You are here
Home > ಕರ್ನಾಟಕ > ಗದಗ > ವೀರ ಮರಣವನ್ನಪ್ಪಿದ ಭಾರತದ ಸೈನಿಕರಿಗೆ ಶ್ರದ್ದಾಂಜಲಿ

ವೀರ ಮರಣವನ್ನಪ್ಪಿದ ಭಾರತದ ಸೈನಿಕರಿಗೆ ಶ್ರದ್ದಾಂಜಲಿ

ಗದಗ -ಇತ್ತೀಚೆಗೆ ಪಾಕಿಸ್ತಾನ ಸೈನಿಕರೊಂದಿಗೆ ನಡೆದ ಕಾಳಗದಲ್ಲಿ ವೀರಮರಣವನ್ನಪ್ಪಿದ ಭಾರತ ದೇಶದ ೧೬ ಸೈನಿಕರ ಆತ್ಮಕ್ಕೆ ಕನ್ನಡ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಸಾಮೂಹಿಕವಾಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಒಕ್ಕೂಟದ ಪರವಾಗಿ ಸಯ್ಯದ ಖಾಲೀದ ಕೊಪ್ಪಳ ಮಾತನಾಡಿ, ದೇಶದ ಗಡಿ ಕಾಯುವದರೊಂದಿಗೆ ದೇಶ ಸೇವೆ ಮಾಡಿದ ಯೋದರ ಸ್ಮರಣೀಯವಾಗಿದೆ, ಯುವ ಸಮುದಾಯ ವೀರ ಯೋದರ ಮೆರೆದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಮುಂದಾಗಲಿ. ದೇಶಕ್ಕೆ ಸೇವೆ ಸವಿದು ಅಮರರಾದ ಯೋದರ ಕುಟಂಬಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದರು. ಬೂದೇಶ ಬ್ಯಾಹಟ್ಟಿ ಮಾತನಾಡಿ, ಸಮುದಾಯದಲ್ಲಿ ಸೈನಿಕರಿಗೆ ಅಪಾರವಾದ ಗೌರವವಿದೆ, ಅವರು ಹಗಲು ರಾತ್ರಿ ಸೇವೆಯನ್ನು ಸಲ್ಲಿಸುತ್ತಿರುವ ಹಿನ್ನಲೆಯಲ್ಲಿ, ಜನತೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಸೈನಿಕ ವರ್ಗ ಇಲ್ಲದಿದ್ದರೇ ಸಮುದಾಯದಲ್ಲಿ ಅಶಾಂತಿ ತಲೆದೋರಿ ಕಾನೂನು ವ್ಯವಸ್ಥ್ಯೆ ಹದಗೆಡುತ್ತಿತ್ತು ಎಂದು ಹೇಳಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗಣೇಶ ಹುಬ್ದಳ್ಳಿ, ರಾಘು ಪರಾಪೂರ, ನಾಗರಾಜ ವಡ್ಡರ, ಕಲ್ಮೇಶ ವಡ್ಡಿನ, ಹುಲ್ಲೇಶ ಭಜಂತ್ರಿ, ಸಲೀಂ ಸಿದ್ದಿ, ದಾದೂ ಮುಂಡರಗಿ, ಮಂಜುನಾಥ ಫಜಲ್, ಹೇಮಂತ ಹುಬ್ಬಳ್ಳಿ, ಪರಶುರಾಮ, ಮೈಲಾರೆಪ್ಪ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Top