ಕಪ್ಪತಗಿರಿ ಸಂರಕ್ಷಣೆಗಾಗಿ ಕೈಯಲ್ಲಿ ಸಸಿ ಹಿಡಿದು ರಸ್ತೆ ತಡೆ ನಡೆಸಿ ವಿನೂತನ ಪ್ರತಿಭಟನೆ

khalid-syed-gadag
ಗದಗ ; ಉತ್ತರ ಕರ್ನಾಟಕದ ಸಹ್ಯಾದ್ರಿಯಾಗಿ ಆಯುರ್ವೇದ ಔಷಧಿಗಳಿಗೆ ಆಶ್ರಯ ತಾಣವಾದ ಕಪ್ಪತಗಿರಿಗೆ ಸಂರಕ್ಷಣ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದ ಗಾಂಧಿ ವರ್ತುಲದಲ್ಲಿ ಕೈಯಲ್ಲಿ ಸಸಿಗಳನ್ನು ಹಿಡಿದು ರಕ್ಷಣೆ ನೀಡಿ ಎಂದು ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಕೆಲ ಸಮಯ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಗದಗ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗೆ ಮನವಿಯೊಂದಿಗೆ ಸಸಿ ನೀಡಿ ಆಗ್ರಹಿಸಿದರು.
ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಸಂಸ್ಥಾಪಕ ಅದ್ಯಕ್ಷ ಸಯ್ಯದ ಖಾಲೀದ ಕೊಪ್ಪಳ ಮಾತನಾಡಿ, ಮೊದಲು ಕಪ್ಪತಗಿರಿಯ ಮೋಡ ಕವಿದರೇ ಮಳೆ ಗ್ಯಾರಂಟಿ ಎನ್ನುವ ಭಾವನೆ ರೈತರಾಗಿತ್ತು. ಆದರೆ ಇದೀಗ ದುಷ್ಕರ್ಮಿಗಳ ಕಾಟದಿಂದ ಮಳೆಯಾಗದೇ ಕಪ್ಪತಗುಡ್ಡ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಕಪ್ಪತಗಿರಿಯಲ್ಲಿ ಅದಿರು, ಚಿನ್ನ ಅಮೂಲ್ಯ ಸಸ್ಯ ಸಂಪತ್ತಿಗೆ ರಕ್ಷಣೆಯ ಅವಶ್ಯಕತೆಯಿದೆ. ಆ ಹಿನ್ನಲೆಯಲ್ಲಿ ರಾಜ್ಯ ಸರಕಾರ ಸಾರ್ವಜನಿಕರ ಅಬಿಪ್ರಾಯ ಸಂಗ್ರಹಿಸದೇ ಸರಂಕ್ಷಣಾ ಸ್ಥಾನಮಾನ ನೀಡಿದ್ದರು. ಆದರೆ ಈಗ ಕೆಲವು ಉದ್ದಿಮೆದಾರರ ಒತ್ತಡಕ್ಕೆ ಮಣಿದು ಈ ಆದೇಶವನ್ನು ಹಿಂಪಡೆದಿರುವ ಸಂಶಯ ಕಾಡುತ್ತಿದೆ. ಗಿರಿಗೆ ಸಂರಕ್ಷಣಾ ಸ್ಥಾನಮಾನ ನೀಡಲು ಕನ್ನಡದ ಜಗದ್ಗುರು ಸಿದ್ದಲಿಂಗ ಸ್ವಾಮಿಜಿ ಜಾಗೃತಿ ಅಬಿಯಾನ ಮೂಡಿಸಿರುವುದಕ್ಕೆ ವೇದಿಕೆಯ ವತಿಯಿಂದ ಅಬಿನಂದಿಸಿ ಬೆಂಬಲಿಸಲಾಗುವದು. ಅಲ್ಲದೇ ೧೫ ದಿನಗಳ ಒಳಗಾಗಿ ಕಪ್ಪತಗಿರಿಗೆ ಸಂರಕ್ಷಣೆ ಸ್ಥಾನಮಾನ ನೀಡದಿದ್ದರೇ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಕಪ್ಪತಗಿರಿಯಲ್ಲಿಯೇ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದರು.
ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾದ್ಯಕ್ಷ ಎಸ್.ಎಸ್.ರಡ್ಡೆರ ಮಾತನಾಡಿ,ರಾಜ್ಯ ಸರಕಾರ ನಿಸರ್ಗದ ಸಂಪತ್ತನ್ನು ಉಳಿಸುವ ಕಾರ್ಯ ಮಾಡಬೇಕು. ಕಪ್ಪತಗಿರಿಯ ಪರಿಸರದ ಪ್ರಭಾವದಿಂದಾಗಿಯೇ ಗದಗ ಜಿಲ್ಲೆಯ ಜನತೆ ಉತ್ತಮವಾದ ಆರೋಗ್ಯವನ್ನು ಹೊಂದಿದೆ. ರೈತ ಬಾಂದವರಿಗೆ ಕೃಷಿ ಚಟುವಟೀಕೆಗಳನ್ನು ಕೈಗೊಳ್ಳಲು ಅದು ಮುನ್ಸೂಚನೆ ನೀಡುತ್ತಿದೆ. ಕಪ್ಪತಗಿರಿಗೆ ಸಂರಕ್ಷಣ ಸ್ಥಾನಮಾನ ನೀಡಿದರೇ ಉತ್ತರ ಕರ್ನಾಟಕದ ಜನರಿಗೆ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.
ದಲಿತ ಮುಖಂಡ ಗಣೇಶ ಹುಬ್ಬಳ್ಳಿ ಮಾತನಾಡಿ, ಕಪ್ಪತಗಿರಿಗೆ ಸಂರಕ್ಷಣ ಸ್ಥಾನಮಾನ ನೀಡುವರೆಗೂ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಬದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಶ್ರೀಮತಿ ಶಕುಂತಲಾ ಗಂಗಾವತಿ, ದಲಿತ ಮುಖಂಡ ರಾಘವೇಂದ್ರ ಪರಾಪೂರ, ವೇದಿಕೆಯ ಅಲ್ಪಸಂಖ್ಯಾತ ರಾಜ್ಯಾದ್ಯಕ್ಷ ಎಂ.ಪಿ.ಮುಳಗುಂದ, ರಾಜ್ಯ ಉಪಾದ್ಯಕ್ಷ ಅಕ್ಬರಲಿ ಬೇಗ, ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸೀರ ಮುಳಗುಂದ, ಸಮೀರ ಮುಳಗುಂದ, ಇರ್ಫಾನ ಕರಮುಡಿ, ರವಿ ವಗ್ಗನವರ, ದಾದು ಮುಂಡರಗಿ, ಲಲಿತಾ ಹಡಪದ, ಅಂಜದ ನದಾಪ, ಚಾಂದಸಾಬ ಜಕ್ಕನಿ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

Please follow and like us:
error