
ದೇಶದಲ್ಲಿ ರಾಮನಷ್ಟೇ ಹನುಮನ ಭಕ್ತರು ಇದ್ದಾರೆ : ವಜುಬಾಯಿ
ಕೊಪ್ಪಳ : ದೇಶದಲ್ಲಿ ಪ್ರಭು ಶ್ರೀರಾಮನಷ್ಟೇ, ಹನುಮನ ಭಕ್ತರು ಇದ್ದಾರೆ. ನಮೇಲ್ಲರ ಆದರ್ಶ ಪುರುಷ ಶ್ರೀರಾಮನಾದರೆ, ಫಲಾಪೇಕ್ಷೆಯಿಲ್ಲದ ಸೇವೆ ಮಾಡುವುದು ಹನುಮಾನಜೀಯ ಗುಣಾದರ್ಶಗಳಾಗಿವೆ ಎಂದು ರಾಜ್ಯಪಾಲ ವಜುಬಾಯಿವಾಲಾ ಹೇಳಿದರು. ಅವರು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸಮಿಪದ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟದಲ್ಲಿ ಶಿಲೆ, ಮೃತ್ತಿಕೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು. ಹನುಮನ ಜನ್ಮಸ್ಥಳ ರಾಮನ ಮಂದಿರಕ್ಕೆ ಸಮಾನವಾಗಿದ್ದು, ನಿತ್ಯ ಕೋಟ್ಯಾಂತರ ಭಕ್ತರು ಪೂಜೆ ಸಲ್ಲಿಸುತ್ತಾರೆ. ಈ ಸ್ಥಳವು ಉನ್ನತ ಮಟ್ಟದಲ್ಲಿ ಅಭಿವೃದ್ದಿಗೊಳ್ಳಬೇಕಾಗಿದೆ. ಸರ್ಕಾರ ಎಲ್ಲವೂ ಸಕರಾತ್ಮಕವಾಗಿ ಕೈಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇಡೀ ವಿಶ್ವವೇ ತಿರುಗಿ ನೋಡಲಿದೆ. ದೇವಸ್ಥಾನದ ಅಭಿವೃದ್ದಿಗೆ ಕೆಲ ನಿರ್ಬಂಧಗಳಿದ್ದು, ಸರ್ಕಾರ ಇದನೆಲ್ಲ ಸರಿಪಡಿಸಲಿದೆ.
ಗುಜರಾತಿನ ಆನಂದÀ ಜಿಲ್ಲೆಯ ಲಂಬಾವೇಲದಲ್ಲಿ ಐದು ನೂರು ವರ್ಷದ ಪುರಾತನ ದೇವಸ್ಥಾನವಿದ್ದು, ಅದರ ಜಿರ್ಣೋದ್ಧಾರ ಕಾರ್ಯ ಮಾಡಲಾಗುತ್ತಿದೆ. ಈ ಭಾಗದಲ್ಲಿ ಅಂಜನಾದ್ರಿ ಜನ್ಮ ಸ್ಥಳವು ಅತ್ಯಂತ ಶ್ರದ್ದಾ ಕೇಂದ್ರವಾಗಿದ್ದು, ಹನುಮನ ಜನ್ಮ ಸ್ಥಳ ಕಿಷ್ಕಿಂದೆಯ ಶಿಲೆಯನ್ನು ಒಯ್ಯಲು ಆಗಮಿಸಿರುವುದಾಗಿ ತಿಳಿಸಿದರು.
ವಿಶೇಷ ಪೂಜೆ:
೫೨೫ ಮೆಟ್ಟಿಗಳನ್ನು ಹತ್ತುವುದು ಕಷ್ಟವಾಗಿದ್ದರಿಂದ ಬೆಟ್ಟದ ಕೆಳಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಲು ಸಿದ್ದತೆಯನ್ನು ದೇವಸ್ಥಾನ ಆಡಳಿತ ಮಂಡಳಿ ಆಯೋಜಿಸಿತ್ತು. ಇಲ್ಲಿಂದಲೇ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ವಿದ್ಯಾದಾಸ ಬಾಬಾ ಮಾರ್ಗದರ್ಶನದಲ್ಲಿ ಅರ್ಚಕರಿಂದ ಕಿಷ್ಕಿಂದೆಯ ಶಿಲೆಗಳಿಗೆ ಜೈಶ್ರೀರಾಮ ಎಂತ ಬರೆಯಲಾಗಿದ್ದು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿಯವರು ಶಿಲೆಯನ್ನು ರಾಜಪಾಲ ವಜುವಾಯಿವಾಲಾ ಅವರಿಗೆ ಹಸ್ತಾಂತರಿಸಿದರು.
ಈ ವೇಳೆಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಕಾಡಾಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ಸಂತೋಷ ಕೇಲೋಜಿ ಜಿಲ್ಲಾಧಿಕಾರಿ ಕೊಶೋರ್ ವಿಕಾಸ್ ಸುರಳ್ಕರ್, ಎಸ್ಪಿ ಟಿ.ಶ್ರೀಧರ್, ದೇವಸ್ಥಾನದ ಅರ್ಚಕ ವಿದ್ಯಾದಾಸಬಾಬಾ ಸೇರಿದಂತೆ ಇನ್ನಿತರಿದ್ದರು.