ಗುಡ್ ನ್ಯೂಸ್ : ಕೊಪ್ಪಳದಲ್ಲಿ ಗುಣಮುಖರಾದ ೧೫ ಜನ ಡಿಸ್ಚಾರ್ಜ್

ಕೊಪ್ಪಳ : ಪಕ್ಕದ ಬಳ್ಳಾರಿ ಜಿಲ್ಲೆಯ ಸಾವು ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಮಾಧಾನಕರ ಸುದ್ದಿ ಬಂದಿದೆ. ಇಂದು‌ 15 ಜನ ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಬಿಡುಗಡೆ ಮಾಡಲಾಗಿದೆ. ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇದುವರೆಗೆ ಜಿಲ್ಲೆಯಲ್ಲಿ 84 ಸೋಂಕಿತರ ಪೈಕಿ ಓರ್ವ ಮಹಿಳೆ ಸಾವು, 47 ಜನ ಸೋಂಕಿತರಿಗೆ ಚಿಕಿತ್ಸೆ, 36 ಜನರ ಬಿಡುಗಡೆಯಾಗಿದೆ.

ಕೆಪಿಎಲ್ -13-ಪಿ -6192, ಕೆಪಿಎಲ್ -23-ಪಿ -8053 , ಕೆಪಿಎಲ್ -24-ಪಿ -8054, ಕೆಪಿಎಲ್ -25-ಪಿ- 8055, ಕೆಪಿಎಲ್ -26-ಪಿ -8056, ಕೆಪಿಎಲ್ -27-ಪಿ -8057, ಕೆಪಿಎಲ್ -29-ಪಿ -9366, ಕೆಪಿಎಲ್ -30-ಪಿ -9702. ಕೆಪಿಎಲ್ -31-ಪಿ- 9703, ಕೆಪಿಎಲ್ -33-ಪಿ -9705, ಕೆಪಿಎಲ್ -34-ಪಿ -9808, ಕೆಪಿಎಲ್ -35-ಪಿ -9809, ಕೆಪಿಎಲ್ -36-ಪಿ -9810, ಕೆಪಿಎಲ್ -38-ಪಿ- 9812, ಬಿಎಲ್ಆರ್- 373-ಪಿ -8365 ಸೋಂಕು ಮುಕ್ತರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಎಸ್. ದಾನರಡ್ಡಿ ಮಾಹಿತಿ ನೀಡಿದ್ದಾರೆ

Please follow and like us:
error