ಗಾನ ಗಾರುಡಿಗನಿಗೆ ಕಲಾವಿದರಿಂದ ಭಾವಪೂರ್ಣ ಶ್ರದ್ದಾಂಜಲಿ

Kannadanet ಕೊಪ್ಪಳ : ಇಂದು ನಿಧನರಾದ ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರಿಗೆ ಕೊಪ್ಪಳದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೊಪ್ಪಳದ ಆಶೋಕ ಸರ್ಕಲ್ ನಲ್ಲಿ ಕ್ಯಾಂಡಲ್ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೊಪ್ಪಳದ ವಿವಿಧ ಸಂಘಟನೆ ಹಾಗೂ ಅಭಿಮಾನಿಗಳಿಂದ ಸಂತಾಪ ವ್ಯಕ್ತಪಡಿಸಿದರು.ನಗರದ ಅಖಿಲ ಕರ್ನಾಟಕ ಲಘುಸಂಗೀತ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಲಾವಿದರಿಂದ ಕ್ಯಾಂಡೆಲ್ ಬೆಳಗಿಸಿ ಅಂತಿಮ ನಮನ ಸಲ್ಲಿಸಲಾಯಿತು

ಕೊಪ್ಪಳದ ಆಶೋಕ‌ ವೃತ್ತದಲ್ಲಿ ಎಸ್ ಪಿ ಬಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಅವರ ಹಾಡುಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಮೂಲಕ ಗೌರವ . ಹಿರಿಯ ಕಲಾವಿದರಾದ ಹೇಮಂತಕುಮಾರ ಹಾಗೂ ಭಾಷಾ ಹಿರೇಮನಿ , ಸಲಿಂ ಅಳವಂಡಿ ಇತರರು ಭಾಗಿಯಾಗಿದ್ದರು.

Please follow and like us:
error