ಗೋರಂಟ್ಲಿ ನಾಟಕಗಳು ಜ್ವಲಂತ ಸಮಸ್ಯೆಗಳನ್ನು ಸಮರ್ಥವಾಗಿ ಬಿಂಬಿಸಿವೆ- ಮಲ್ಲಿಕಾರ್ಜುನ ಕುಂಬಾರ

Kannadanet News ವಿಠ್ಠಪ್ಪ ಗೋರಂಟ್ಲಿಯವರ ನಾಟಕಗಳು ಪ್ರಸ್ತುತ ಜ್ವಲಂತ ಸಮಸ್ಯೆಗಳನ್ನು ಶಕ್ತಿಯುತವಾಗಿ ಬಿಂಬಿಸಿವೆ. ಸನರ್ಥವಾಗಿ ಕಲಬುರ್ಗಿಯವರ ಮತ್ತು ಗೌರಿ ಯವರ ಪಾತ್ರ ಒಡಮೂಡಿವೆ ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಕುಂಬಾರ ಹೇಳಿದರು.

ಅವರು ಇಂದು ಕೊಪ್ಪಳದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ನಡೆದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಇದುವರೆಗೆ ಕಲ್ಬುರ್ಗಿ ಯವರ, ಗೌರಿ ಲಂಕೇಶರ ಹಂತಕರನ್ನು ಹಿಡಿಯಲಾಗಿಲ್ಲ ಆದರೆ ನಾಟಕದಲ್ಲಿ ಈಗಾಗಲೇ ಬಿಂಬಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ವಿಮೋಚಣೆ ಕೋಮು ಸಂಘರ್ಷದ ಹೋರಾಟವಲ್ಲ ಅದು ಸಾಮ್ರಾಜ್ಯಷಾಹಿ ಹಾಗೂ ಪ್ರಜಾಪ್ರಭುತ್ವವಾದಿಯ ನಡುವಿನ ಸಂಘರ್ಷ ಅದನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಸೋಯಾಬುಲ್ಲಾ ಖಾನ್ ಎನ್ನುವ ಪತ್ರಕರ್ತ ನ ಪಾತ್ರ ಅದ್ಬುತವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವದರ ಮೂಲಕ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಉದ್ಘಾಟಿದದರು. ವಿಠ್ಠಪ್ಪ ಗೋರಂಟ್ಲಿಯವರ ನಾಟಕ ಕೃತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಲೋಕಾರ್ಪಣೆ ಮಾಡಿದರು. ಮಹಾಂತೇಶ ಮಲ್ಲನಗೌಡರ, ಎ.ಎಂ.ಮದರಿಯವರು ವೀರಣ್ಣ ಹುರಕಡ್ಲಿಯವರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
ವಿಠ್ಠಪ್ಪ ಗೋರಂಟ್ಲಿಯವರ “ಗಾಂಧಿಯಿಂದ ಗೌರಿಯವರೆಗೆ ಐದು ನಾಟಕಗಳು” ಮತ್ತು ವೀರಣ್ಣ ಹುರಕಡ್ಲಿಯವರ “ಬಂಧ ಮುಕ್ತರಾಗುವ ದಾರಿ”, ಜಲಸಂರಕ್ಷಣೆ” ಪುಸ್ತಗಳನ್ನು ಲೋಕಾರ್ಪಣೆ ಮಾಡಲಾಯಿತು.

ವೀರಣ್ಣ ಹುರಕಡ್ಲಿಯವರ ಕೃತಿಗಳ ಕುರಿತು ಈಶ್ವರ ಹತ್ತಿ ಯವರು ಮಾತನಾಡಿ ಆದ್ಯಾತ್ಮಿಕ ಛಾಯೆಯ ಕುರಿತು ಅವರ ಸಮರ್ಪಣೆಯ ಕುರಿತು ಮಾತನಾಡಿದರು.
ಕಾರ್ಯಕ್ರಮ ದ ಅದ್ಯಕ್ಷತೆಯನ್ನು ವಿ.ಬಿ.ರಡ್ಡೇರ್ ವಹಿಸಿ ವರ್ತಮಾನದ ತಲ್ಲಣಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿಜಯಲಕ್ಷ್ಮಿ ಕೊಟಗಿ ನೆರವೇರಿಸಿದರು. ಕಾರ್ಯಕ್ರಮದ ಲ್ಲಿ ಸಾಹಿತ್ಯಾಸಕ್ತರು ಸಾಹಿತಿಗಳು ಪಾಲ್ಗೊಂಡಿದ್ದರು.

Please follow and like us:
error