ಕರೋನಾ ನಿಯಂತ್ರಣ:  ಕಾಯ್ದಿರಿಸಿದ ನಿಧಿ ಬಳಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಗದಗ  : ಜಿಲ್ಲೆಯಲ್ಲಿ ದಿನನಿತ್ಯ ಸುಮಾರು ೪೦೦ ರಿಂದ ೫೦೦ ರೋಗಿಗಳು ಕರೋನಾ ೨ ನೇ ಅಲೆಯಿಂದ ನರಳಾಡುತ್ತಿದ್ದು ಸಮರ್ಪಕ ವೆಂಟಿಲೇಟರ್ ಹಾಗೂ ಆಕ್ಸಿಜನ್  ಸಿಗದೇ ತೊಂದರೆಗಿಡಾಗಿ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದು ಸರ್ಕಾರ ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಸೈಯದ್ ಖಾಲೀದ್ ಕೊಪ್ಪಳ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಗದಗ ಜಿಲ್ಲಾಧಿಕಾರಿಗಳಿಗರ ಮನವಿ ಸಲ್ಲಿಸಿ ಮಾತನಾಡಿದ ಅವರು ಎಲ್ಲ ಇಲಾಖೆಯ ಕಾಯ್ದಿರಿಸಿದ ನಿಧಿಯನ್ನು ಕರೋನಾ ನಿಯಂತ್ರಣ ಮಾಡುವುದಕ್ಕೆ ಖರ್ಚು ಮಾಡುವಂತೆ ಅವರು ಒತ್ತಾಯಿಸಿದರು.
ಸಚಿವರು, ಶಾಸಕರು ನಗರಸಭೆ ಸೇರಿದಂತೆ ತಾಲೂಕು, ಜಿಲ್ಲಾ ಪಂಚಾಯತ ಇಲಾಖೆಯ ಕಾಯ್ದಿರಿಸಿದ ನಿಧಿ ಬಳಕೆಗೆ ಮುಂದಾಗುವಂತೆ ಆಗ್ರಹಿಸಿದರು.
ಈಗಾಗಲೇ ಮಾಹಿತಿ ಪ್ರಕಾರ ನಗರಸಭೆ ಒಂದರಲ್ಲಿ ೯ ಕೋಟಿ ರೂಪಾಯಿ ಕಾಯ್ದಿರಿಸಿದ ನಿಧಿಯಿರುವ ಬಗ್ಗೆ ಮಾಹಿತಿಯಿದ್ದ ಇದನ್ನು ಸಮರ್ಪಕವಾಗಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಖರೀದಿ ಮಾಡಲು ವ್ಯಯಿಸಿದರೆ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
Please follow and like us:
error