ಗವಿಶ್ರೀಗಳಿಂದ ಜನಾದೇಶ ವಾಣಿ ಪತ್ರಿಕೆ ಲೋಕಾರ್ಪಣೆ

ಕೊಪ್ಪಳ : ಜನಾದೇಶ ವಾಣಿ ಶಿರ್ಷಿಕೆಯಡಿ ವೆಬ್ ಪೋರ್ಟಲ್ ಹಾಗೂ ಮಾಸ ಪತ್ರಿಕೆಯ ಲೋಕಾರ್ಪಣೆಯಾಗಿದೆ. ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು, ಜನರ ಮನ ಪರಿವರ್ತನೆಗೆ ಜನಾದೇಶ ವಾಣಿ ನಿರಂತರವಾಗಿರಲಿ ಎಂದರು. ಅಲ್ಲದೇ, ಸಮಾಜ ಪರಿವರ್ತನೆಗೆ ಜನಾದೇಶ ವಾಣಿ ಪತ್ರಿಕೆ ದಾಪುಗಾಲಿಡಲಿ ಎಂದು ಶ್ರೀಗಳು ಹಾರೈಸಿದರು.

ಹಲವು ದಿನಗಳು ಕಂಡ ಕನಸ್ಸನ್ನು ನನಸ್ಸು ಮಾಡಿಕೊಳ್ಳುವತ್ತಾ ಪತ್ರಕರ್ತ ಮಲ್ಲೇಶ್ ಪರೂತಿ ಅವರು ಮುಂದಡಿ ಇಟ್ಟಿದ್ದು, ಇಂದು ಇವರದೇ ಸಂಪಾದಕತ್ವದಲ್ಲಿ ಜನಾದೇಶ ವಾಣಿ ಹೊರ ತಂದಿದ್ದಾರೆ. ಇದು ರಾಜ್ಯ, ರಾಷ್ಟ್ರ ಮತ್ತು ಅಂರ‍್ರಾಷ್ಟ್ರೀಯ ಮಟ್ಟದ ಚಿಂತಕರ, ಪರಿಣಿತರ, ಬರಹಗಾರರ, ಪತ್ರಕರ್ತರ ವೈವಿಧ್ಯಮಯ ಅಭಿಪ್ರಾಯಗಳಿಗೆ ವೇದಿಕೆಯಾಗಿರುತ್ತದೆ. ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವಿಜ್ಙಾನ-ತಂತ್ರಜ್ಙಾನ ಇತ್ಯಾದಿ ವಿಷಯಗಳ ಕುರಿತು ವಿಶ್ಲೇಷಣಾತ್ಮಕ ಲೇಖನಗಳಿಗೂ ಇದೊಂದು ತಾಣವಾಗಲಿದೆ. ಕತೆ, ಕವಿತೆ, ಸಿನಿಮಾ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿ ಅಥವಾ ಅವುಗಳ ವಿಮರ್ಶೆಗೂ ಇದು ತೆರೆದಿರುತ್ತದೆ.

ಸರಕಾರಗಳ, ಆಳುವವರ ದಮನಕಾರಿ ನೀತಿಗಳಿಗೆ ಪ್ರತಿರೋಧ ಒಡ್ಡುತ್ತಿರುವ ರೈತ, ಕೂಲಿಕಾರ, ಕಾರ್ಮಿಕ, ಮಹಿಳೆ, ವಿದ್ಯಾರ್ಥಿ, ಯುವಜನರ, ಎಲ್ಲ ಜನರ ಚಳುವಳಿಗಳ ವರದಿಗಳಿಗೆ ಇಲ್ಲಿ ವಿಶೇಷ ಅವಕಾಶಗಳಿರುತ್ತವೆ ಎಂದು ಸಂಪಾದಕ ಮಲ್ಲೇಶ್ ಪರೂತಿ ಹೇಳಿದ್ದಾರೆ.

Please follow and like us:
error