊಂಡ ಕೂಡಲೇ ಚಾಲಕ ಬಸ್ ಬಾಗೀಲು ತೆಗೆಯದೆ ಪರಾರಿಯಾಗಿದ್ದಾನೆ. ಪ್ರಯಾಣಿಕರು ಗಾಬರಿಯಿಂದ ಚೀರಿಕೊಂಡು ಕಿಟಕಿಗಳ ಗಾಜು ಹೊಡೆದು ಕಿಟಕಿಯಿಂದ ಹಾರಿ ತಮ್ಮ ಜೀವ ರಕ್ಷಿಸಿಕೊಂಡಿದ್ದಾರೆ. ಆದರೆ ನಿದ್ರೆಗೆ ಜಾರಿದ್ದ ಮೂರು ಮಕ್ಕಳು ಹಾಗೂ ಇಬ್ಬರು ಸೇರಿದಂತೆ ಐದು ಜನರು ಸಜೀವ ದಹನಗೊಂಡಿದ್ದಾರೆ. ಸಜೀವ ದಹನ ಗೊಂಡಿರುವವರ ಹೆಸರು ಶೀಲಾ ,ಸ್ಪರ್ಷಾ ಕವಿತಾ ನಿಶ್ಚಿತ,ಸಮೃಧ್ದ ಐದು ಜನ ಬಸ್ ನಲ್ಲೆ ಸುಟ್ಟು ಕರಕಲಾಗಿ ದ್ದಾರೇ ಬಸ್ ಮೇಲೆ ಸುಮಾರು ಟನ್ ಗಟ್ಟಲೆ ನಿಂಬೆ ಹಣ್ಣು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಉಳಿದ 30 ಜನರಿಗೆ ಗಂಭೀರ ಗಾಯಗಳಾಗಿದ್ದು ನಾಲ್ಕು ಜನರು ಹಿರಿಯೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ದ್ದು, ಉಳಿದವರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error