You are here
Home > Koppal News-1 > koppal news > ಕೈಗೆ ಹಗ್ಗ ಕಟ್ಟಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಕೈಗೆ ಹಗ್ಗ ಕಟ್ಟಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಗದಗ – ಕಾವೇರಿ ಜಲವಿವಾದ ಕುರಿತು ಸುಪ್ರಿಂಕೊರ್ಟ ನೀಡಿರುವ ಹೊಸ ತೀರ್ಪನ್ನು ಖಂಡಿಸಿ ಕನ್ನಡ, ದಲಿತಪರ ಹಾಗೂ ರೈತ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

????????????????????????????????????

????????????????????????????????????

ಬುಧವಾರ ಸಂಘಟನೆಗಳು ನಗರದ ಮದ್ಯದಲ್ಲಿರುವ ಗಾಂಧಿ ವರ್ತುಲದಲ್ಲಿ ಕೈಗೆ ಹಗ್ಗ ಕಟ್ಟಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ನಡೆಸಿ, ತಾಪಂ ಆವರಣದಲ್ಲಿರುವ ನೀರಿನ ಟ್ಯಾಂಕ್ ಹತ್ತುವದರೊಂದಿಗೆ ಹಾಗೂ ಮಹಾತ್ಮ ಗಾಂಧೀಜಿ ಅವರ ಪ್ರಮುಖ ಮೂರು ತತ್ವಗಳಾದ ಕೆಟ್ಟದನ್ನು ಕೇಳಬಾರದು, ನೋಡಬಾರದು ಹಾಗೂ ಮಾತುನಾಡಬಾರದು ಎಂಬುದನ್ನು ಪ್ರಾಯೋಗಿಕವಾಗಿ ತೋರುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಕನ್ನಡ ಹಾಗೂ ದಲಿತಪರ ಸಂಘಟನೆಯ ಸದಸ್ಯ ಸಯ್ಯದ ಖಾಲೀದ ಕೊಪ್ಪಳ ಮಾತನಾಡಿ, ಕಾವೇರಿಯ ವಿಷಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಸಿಎಂ ಸಿದ್ದರಾಮಯ್ಯ ರಾಜಕೀಯ ಮಾಡದೇ ರೈತರಿಗೆ ನೀರು ಕೊಡಿಸುವ ಹಿನ್ನಲೆಯಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ರೈತ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ. ಕೇಂದ್ರ ಸರಕಾರ ಕೇಂದ್ರದ ಸಮಿತಿ ಕಳಿಸಿ ರಾಜ್ಯದ ಜಲ ಪರಿಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಲಿ. ನಂತರದಲ್ಲಿ ಈ ಜಲ ವಿವಾದ ಬಗೆಹರಿಸುವಲ್ಲಿ ಮದ್ಯಸ್ಥಿಕೆ ವಹಿಸಲಿ ಎಂದು ಒತ್ತಾಯಿಸಿದರು. ಕನ್ನಡ ಹಾಗೂ ದಲಿತಪರ ಸಂಘಟನೆಯ ಸದಸ್ಯ ಚಂದ್ರಕಾಂತ ಚವ್ಹಾಣ ಮಾತನಾಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾವೇರಿ ಜಲವಿವಾದ ಕುರಿತು ವಾದ ಮಂಡಿಸುತ್ತಿರುವ ನಾರಿಮನ್ ವಜಾಕ್ಕೆ ಆಗ್ರಹಿಸಿದರು. ಕನ್ನಡಿಗರ ತಾಳ್ಮೆ ಪರೀಕ್ಷಿಸಲು ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು. ರೈತ ಮುಖಂಡ ಶಾಂತಸ್ವಾಮಿಮಠ ಮಾತನಾಡಿ, ರಾಜ್ಯದಲ್ಲಿ ಬರಗಾಲ ಬಿದ್ದು ಸಾಲದ ಒತ್ತಡದಿಂದ ಆತ್ಮಹತ್ಯಗೆ ಶರಣಾಗಿದ್ದಾರೆ. ಅವರ ಪರಿವಾರಕ್ಕೆ ಪರಿಹಾರ ನೀಡಲು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜೈಬೀಮ ಸೇನಾ ಜಿಲ್ಲಾದ್ಯಕ್ಷ ಗಣೇಶ ಹುಬ್ಬಳ್ಳಿ, ಕನ್ನಡ ಜನಾಬಿವೃದ್ದಿ ವೇದಿಕೆ ಅದ್ಯಕ್ಷ ಹುಲ್ಲೇಶ ಭಜಂತ್ರಿ, ಕರವೇ ಶಿವರಾಮೆಗೌಡ ಬಣದ ಜಿಲ್ಲಾದ್ಯಕ್ಷ ಬೂದೇಶ ಬ್ಯಾಹಟ್ಟಿ, ಮುಖಂಡ ರಾಘು ಪರಾಪೂರ, ಬಸವರಾಜ ಗಡ್ಡೆಪ್ಪನವರ, ಎಂ.ಎಸ್.ಪರ್ವತಗೌಡರ, ಎಸ್.ಎಸ್.ರಡ್ಡೇರ, ಪೂಜಾ ಬೇವೂರ, ಎನ್.ಕೆ.ಕೊರ್ಲಹಳ್ಳಿ, ಭೂಸನೂರಮಠ, ನಾಗರಾಜ ವಡ್ಡರ, ಹಿರೇಮಠ, ರವಿ ವಗ್ಗನವರ, ನವ ನಿರ್ಮಾಣ ಸೇನೆ ಜಿಲ್ಲಾದ್ಯಕ್ಷ ಕಲ್ಮೇಶ ವಡ್ಡಿನ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

Leave a Reply

Top