ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ : ಸಮುದಾಯವನ್ನು ಒಡೆಯದಂತೆ ಮನವಿ

ಕೊಪ್ಪಳ : ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುಬೇಕು ಯಾವುದೇ ಕಾರಣಕ್ಕೂ ಸಮುದಾಯವನ್ನು ಒಡೆಯಬಾರದು ಕೇವಲ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬಾರದು ಎಂದು ಆಗ್ರಹಿಸಿ ಜಿಲ್ಲಾ ಗೊಲ್ಲ ಯಾದವ ಸಂಘದವರು ಕೊಪ್ಪಳದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು

ಮುಖ್ಯ ಮಂತ್ರಿಗಳಾದ ತಾವೂ ಸಮಾಜ ಕಲ್ಯಾಣ ಇಲಾಖೆ UN 7038 E – Office / Cm / 1760761 / 2020 Date : 28.09.2020 ಮೂಲಕ ರಾಜ್ಯದಲ್ಲಿ ಗೊಲ್ಲಜನಾಂಗದವರು ಗಣನೀಯವಾಗಿದ್ದು ಅವರ ಆರ್ಥಿಕ ಸಮಾಜಿಕ ರಾಜಕೀಯ ಶೈಕ್ಷಣಿಕ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿರುವಿರಿ , ಆದರೆ ಇವತ್ತಿನ ದಿಢೀರ ನಿರ್ಧಾರಿಂದ ಪತ್ರ ಸಂಖ್ಯೆಮುಮಂ / ಗೃಹ / 287 / 2020 ದಿನಾಂಕ : 28,09.2020 ರ ಮೂಲಕ ಸದ್ರಿ ನಿಗಮದ ಹೆಸರನ್ನು ಬದಲು ಮಾಡಿ ಕರ್ನಾಟಕ ರಾಜ್ಯ ಕಾಡು ಗೊಲ್ಲ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಆದೇಶಿಸಿರುವುದು ಆಡಿ ನಮ್ಮ ಯಾದವ ಗೊಲ್ಲ ಸಮುದಾಯಕ್ಕೆ ಅತ್ಯಂತ ವಿಷಾದಕರ ಸಂಗತಿಯಾಗಿದೆ . ಆದರೆ ಬಹುದಿನಗಳಿಂದ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ರಾಜ್ಯದ ಗೊಲ್ಲ ಜನಾಂಗದ ಬೇಡಿಕೆಯಾಗಿದೆ ರಾಜ್ಯದಲ್ಲಿರುವ ಒಕ್ಕಲಿಗ , ವೀರಶೈವ ಲಿಂಗಾಯತ , ವಾಲ್ಮೀಕಿ , ಗಂಗಾಮತ , ಉಪ್ಪಾರ , ವಿಶ್ವಕರ್ಮ ಸಮಾಜಗಳಲ್ಲಿರುವಂತೆ ನಮ್ಮಲ್ಲಿಯೂ ಅನೇಕ ಉಪಪಂಗಡಗಳಿವೆ . ಕಾಡು ಗೊಲ್ಲ ಎನ್ನುವುದು ಗೊಲ್ಲ ಸಮಾಜದ ಒಂದು ಉಪ ಪಂಗಡ ಮಾತ್ರ ಗೊಲ್ಲ ಸಮುದಾಯದ ಕೃಷ್ಣ ಗೊಲ್ಲ , ಹಂದಿಗೊಲ್ಲ ಹಾವು ಗೊಲ್ಲ , ಕರ್ಣಗೊಲ್ಲ ಗಂಗೆತ್ತು ಗೊಲ್ಲ ಪೂಜೆ ಗೊಲ್ಲ , ಹಣಬ ಗೌಳಿ ಗೊಲ್ಲ ಇನ್ನೂ ಅನೇಕ ರೀತಿಯಿಂದ ಕರೆಯಲ್ಪಡುವ ಗೊಲ್ಲ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಅಥವಾ ಯಾದವರಂದು ಪರ್ಯಾಯ ಹೆಸರಿನಲ್ಲಿ ಕರೆಯುವ ನಮ್ಮೆಲ್ಲರನ್ನೂ ನಿರ್ಲಕ್ಷ್ಯ ಮಾಡಿ ಕೇವಲ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶವನ್ನು ಹೊರಡಿಸಿರುವುದು ತಪ್ಪು ನಿರ್ಣಯವಾಗಿದೆ . ಏಕೆಂದರೆ ಉತ್ತರ ಕರ್ನಾಟಕದಲ್ಲಿ ಬಹುತೇಕ ನಮ್ಮ ಜನಾಂಗವು ಕುರಿ , ಆಡು ಮತ್ತು ಪಶುಸಂಗೋಪನ ಮಾಡುತ್ತಾ ಅಲೆಮಾರಿ ( ಕಾಡು ಜೀವನ ) ಜೀವನ ಸಾಗಿಸುತ್ತಿದ್ದಾರೆ * ಹಾವು ಗೊಲ್ಲರು ಹಾವಾಡಿಗರಾಗಿ ಜೀವನ ನಡೆಸುತ್ತಿದ್ದಾರೆ ಗಂಗತ್ತು ಗೊಲ್ಲರು , ಗಂಗತ್ತು ಆಡಿಸಿ ಹೊಟ್ಟೆ ಹೊರೆದುಕೊಳ್ಳುತ್ತಾರೆ ಹಂದಿ ಗೊಲ್ಲರು ಹಂದಿ ಸಾಕಣೆ ಮಾಡುವ ಚಿಂದಿ ಆಯುವ , , , ಮೌಲ ಕಾರ್ಮಿಕ , ಮುಂತಾದ ಕಾಯಕಗಳನ್ನು ಮಾಡುತ್ತಾ ಕಷ್ಟದ ಜೀವನ ನಡೆಸುತ್ತಿದೆ : ನಮ್ಮೆಲ್ಲರನ್ನೂ ಕಡೆಗಣಿಸಿ ನಮ್ಮ ಗೊಲ್ಲ ಜನಾಂಗದ ಉಪಪಂಗಡವಾದ ಕಾಡು ಗೊಲ್ಲರಿಗೆ ಮಾತ್ರ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸರಿಯಾದ ಕ್ರಮವಲ್ಲ ಈ ರೀ ತಿ ಉ.ಪ ಪಂಗಡಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುತ್ತಾ ಹೋದರೆ ನೂರಾರು ನಿಗಮಗಳನ್ನು ಸ್ಥಾಪನೆ ಮಾಡಬೇಕಾಗುತ್ತದೆ ಅಲ್ಲದ ಮತ ರಾಜಕಾರಣಕ್ಕಾಗಿ ಒಂದು ಸಮಾಜವನ್ನು ಒಡೆಯುವುದು ಒಳ್ಳಯ ಸರ್ಕಾರದ ಗುಣಲಕ್ಷಣವಲ್ಲ ಈ ಹಿಂದೆ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯತರನ್ನು ಪ್ರತ್ಯೇಕ ಮಾಡಲು ಹೊರಟಾಗ ಅದನ್ನು ವಿರೋಧಿಸಿದ ನೀವುಗಳೇ ನಮ್ಮಂತಹ ಹಿಂದುಳಿದ ಸಮಾಜವನ್ನು ಒಡೆಯುವುದು ಎಷ್ಟು ಸರಿ ಹಾಗೂ ನಮ್ಮ ಜನಾಂಗದ ಏಕೈಕ ಶಾಸಕರಾದ ಹಿರಿಯೂರಿನ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಯಾದವ ಸಮಾಜದ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಅವರ ಸಲಹೆಯನ್ನು ಕಡೆಗಣಿಸಿ ಗೊಲ್ಲ ಅಭಿವೃದ್ಧಿ ನಿಗಮದ ಬದಲಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಮಾಡಿರುವುದನ್ನು  ಕೊಪ್ಪಳ ಜಿಲ್ಲಾ ಗೊಲ್ಲರ ಸಂಘ ತೀವ್ರವಾಗಿ ಖಂಡಿಸುತ್ತದೆ ಅಲ್ಲದೆ ಬೇರೆ ಬೇರೆ ಪಕ್ಷಗಳಲ್ಲಿದ್ದ ನಮ್ಮ ಜನಾಂಗದ ಬಹುತೇಕರನ್ನು ಕಳದ ಲೋಕಸಭಾ ಮತ್ತು ಇನ್ನಿತರ ಚುನಾವಣೆಗಳಲ್ಲಿ ಬಿಜೆಪಿಯ ಪರವಾಗಿ ಮತ ಚಲಾಯಿಸುವಂತೆ ಪೂರ್ಣಿಮಾ ಮತ್ತು ಡಿ ಟಿ ಶ್ರೀನಿವಾಸ್ ಅವರನ್ನು ಅಷ್ಟು ಬೇಗ ಕಡೆಗಣಿಸಿರುವುದು ರಾಜ್ಯದ ಎಲ್ಲಾ ಗೊಲ್ಲ ಜನಾಂಗಕ್ಕೆ ಆಘಾತವನ್ನುಂಟುಮಾಡಿದೆ ಅಲ್ಲದೆ ರಾಜ್ಯದ ಬೆಂಗಳೂರು ಕೋಲಾರ , ಚಿಕ್ಕಬಳ್ಳಾಪುರ , ಬಳ್ಳಾರಿ , ಬಾಗಲಕೋಟೆ , ಧಾರವಾಡ , ಮಾಡಿದ ಶ್ರೀಮತಿ ಚಿಕ್ಕಮಂಗಳೂರು , ರಾಯಚೂರು , ಬೀದರ್ , ಬೆಳಗಾವಿ , ಕೊಪ್ಪಳ , ಗುಲ್ಬರ್ಗ , ಯಾದಗಿರಿ , ವಿಜಾಪುರ , ಹಾವೇರಿ , ದಾವಣಗೆರೆ ಮುಂತಾದ ಕಡೆ ನಿರ್ಣಾಯಕ ಸಂಖ್ಯೆಯಲ್ಲಿ ಮತದಾರಿದ್ದು ಮಸ್ಕಿ ವಿಧಾನಸಭಾ ಮತ್ತು ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನಲೆಯಲ್ಲಿ ನಮ್ಮ ಜನಾಂಗವನ್ನು ನಿರ್ಲಕ್ಷ್ಯ ಮಾಡಬಾರದೆಂದು ತಿಳಿಸಲು ಇಚ್ಛಿಸುತ್ತೇವೆ ಆದ್ದರಿಂದ ತಕ್ಷಣವೇ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ರದ್ದು ಮಾಡಿ ಸಮಗ್ರ ಗೊಲ್ಲ ಸಮುದಾಯದ ಎಲ್ಲಾ ಉಪಪಂಗಡ ಒಳಗೊಂಡಂತ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಬೇಕು ಇಲ್ಲವೇ ಕಾಡುಗೊಲ್ಲರನ್ನು ಹೊರತುಪಡಿಸಿ ಇತರ ಎಲ್ಲಾ ಗೊಲ್ಲರ ಅನುಕೂಲಕ್ಕಾಗಿ ಪ್ರತ್ಯೇಕ ಗೊಲ್ಲ ಅಭಿವೃದ್ಧಿ ನಿಗಮ ಮಾಡಿ ತಕ್ಷಣ ಆದೇಶ ಹೊರಡಿಸಬೇಕೆಂದು ಕೊಪ್ಪಳ ಜಿಲ್ಲೆಯ ಗೊಲ್ಲ ಜನಾಂಗದ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ . ಇಲ್ಲವಾದರೆ ನಮ್ಮ ಜನಾಂಗದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಯಾದವ ಸಂಘ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಇವರ ನೇತೃತ್ವದಲ್ಲಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಗೊಲ್ಲ ಸಮಾಜದ ವತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ತಿಳಿಸಲು ಇಚ್ಛಿಸುತ್ತೇವೆ . ಅನುಭವಿಗಳು ಹಿರಿಯರು ಆದ ತಾವುಗಳು ನಮ್ಮ ಬೇಡಿಕೆಯನ್ನು ತಕ್ಷಣವೇ ಪೂರೈಸುತ್ತೀರಿ ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ  ಜಗನ್ನಾಥ್ ಹುಲಿಗೆ ಪ್ರಣವಾನಂದ ಗಂಗಾವತಿ ಯಮನೂರು ಕುಷ್ಟಗಿ ಹನಿಮೇಶ್ ಕುಷ್ಟಗಿ ಮಾರುತಿ ಕಟಗಾಲಿ ವೆಂಕಣ್ಣ ಬಂಡ್ಲಿ ಮಾರುತಿ ಹಣ ಪ್ರಾಣೇಶ್ ಪೂಜಾರ್ ಕುರುಗೋಡ ರವಿ ಉಪಸ್ಥಿತರಿದ್ದರು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Please follow and like us:
error