Koppal ಗಿಣಿಗೇರಾ ಕೆರೆ ಅಭಿವೃದ್ಧಿಗೆ ೧೦ ಲಕ್ಷ ನೀಡುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಘೋಷಣೆ ಮಾಡಿದರು. ಕೆರೆಯ ಅಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು

ಕೆರೆಯ ಅಭಿವೃದ್ಧಿ ಯೋಜನೆಯಲ್ಲಿ ಜಾಕವೆಲ್ ನ ತೊಂದರೆಯ ಬಗ್ಗೆ ಈಗಾಗಲೇ ಸಂಬಂದಿಸಿ ಅಧಿಕಾರಿಗಳ , ಸಚಿವರ ಗಮನ ಸೆಳೆಯಲಾಗಿದೆ. ಆದಷ್ಟು ಶೀಘ್ರ ಈ ತೊಂದರೆ ಸರಿಪಡಿಸಲಾಗುವುದು. ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ನೀರು ತುಂಬಿಸಲಾಗುತ್ತಿದೆ. ಆದರೆ ಇದರ ಅಭಿವೃದ್ಧಿ ಆದರೆ ಎಲ್ಲರಿಗೂ ಅನುಕೂಲವಾಗುತ್ತೆ. ಕೆರೆಯ ಅಭಿವೃದ್ಧಿ ಗೆ ೧೦ ಲಕ್ಷ ದೇಣಿಗೆ ನೀಡುತ್ತೇನೆ. ಈ ಮಹತ್ಕಾರ್ಯ ಪೂರ್ಣಗೊಳಿಸಲು ಗಿಣಿಗೇರಿಯವರೇ ಸಾಕು , ಅವರು ಅಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಕೆರೆ ಅಭಿವೃದ್ಧಿ ಗೊಳಿಸೋಣ. ಇದಕ್ಕಾಗಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಹಿಟ್ನಾಳ ೩ ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.
Please follow and like us: